ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್ನಿಂದ ಐಟಿಪಿಲ್ಗೆ ಸಂಚರಿಸುವ ವೋಲ್ವೋ ಫೀಡರ್ ಮಾರ್ಗಗಳಲ್ಲ್ಲಿ ಪ್ರಯಾಣಿಸಲು ರೂ.80/- ರ ವಿಶೇಷ ನಿಕ ಹಾಗೂ ರೂ.1500/- ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪೂರ್ವ ಪಶ್ಚಿಮ ಕಾರಿಡಾರ್ನಲ್ಲಿ ಕಾರ್ಯಾಚರಣೆಯಾಗುತ್ತಿರುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಿಂದ ಐಟಿಪಿಲ್ಗೆ ದಿನಾಂಕ:16.02.2017 ರಿಂದ 23 ವೊಲ್ವೋ ಅನುಸೂಚಿಗಳಲ್ಲಿ ಪ್ರತಿ 5 ನಿಮಿಷಕ್ಕೊಂದರಂತೆ 229 ಏಕಮುಖ ಸುತ್ತುವಳಿಗಳಲ್ಲಿ ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸುತ್ತಿದೆ ಮತ್ತು ಸಾಮಾನ್ಯ ಸೇವೆಗಳಲ್ಲಿ 16 ಅನುಸೂಚಿಗಳೊಂದಿಗೆ 94 ಸುತ್ತುವಳಿಗಳ ಮೆಟ್ರೋ ಫೀಡರ್ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸದರಿ ವಜ್ರ ಮೆಟ್ರೋ ಫೀಡರ್ ಸೇವೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಚಿಲ್ಲರೆ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ವಿಶೇಷ ರಿಯಾಯಿತಿ ದರದ ರೂ.80/- (ರೂ.05/- ಸೇವಾ ತೆರಿಗೆ ಸೇರಿ ರೂ.85/-) ರ ನಿಕ ಮತ್ತು ರೂ.1500/- (ರೂ.90/- ಸೇವಾ ತೆರಿಗೆ ಸೇರಿ ರೂ.1590/-) ಮಾಸಿಕ ಪಾಸುಗಳನ್ನು ಪರಿಚಯಿಸಲಾಗಿದೆ.