ಬೆಂಮಸಾಸಂಸ್ಥೆಗೆ ಪ್ರತಿಷ್ಟಿತ Skoch Mobility Award-2016

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ Skoch Order-of-Merit" Skoch Mobility Award-2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆಯ ಕಾರ್ಮಿಕ ಕಲ್ಯಾಣ ಕ್ರಮಗಳು, ಚತುರ ಸಾರಿಗೆ ವ್ಯವಸ್ಥೆ, ಮೊಬೈಲ್ ಆಪ್, ಮಹಿಳಾ ಪ್ರಯಾಣಿಕರ ಸುರಕ್ಷತೆ, ಆಕವಾಗಿ ಹಿಂದುಳಿದ ಪ್ರಯಾಣಿಕರಿಗೆ ಕಡಿಮೆ ದರದ ಬಸ್ ಸೇವೆ, ಟ್ರಂಕ್ ಹಾಗೂ ಫೀಡರ್ ಸೇವೆಗಳನ್ನೊಳಗೊಂಡ 7 ಉಪಕ್ರಮಗಳಿಗೆ ಪ್ರಶಸ್ತಿ ಲಭ್ಯವಾಗಿರುತ್ತದೆ.