ವಿದ್ಯಾರ್ಥಿ ಪಾಸ್

ಇ-ಫಾರ್ಮ್ ಮೂಲಕ ವಿದ್ಯಾರ್ಥಿ ಪಾಸಿಗೆ ಅರ್ಜಿ ಸಲ್ಲಿಸಲು:ಇಲ್ಲಿ ಕ್ಲಿಕ್ ಮಾಡಿ  

ವಿದ್ಯಾರ್ಥಿ ಪಾಸಿನ ಸ್ಥಿತಿಯನ್ನು ತಿಳಿಯಲು :ಇಲ್ಲಿ ಕ್ಲಿಕ್ ಮಾಡಿ    

 

ವಿದ್ಯಾರ್ಥಿರಿಯಾಯಿತಿ ಪಾಸುಗಳ ವಿತರಣಾ ಕ್ರಮ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ದೇಶನದಂತೆ ಸಂಸ್ಥೆಯು ರಚನೆಯಾದಗಿನಿಂದಲೂ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಪಾಸುಗಳನ್ನು ವಿತರಣೆ ಮಾಡಿಕೊಂಡು ಬರುತ್ತಿದೆ. ಸದರಿ ಪಾಸುಗಳನ್ನು ಪೂರ್ವ ಮುದ್ರಿತ ಕಾರ್ಡ್ಗಳ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಆದರೆ 2018-19 ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿರಿಯಾಯಿತಿ ಪಾಸುಗಳನ್ನು ಸ್ಮಾರ್ಟ್ಕಾರ್ಡ್ ಮಾದರಿಯಲ್ಲಿ ಶಾಲಾ/ಕಾಲೇಜಿನ ಮುಖಾಂತರ ವಿತರಣೆ ಮಾಡಲು ಉದ್ದೇಶಿಸಿರುತ್ತದೆ.

 

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಪಾಸುಗಳ ಅರ್ಜಿ ಸಲ್ಲಿಸುವ ಮತ್ತು ಪಾಸು ವಿತರಣೆಯ ವಿವರ.

 1. ವಿದ್ಯಾರ್ಥಿಗಳ ಪಾತ್ರ :-
 • 1 ರಿಂದ 7 ನೇ ತರಗತಿಯವರೆಗೆ: ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಇಚ್ಛಿಸಿದ್ದಲ್ಲಿ ಶಾಲೆಯಲ್ಲಿ ತಿಳಿಸುವುದು ಹಾಗೂ ಪಾಸಿನ ಮೊತ್ತವಾದ ರೂ.150/- ನ್ನು ಶಾಲೆಯಲ್ಲಿ ಪಾವತಿಸುವುದು.
 • 8ನೇ ತರಗತಿಯಿಂದ ರಿಂದ 10ನೇ ತರಗತಿಯವರೆಗೆ : ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಇಚ್ಛಿಸಿದ್ದಲ್ಲಿ ಶಾಲೆಯಲ್ಲಿ ತಿಳಿಸುವುದು ಹಾಗೂ ನಿಗಧಿತ ಪಾಸಿನ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸುವುದು.
 • ಪಿ.ಯು.ಸಿ : ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಲು ಇಚ್ಛಿಸಿದ್ದಲ್ಲಿ ಕಾಲೇಜಿನಲ್ಲಿ ತಿಳಿಸುವುದು ಹಾಗೂ ನಿಗಧಿತ ಪಾಸಿನ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸುವುದು.

 

 1. ಶಾಲೆಯ/ಕಾಲೇಜಿನ  ನೋಡಲ್ ಅಧಿಕಾರಿಯ ಪಾತ್ರ :
 • ಪಾಸನ್ನು ಪಡೆಯಲು ಇಚ್ಛೆ ನೀಡಿದ ವಿದ್ಯಾರ್ಥಿಗಳ ಅರ್ಜಿಯನ್ನು ಶಿಕ್ಷಣ ಇಲಾಖೆಯ SATS(Student Achivement Tracking System)/ PU online Portal ಅಪ್ಲಿಕೇಷನ್ನಲ್ಲಿ ಸಲ್ಲಿಸುವುದು.
 • SATS(Student Achivement Tracking System)/ PU online Portal ಅಪ್ಲಿಕೇಷನ್ನಲ್ಲಿ ಬೆಂ.ಮ.ಸಾ.ಸಂಸ್ಥೆ ವಿದ್ಯಾಬಸ್ಪಾಸು: ಎಂಬ ಕಲಂ ಇರುತ್ತದೆ
 • ಈ ಕಲಂನ್ನು ಕ್ಲಿಕ್ ಮಾಡಿದ ಕೂಡಲೇ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಹೆಸರು ಮೂಡುತ್ತದೆ.
 • Search ಆಯ್ಕೆಯಲ್ಲಿ ವಿದ್ಯಾರ್ಥಿಯ ಗುರುತಿನ ಸಂಖ್ಯೆಯನ್ನು ನಮೂದಿಸಿದ ಕೂಡಲೇ ವಿದ್ಯಾರ್ಥಿಯ ಹೆಸರು ಆಯ್ಕೆಯಾಗುತ್ತದೆ.
 • ಸದರಿ ಹೆಸರನ್ನು ಕ್ಲಿಕ್ ಮಾಡಿದ ಕೂಡಲೇ ವಿದ್ಯಾಪಾಸಿನ ಅರ್ಜಿಯಲ್ಲಿ ಸದರಿ ವಿದ್ಯಾರ್ಥಿಯ ವಿವರಗಳು ಮೂಡುತ್ತವೆ.
 • ಈ ಅರ್ಜಿಯಲ್ಲಿ ವಿದ್ಯಾರ್ಥಿಯು ಪ್ರಯಾಣಿಸುವ ಮಾರ್ಗದ ವಿವರಗಳನ್ನು ನಮೂದಿಸುವುದು ಹಾಗೂ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಭಾವಚಿತ್ರ ಪಡೆದು ಸ್ಕ್ಯಾನ್ ಮಾಡಿ ಅಪ್ಲೊಡ್ ಮಾಡುವುದು.
 • ನಂತರ ಅರ್ಜಿಯನ್ನು ಸಲ್ಲಿಸುವುದು( click Submit).Submit  ಮಾಡಿದ ನಂತರ ಅರ್ಜಿಯ ಸ್ವೀಕೃತಿ ಸಂಖ್ಯೆಯು ಮೂಡುವುದು.
 • ಸ್ವೀಕೃತಿ ಸಂಖ್ಯೆಯ ಮೂಲಕ ಪಾಸು ಮುದ್ರಣ & ರವಾನೆಯ ಪೂರ್ಣ ಮಾಹಿತಿಯನ್ನು ತಿಳಿಯಬಹುದಾಗಿದೆ.
 • 1 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಂದ ನಿಗಧಿತ ಪಾಸಿನ ಮೊತ್ತವನ್ನು ಪಡೆದು, ಬೆಂ.ಮ.ಸಾ.ಸಂಸ್ಥೆಗೆ ಪಾವತಿಸುವುದು.

 

 1. ಬೆಂ.ಮ.ಸಾ.ಸಂಸ್ಥೆಯ ಪಾತ್ರ :-

SATS(Student Achivement Tracking System)/ PU online Portal ಅಪ್ಲಿಕೇಷನ್ನಲ್ಲಿ ಅರ್ಜಿಯನ್ನು ಸ್ವೀಕರಿಸಿದ ನಂತರ ಸಂಸ್ಥೆಯು ಸ್ಮಾರ್ಟ್ಕಾರ್ಡ್ ಮಾದರಿಯ ಪಾಸನ್ನು ಮುದ್ರಣಗೊಳಿಸುತ್ತದೆ.

 • 1ನೇ ತರಗತಿಯಿಂದ 7 ನೇ ತರಗತಿ ಹಾಗೂ ಪಿ.ಯು.ಸಿ ವಿದ್ಯಾಗಳ ಸ್ಮಾರ್ಟ್ಕಾರ್ಡ್ ಮಾದರಿಯ ಪಾಸುಗಳನ್ನು ಸಂಸ್ಥೆಯ ಸಿಬ್ಬಂದಿಗಳ ಮೂಲಕ ಶಾಲೆಗೆ ರವಾನಿಸಲಾಗುವುದು.
 • ಪ್ರೌಢಶಾಲೆ ವಿದ್ಯಾರ್ಥಿಗಳ ಪಾಸುಗಳನ್ನು ಅಂಚೆ ಮೂಲಕ ವಾಸಸ್ಥಳ ವಿಳಾಸಕ್ಕೆ ವಿತರಿಸಲಾಗುವುದು.

