ವಾಯುವಜ್ರ ಸೇವೆಗಳಲ್ಲಿ 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಶೇ.15 ರಷ್ಟು ರಿಯಾಯಿತಿಯನ್ನು ಕಲ್ಪಿಸಿರುವ ಬಗ್ಗೆ

ವಾಯುವಜ್ರ ಸೇವೆಗಳಲ್ಲಿ ಗುಂಪು ರಿಯಾಯಿತಿ: ಪ್ರಸ್ತುತ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಪ್ರಯಾಣಿಕರು ಹೆಚ್ಚು ಹೆಚ್ಚು ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಿನಾಂಕ: 27.01.2018 ರಂದು ಜಾರಿಗೆ ಬರುವಂತೆ ಪ್ರಾಯೋಗಿಕವಾಗಿ ವಾಯುವಜ್ರ ಸೇವೆಗಳಲ್ಲಿ ಮೂರು ಹಾಗೂ ಮೂರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಿದ್ದಲ್ಲಿ, ಗುಂಪು ರಿಯಾಯಿತಿಯನ್ನು ಈ ಕೆಳಗಿನಂತೆ ಕಲ್ಪಿಸಲಾಗಿದೆ. 1. 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15 ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗಿರುತ್ತದೆ. 2. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೌಂಟರ್ ನಲ್ಲಿ ಟಿಕೇಟ್ ಖರೀದಿಸುವ ಪ್ರಯಾಣಿಕರಿಗೆ ಈ ರಿಯಾಯಿತಿಯು ಅನ್ವಯಿಸುತ್ತದೆ. 3. ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕಾರ್ಯಾಚರಣೆಯಾಗುವ ಮಾರ್ಗ ಸಂಖ್ಯೆ ಕೆಐಎಎಸ್-8 ರಲ್ಲಿ ಪ್ರಯಾಣಿಸುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತದೆ. 4. ಮುಂದಿನ ದಿನಗಳಲ್ಲಿ, ಎಲ್ಲಾ ವಾಯುವಜ್ರ ಸೇವೆಗಳಲ್ಲಿ, ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು.