ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ನವೀಕರಿಸುವ ಬಗ್ಗೆ

2016ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸುಗಳನ್ನು ದಿನಾಂಕ:01.01.2016 ರಿಂದ ಜಾರಿಗೆ ಬರುವಂತೆ ನವೀಕರಿಸಲು ಕ್ರಮ ಕೈಗೊಳ್ಳುವುದು ಹಾಗೂ  2015 ನೇ ಸಾಲಿನಲ್ಲಿ ವಿತರಿಸಿ 31.12.2015ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು 28.02.2016 ರವರೆಗೆ ಮಾನ್ಯ ಮಾಡುವುದು. ವಿಕಲಚೇತನರ ಫಲಾನುಭವಿಗಳಿಂದ ಕರೂ.660/- ನ್ನು ನಗದು ರೂಪದಲ್ಲಿ ಪಡೆದು ವಿಕಲಚೇತನರ ಬಸ್ ಪಾಸುಗಳನ್ನು ದಿನಾಂಕ:28.02.2016ಕಿ ರವರೆಗೆ ನವೀಕರಿಸುವುದು ನಂತರ ಬರುವ ಪಾಸುಗಳನ್ನು ನವೀಕರಿಸಲಾಗುವುದಿಲ್ಲ.  2016 ನೇ ಸಾಲಿಗೆ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಕೃ.ರಾ ಮಾರುಕಟ್ಟೆ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಯಲಹಂಕ ಉಪನಗರ, ವೈಟ್ಫಿಲ್ಡ್ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೊಸಕೋಟೆ ಬಸ್ ನಿಲ್ದಾಣಗಳಲ್ಲಿ ನವೀಕರಣ ಮಾಡಲಾಗುವುದು.