ದಿನಾಂಕ : 01.01.2018 ರಂದು ಪ್ರಾಯೋಗಿಕವಾಗಿ ಪರಿಷ್ಕರಿಸಲಾಗಿದ್ದ ವಜ್ರ ಸೇವೆಗಳ ದರವನ್ನು ಇನ್ನೂ 1 ತಿಂಗಳ ಅವಧಿಗೆ ವಿಸ್ತರಿಸಿರುವ ಬಗ್ಗೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಕೈಗೆಟಕುವ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂಗಳೂರು ಮಹಾನಗರದ ನಾಗರೀಕರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಬೆಂ.ಮ.ಸಾ.ಸಂಸ್ಥೆಯು ಉತ್ತಮ ಸಾರಿಗೆ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ. ಮುಂದುವರೆದು ಪ್ರಯಾಣಿಕರು ಸಮೂಹ ಸಾರಿಗೆಯನ್ನು ಬಳಸುವಂತೆ ಪ್ರೋತ್ಸಾಹಿಸಲು ಹವಾನಿಯಂತ್ರಿತ (ವಜ್ರ ಮತ್ತು ವಾಯುವಜ್ರ) ಸೇವೆಗಳ ದರಗಳನ್ನು ಕಡಿಮೆಗೊಳಿಸಿ ಈ ಕೆಳಗಿನಂತೆ ಪರಿಷ್ಕರಿಸಲಾಗಿರುವುದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. 1. ವಜ್ರ ಸೇವೆಗಳ ಪ್ರಯಾಣ ದರದಲ್ಲಿ, ಶೇ.37 ರವರೆಗೆ ಕಡಿಮೆಗೊಳಿಸಿ ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ಪ್ರಾಯೋಗಿಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ. 2. ವಾಯುವಜ್ರ ಅನುಸೂಚಿಗಳಲ್ಲಿ (ಮೇಕ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಮತ್ತು ಕೋಗಿಲು ಕ್ರಾಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರವನ್ನು ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಲಾಗಿದೆ. 3. ಹುಣಸಮಾರನಹಳ್ಳಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸದಾಗಿ ಪ್ರಯಾಣದರವನ್ನು ರೂ.100/- ಗಳನ್ನು ನಿಗದಿಪಡಿಸಲಾಗಿದೆ. 4. ಇದರೊಂದಿಗೆ, ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕಾರ್ಯಾಚರಣೆಯಾಗುವ ಮಾರ್ಗ ಸಂಖ್ಯೆ ಕೆಐಎಎಸ್-8 ರಲ್ಲಿ 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15 ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗಿದೆ. ಮುಂದುವರೆದು, ಕ್ರಮ ಸಂಖ್ಯೆ 01 ರಲ್ಲಿ ತಿಳಿಸಿರುವಂತೆ ಜನವರಿ ಮಾಹೆಯಲ್ಲಿ ಪ್ರಾಯೋಗಿಕವಾಗಿ ವಜ್ರ ಸೇವೆಗಳ ಪ್ರಯಾಣ ದರವನ್ನು ಇಳಿಕೆ ಮಾಡಿ ಪರಿಷ್ಕರಿಸಲಾಗಿದ್ದು, ಈ ಹಂತವಾರು ದರ ಇಳಿಕೆಯು ಶೇಕಡ 5 ರಿಂದ ಶೇ.37 ರವರೆಗೆ ಇಳಿಕೆಯಾಗಿದ್ದು, ಒಟ್ಟಾರೆಯಾಗಿ ಶೇ.29 ಇಳಿಕೆಯಾಗಿರುತ್ತದೆ. ಸದರಿ ವಜ್ರ ಸೇವೆಗಳ ದರ ಪರಿಷ್ಕರಣೆ ಕ್ರಮವನ್ನು ಇನ್ನೂ 1 ತಿಂಗಳ ಅವಧಿಗೆ ಅಂದರೆ ದಿನಾಂಕ 28.02.2018 ರವರೆಗೆ ವಿಸ್ತರಿಸಲಾಗಿದೆ.