ಪ್ರಯಾಣ ದರ : ವಯಸ್ಕರಿಗೆ ರೂ.400 ,   ಮಕ್ಕಳಿಗೆ ರೂ.300

ಪ್ರವಾಸಿಗರು ಹಾಗೂ ಸಾರ್ವಜನಿಕ ಪ್ರಯಾಣಿಕರು ನಗರದ ಪ್ರಮುಖ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು “ಬೆಂಗಳೂರು ದರ್ಶಿನಿ” (ಬೆಂಗಳೂರು ರೌಂಡ್ಸ್) ಎಂಬ ಸೇವೆಯನ್ನು 2 ಹವಾನಿಯಂತ್ರಿತ ವಾಹನಗಳೊಂದಿಗೆ ಈ ಕೆಳಕಂಡ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

ಬೆಂಗಳೂರು ದರ್ಶಿನಿ-01: ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 08:40 ಕ್ಕೆ ಪ್ರಾರಂಭವಾಗಿ ನಗರದ ಪ್ರಮುಖ ಪ್ರವಾಸಿ ಸ್ಥಳಗಳಾದ ಇಸ್ಕಾನ್ ದೇವಾಲಯ, ವಿಧಾನಸೌಧ, ಟಿಪ್ಪು ಅರಮನೆ, ಗವಿಗಂಗಾಧರೇಶ್ವರ ದೇವಾಲಯ, ದೊಡ್ಡ ಬಸವಣ್ಣ ದೇವಾಲಯ, ದೊಡ್ಡ ಗಣಪತಿ ದೇವಾಲಯ, ಕರ್ನಾಟಕ ಸಿಲ್ಕ್ ಎಂಪೋರಿಯಂ, ಎಂ.ಜಿ. ರಸ್ತೆ , ಹಲಸೂರು ಕೆರೆ, ಕಬ್ಬನ್ ಉದ್ಯಾನವನ, ಸರ್.ಎಂ. ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ, ಸರ್ಕಾರಿ ಮುದ್ರಣಾಲಯ, ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಕ ಪುನಃ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಮಯ:18:10 ಕ್ಕೆ ಬಂದು ತಲುಪುತ್ತದೆ

ಬೆಂಗಳೂರು ದರ್ಶಿನಿ-02: ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 08:25 ಕ್ಕೆ ಪ್ರಾರಂಭವಾಗಿ ನಗರದ ಪ್ರಮುಖ ಪ್ರವಾಸಿ ಸ್ಥಳಗಳಾದ ಇಸ್ಕಾನ್ ದೇವಾಲಯ, ವಿಧಾನಸೌಧ, ಟಿಪ್ಪು ಅರಮನೆ, ಗವಿಗಂಗಾಧರೇಶ್ವರ ದೇವಾಲಯ, ದೊಡ್ಡ ಬಸವಣ್ಣ ದೇವಾಲಯ, ದೊಡ್ಡ ಗಣಪತಿ ದೇವಾಲಯ, ಕರ್ನಾಟಕ ಸಿಲ್ಕ್ ಎಂಪೋರಿಯಂ, ಎಂ.ಜಿ. ರಸ್ತೆ , ಹಲಸೂರು ಕೆರೆ, ಕಬ್ಬನ್ ಉದ್ಯಾನವನ, ಸರ್.ಎಂ. ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ, ಸರ್ಕಾರಿ ಮುದ್ರಣಾಲಯ, ಕರ್ನಾಟಕ ಚಿತ್ರಕಲಾ ಪರಿಷತ್ ಮೂಲಕ ಪುನಃ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಮಯ:17:55 ಕ್ಕೆ ಬಂದು ತಲುಪುತ್ತದೆ.

ಒಂದೇ ವಾಹನದಲ್ಲಿ ಮೇಲಿನ ಎಲ್ಲಾ ಸ್ಥಳಗಳನ್ನು ಒಂದೇ ದಿನದಲ್ಲಿ ಸಂದರ್ಶಿಸಬಹುದಾಗಿರುತ್ತದೆ. ಸದರಿ ಸೇವೆಯಲ್ಲಿ ಪ್ರಯಾಣಿಸುವ ವಯಸ್ಕರಿಗೆ ತಲಾ ರೂ.400/- ಮತ್ತು ಮಕ್ಕಳಿಗೆ ತಲಾ ರೂ.300/- ಪ್ರಯಾಣ ದರವನ್ನು ನಿಗಧಿಪಡಿಸಲಾಗಿದೆ. ಈ ಸೇವೆಗೆ ಮುಂಗಡ ಆಸನ ಕಾಯ್ದಿರಿಸಲು ಕ.ರಾ.ರ.ಸಾ.ನಿಗಮದ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್‍ಗಳಿಗೆ ಅಥವ www.ksrtc.in ಗೆ ಭೇಟಿ ನೀಡಿ.

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಂತರ್ಜಾಲ (www.ksrtc.in) ದಲ್ಲಿ  ಮುಂಗಡ ಟಿಕೇಟ್‍ಗಳನ್ನು ಕಾಯ್ದಿರಿಸಲು ಈ ಕೆಳಗಿನಂತೆ ನಮೂದಿಸುವುದು. “ಇಂದ” ಕ್ಷೇತ್ರದಲ್ಲಿ ಅಥವಾ “BANGALURU” ಎಂದು ನಮೂದಿಸುವುದು ಮತ್ತು “ರವರಿಗೆ” ಕ್ಷೇತ್ರದಲ್ಲಿ “BNGCR” ಅಥವಾ “BANGALURU  DARSHINI” ಎಂದು ನಮೂದಿಸಿ ಮುಂಗಡವಾಗಿ ಟಿಕೇಟ್‍ಗಳನ್ನು ಕಾಯ್ದಿರಿಸಬಹುದು.

Updated on: ಸೋಮವಾರ, 14 September, 2015 - 11:15