ಮುಂದುವರೆದು, ಶಾಲಾ/ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಅರ್ಜಿಗಳನ್ನು ಸಲ್ಲಿಸಲು ವಿಳಂಭವಾಗುತ್ತಿರುವ ಕಾರಣ ಮೊಬೈಲ್ ಇ-ಗೌರ್ನೆನ್ಸ್ನಲ್ಲಿ ಇ-ಈಠಡಿಟ ಮೂಲಕ ವಿದ್ಯಾರ್ಥಿಪಾಸಿಗಾಗಿ ವಿದ್ಯಾಗಳು/ಪೋಷಕರು ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮೊಬೈಲ್ ಇ-ಗೌರ್ನೆನ್ಸ್ನಲ್ಲಿ ಇ-Form ಮೂಲಕ ವಿದ್ಯಾರ್ಥಿಪಾಸಿಗಾಗಿ ಅರ್ಜಿ ಸಲ್ಲಿಸುವ ವಿಧಾನ

     ಮೊಬೈಲ್ ಮೂಲಕ

 • 161 ಗೆ ಕರೆ ಮಾಡುವುದು.
 • ನಂತರ ಕನ್ನಡ/ ಇಂಗ್ಲೀಷ್ ಭಾಷೆಯನ್ನು Select ಮಾಡಿಕೊಳ್ಳುವುದು.
 • ನಂತರ ಬೆಂ.ಮ.ಸಾ.ಸಂಸ್ಥೆಯ ಸೇವೆಗಾಗಿ 6 ನ್ನು  Select ಮಾಡಿಕೊಳ್ಳುವುದು.
 • ನಂತರ ವಿದ್ಯಾರ್ಥಿಬಸ್ ಪಾಸಿಗಾಗಿ 2 ನ್ನು Select ಮಾಡಿಕೊಳ್ಳುವುದು.
 • ನಂತರ ವಿದ್ಯಾರ್ಥಿಪಾಸಿನ ಅರ್ಜಿಯನ್ನು ವೆಬ್ಲಿಂಕ್ ಮೂಲಕ ವಿದ್ಯಾರ್ಥಿಯ ಮೊಬೈಲ್ಗೆ ಕಳುಹಿಸಲಾಗುವುದು.
 • ವಿದ್ಯಾರ್ಥಿಯು ವೆಬ್ಲಿಂಕನ್ನು ಓಪನ್ ಮಾಡಿ ವಿದ್ಯಾರ್ಥಿಪಾಸಿನ ಅರ್ಜಿಯನ್ನು ಈ ಕೆಳಕಂಡಂತೆ ಭರ್ತಿ ಮಾಡುವುದು.
 • ವೆಬ್ಲಿಂಕನ್ನ್ನು ಓಪನ್ ಮಾಡಿದಾಗ 10ನೇ ತರಗತಿಯವರೆಗೆ, ಪಿಯುಸಿ ಮತ್ತು ಕಾಲೇಜುವಿದ್ಯಾರ್ಥಿ ಎಂಬ ಮೂರು ಆಯ್ಕೆಗಳಿದ್ದು, ಸಂಬಂಧಿಸಿದನ್ನು ಆಯ್ಕೆ ಮಾಡಿಕೊಳ್ಳುವುದು.

ವೆಬ್ಸೈಟ್ ಮೂಲಕ

 • www.mybmtc.com ನಲ್ಲಿ ವಿದ್ಯಾರ್ಥಿಪಾಸ್ ಆಯ್ಕೆಯನ್ನು ಮಾಡಿಕೊಳ್ಳುವುದು.
 • ಇ-ಫಾರಂ ನ್ನು ಆಯ್ಕೆ ಮಾಡಿಕೊಳ್ಳುವುದು.
 • ವೆಬ್ಲಿಂಕನ್ನ್ನು ಓಪನ್ ಮಾಡಿದಾಗ 10ನೇ ತರಗತಿಯವರೆಗೆ, ಪಿಯುಸಿ ಮತ್ತು ಕಾಲೇಜು ವಿದ್ಯಾರ್ಥಿ ಎಂಬ ಮೂರು ಆಯ್ಕೆಗಳಿದ್ದು, ಸಂಬಂಧಿಸಿದನ್ನು ಆಯ್ಕೆ ಮಾಡಿಕೊಳ್ಳುವುದು

 

10ನೇ ತರಗತಿಯವರೆಗಿನ ವಿದ್ಯಾರ್ಥಿಗಳು:

 • ಶಾಲೆಯ ಎನ್ರೋಲ್ಮೆಂಟ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವುದು.
 • SATS ಅಪ್ಲಿಕೇಶನ್ನಲ್ಲಿರುವ ವಿದ್ಯಾರ್ಥಿಯ ಮಾಹಿತಿಯೊಂದಿಗೆ ಅರ್ಜಿಯು ಮೂಡುತ್ತದೆ.
 • ನಂತರ ವಿದ್ಯಾಯು ಪಾಸಿನ ಪ್ರಯಾಣದ ವಿವರಗಳನ್ನು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ನಮೂದಿಸಿ ಭಾವಚಿತ್ರವನ್ನು ಅಪ್ಲೋಡ್ ಮಾಡಿ ಸಲ್ಲಿಸುವುದು.
 • ಸದರಿ ಅರ್ಜಿಯನುಸಾರ ಪಾಸನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು.
 • ಸ್ಮಾರ್ಟ್ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾರ್ಥಿಯ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್ಕಾರ್ಡನ್ನು ರವಾನಿಸಲಾಗುವುದು.
 • ವಿದ್ಯಾರ್ಥಿಯು ಸ್ಮಾರ್ಟ್ಕಾರ್ಡ್ನ್ನು ಸ್ವೀಕರಿಸುವಾಗ ಪಾಸಿನ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸುವುದು.

 

ಪಿಯುಸಿ ವಿದ್ಯಾರ್ಥಿಗಳು:

 • ಕಾಲೇಜಿನ ಎನ್ರೋಲ್ಮೆಂಟ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವುದು.
 • Pu online portal ನಲ್ಲಿರುವ ಮಾಹಿತಿಯೊಂದಿಗೆ ಅರ್ಜಿಯು ಮೂಡುತ್ತದೆ.
 • ನಂತರ ವಿದ್ಯಾರ್ಥಿಯು ಪಾಸಿನ ಪ್ರಯಾಣದ ವಿವರ,  ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸವನ್ನು ನಮೂದಿಸಿ ಭಾವಚಿತ್ರವನ್ನು ಅಪ್ಲೋಡ್ ಮಾಡಿ ಸಲ್ಲಿಸುವುದು.
 • ಸದರಿ ಅರ್ಜಿಯನುಸಾರ ಪಾಸನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು.
 • ಸ್ಮಾರ್ಟ್ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾರ್ಥಿಯ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್ಕಾರ್ಡನ್ನು ರವಾನಿಸಲಾಗುವುದು.
 • ವಿದ್ಯಾರ್ಥಿಯು ಸ್ಮಾರ್ಟ್ಕಾರ್ಡ್ನ್ನು ಸ್ವೀಕರಿಸುವಾಗ ಪಾಸಿನ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸುವುದು.

   

     ಕಾಲೇಜು ವಿದ್ಯಾರ್ಥಿಳು

 • ಇ-ಫಾರಂ ಅರ್ಜಿಯನ್ನು ಓಪನ್ ಮಾಡಿ, ಅರ್ಜಿಯಲ್ಲಿನ ಎಲ್ಲಾ ವಿವರಗಳನ್ನು ಈ ಕೆಳಕಂಡಂತೆ ಭರ್ತಿ ಮಾಡುವುದು.
 • ವಿದ್ಯಾರ್ಥಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವರ್ಗ, ವಿಳಾಸ, ಕಾಲೇಜಿನ ವಿವರ,  ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಪ್ರಯಾಣದ ವಿವರ ಮತ್ತು ಭಾವಚಿತ್ರವನ್ನು ಅಪ್ಲೋಡ್ ಮಾಡಿ ಸಲ್ಲಿಸುವುದು.
 • ಈ ರೀತಿ ಸಲ್ಲಿಸಿದ ಅರ್ಜಿಯು ಸಂಬಂಧಿಸಿದ ಕಾಲೇಜಿನ ಲಿಂಕ್ಗೆ ಹೋಗುವುದು. ನಂತರ ಕಾಲೇಜಿನ ನೊಡಲ್ ಅಧಿಕಾರಿಯು ಅರ್ಜಿಯನ್ನು ಪರಿಶೀಲಿಸಿ ದೃಢೀಕರಿಸಿ ಸಲ್ಲಿಸುವುದು.
 • ಈ ರೀತಿ ಕಾಲೇಜಿನಿಂದ ದೃಢೀಕರಿಸಿದ ಅರ್ಜಿಯು ಬೆಂ.ಮ.ಸಾ.ಸಂಸ್ಥೆಗೆ ಬರುತ್ತದೆ. ಸದರಿ ಅರ್ಜಿಯನುಸಾರ ಪಾಸನ್ನು ಮುದ್ರಿಸಲು ಕ್ರಮಕೈಗೊಳ್ಳಲಾಗುವುದು.
 • ಸ್ಮಾರ್ಟ್ಕಾರ್ಡ್ ಮುದ್ರಣಗೊಂಡ ನಂತರ ವಿದ್ಯಾಯ ವಿಳಾಸಕ್ಕೆ ಅಂಚೆ ಮೂಲಕ ಸ್ಮಾರ್ಟ್ಕಾರ್ಡನ್ನು ರವಾನಿಸಲಾಗುವುದು.
 • ಕಾಲೇಜಿನ ವಿದ್ಯಾರ್ಥಿಗಳು ಪಾಸಿನ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದ್ದು, ಈ ರೀತಿ ಆನ್ಲೈನ್ ಮೂಲಕ ಪಾಸಿನ ಮೊತ್ತವನ್ನು ಪಾವತಿಸಿದಲ್ಲಿ ರೂ.190/- ಸೇವಾ ಶುಲ್ಕವಾಗಿ ಪಾವತಿಸುವುದು.
 • ಒಂದು ವೇಳೆ ಆನ್ಲೈನ್ ಮೂಲಕ ಪಾಸಿನ ಮೊತ್ತವನ್ನು ಪಾವತಿಸದಿದ್ದಲ್ಲಿ ವಿದ್ಯಾರ್ಥಿಯು ಸ್ಮಾರ್ಟ್ಕಾರ್ಡ್ನ್ನು ಸ್ವೀಕರಿಸುವಾಗ ಪಾಸಿನ ಮೊತ್ತವನ್ನು ಅಂಚೆ ವ್ಯಕ್ತಿಯ ಬಳಿ ಪಾವತಿಸುವುದು. ಈ ಸಂಧರ್ಭದಲ್ಲಿ ರೂ.200/- ನ್ನು ಸೇವಾ ಶುಲ್ಕವಾಗಿ ಪಾವತಿಸುವುದು.

 

ವಿದ್ಯಾರ್ಥಿರಿಯಾಯಿತಿ ಪಾಸಿನ ದರದ ವಿವರವು ಈ ಕೆಳಕಂಡಂತಿವೆ.

 

Sl No

Category

Pass Rate

Processing Fee

Total

By Cash

online payment

1

Primary

Free

150

0

150

2

High School Girls Students

400

200

0

600

3

Sc/ST High School Girls Students

Free

200

0

200

4

High School Boys Students

600

200

0

800

5

Sc/ST High School Boys students

Free

200

0

200

6

PUC

900

200

0

1100

7

PUC Sc/ST students

Free

200

0

200

8

College Students  Pass - Degree

1100

200

190

1300

9

SC/ST College Student Passes

Free

200

190

200

10

Professional College Passes

1150

200

190

1350

11

SC/ST Professional Student Passes

Free

200

190

200

12

Technical/Medical Students  Pass

1680

200

190

1880

13

SC/ST Technical/Medical Student Passes

Free

200

190

200

14

Evening College  Students  Pass

1480

200

190

1680

15

SC/ST Evening College   Student Passes

Free

200

190

200

 

*ವಿದ್ಯಾರ್ಥಿಗಳು ಆನ್ ಲೈನ್ನಲ್ಲಿ ಪಾಸಿನ ಮೊತ್ತವನ್ನು ಪಾವತಿಸಿದ್ದಲ್ಲಿ ಸೇವಾ ಶುಲ್ಕ ರೂ.190/-

* ವಿದ್ಯಾರ್ಥಿಗಳು ಅಂಚೆ ವ್ಯಕ್ತಿಯ ಬಳಿ ಪಾಸಿನ ಮೊತ್ತವನ್ನು ಪಾವತಿಸಿದ್ದಲ್ಲಿ ಸೇವಾ ಶುಲ್ಕ ರೂ.200/-