ಬಿಎಂಟಿಸಿಯ ಚತುರ ಸಾರಿಗೆ ವ್ಯವಸ್ಥೆಯ ಲೋಕಾರ್ಪಣೆ ಕಾರ್ಯಕ್ರಮ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ನಗರ ಸಾರಿಗೆ ಸೇವೆಗಳ ಆಚರಣೆ ವ್ಯವಸ್ಥೆಯಲ್ಲಿ ವಿನೂತನವಾಗಿ ಅಳವಡಿಸಿಕೊಂಡಿರುವ ಚತುರ ಸಾರಿಗೆ ವ್ಯವಸ್ಥೆಯನ್ನು ಶ್ರೀ.ಸಿದ್ಧರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ತಮ್ಮ ಅಮೃತ ಹಸ್ತದಿಂದ ದಿನಾಂಕ 25.05.2016 ರಂದು ಸಂಸ್ಥೆಯ ಕೇಂದ್ರ ಕಛೇರಿ ಆವರಣದಲ್ಲಿ ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉಸ್ತುವಾರಿ ಸಚಿವರು, ಕೋಲಾರ ಜಿಲ್ಲೆ ಮತ್ತು ಅಧ್ಯಕ್ಷರು ಕ.ರಾ.ರ.ಸಾ.ನಿ ರವರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಿದರು