ಹೊಸ ವರ್ಷದ ಉಡುಗೊರೆಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಜ್ರ ಮತ್ತು ವಾಯುವಜ್ರ ಪ್ರಯಾಣ ದರಗಳನ್ನು ಕಡಿತಗೊಳಿಸಿ ಪರಿಷ್ಕರಣೆ ಮಾಡುತ್ತಿರುವ ಬಗ್ಗೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಕೈಗೆಟಕುವ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ತನ್ನ ಪ್ರಯಾಣಿಕ ಸ್ನೇಹಿ ಉಪಕ್ರಮಗಳ ಮುಂದುವರೆದ ಕ್ರಮವಾಗಿ 2018ರ ವರ್ಷಾರಂಭದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಬಯಸುತ್ತದೆ.

 

ಬೆಂಗಳೂರು ಮಹಾನಗರದ ನಾಗರೀಕರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಬೆಂ.ಮ.ಸಾ.ಸಂಸ್ಥೆಯು ಉತ್ತಮ ಸಾರಿಗೆ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ ಹೆಚ್ಚು ಹೆಚ್ಚು ಪ್ರಯಾಣಿಕರು ಬೆಂ.ಮ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮೂಲಕ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ಪೂರಕವಾಗುವಂತೆ ಹವಾನಿಯಂತ್ರಿತ (ವಜ್ರ ಮತ್ತು ವಾಯುವಜ್ರ)ಸೇವೆಗಳ ದರಗಳನ್ನು ಈ ಕೆಳಗಿನಂತೆ ಕಡಿಮೆಗೊಳಿಸಿ ಪರಿಷ್ಕರಿಸಲಾಗಿದೆ.

 

 

 • • ವಜ್ರ ಸೇವೆಗಳ ದರದಲ್ಲಿ ಕಡಿತ :

 

 1. ಪ್ರಸ್ತುತ ಹವಾನಿಯಂತ್ರಿತ ವಜ್ರ ಸೇವೆಗಳ ಪ್ರಯಾಣ ದರದಲ್ಲಿ, ಶೇ.37ರವರೆಗೆ ಕಡಿಮೆಗೊಳಿಸಿ ದರ ಪರಿಷ್ಕರಣೆ ಮಾಡಲಾಗಿದೆ.
 2. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಲ್ಲಿ ಮಾತ್ರ ಈ ದರಗಳನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗುವುದು.
 • • ವಾಯುವಜ್ರ ಸೇವೆಗಳ ದರದಲ್ಲಿ ಕಡಿತ :
ಸ್ಥಳಗಳುಸ್ಥಳಗಳುಪ್ರಸ್ತುತ ಮೂಲ ದರ ರೂ.ಗಳಲ್ಲಿ *ಪರಿಷ್ಕರಿಸಲಾದ ಮೂಲ ದರ ರೂ.ಗಳಲ್ಲಿ *
ಮೇಕ್ರಿ ವೃತ್ತಕೆಐಎಎಲ್190.00175.00
ಹೆಬ್ಬಾಳಕೆಐಎಎಲ್170.00150.00
ಎಸ್ಟೀಂ ಮಾಲ್ಕೆಐಎಎಲ್170.00140.00
ಕೋಗಿಲು ಕ್ರಾಸ್ಕೆಐಎಎಲ್170.00125.00

* ಉಖಖಿ (ಶೇ.5 ರಷ್ಟು) ಮತ್ತು ಟೋಲ್ ದರ (ರೂ.12 ಪ್ರತಿ ಪ್ರಯಾಣಿಕರಿಗೆ) ಹೊರತುಪಡಿಸಿ

 1. ವಾಯುವಜ್ರ ಅನುಸೂಚಿಗಳಲ್ಲಿ (ಮೇಕ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಮತ್ತು ಕೋಗಿಲು ಕ್ರಾಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರವನ್ನು ಕೆಳಗಿನಂತೆ ಪರಿಷ್ಕರಿಸಲಾಗಿದೆ..
 2. ಹುಣಸಮಾರನಹಳ್ಳಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸದಾಗಿ ಪ್ರಯಾಣದರವನ್ನು ರೂ.100/-ಗಳನ್ನು ನಿಗದಿಪಡಿಸಲಾಗಿದೆ.
 • • ವಾಯುವಜ್ರ ಸೇವೆಗಳಲ್ಲಿ ಗುಂಪು ರಿಯಾಯಿತಿ:
 1. 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15 ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗುವುದು.
 2. ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪಿಓಎಸ್ ಮೂಲಕ ಟಿಕೇಟ್ ಖರೀದಿಸಿ ಪ್ರಯಾಣಿಸುವವರಿಗೆ ರಿಯಾಯಿತಿ ನೀಡಲಾಗುವುದು.
 3. ಮುಂದಿನ ದಿನಗಳಲ್ಲಿ, ಎಲ್ಲಾ ವಾಯುವಜ್ರ ಸೇವೆಗಳಲ್ಲಿ, ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು.
 4. ಗುಂಪು ರಿಯಾಯಿತಿಯನ್ನು ಜಾರಿಗೆ ತರುವ ದಿನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.