ಆಗಸ್ಟ್-2016 ರಲ್ಲಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತನಿಖಾ ತಂಡಗಳು ಆಗಸ್ಟ್-2016 ರಲ್ಲಿ ಒಟ್ಟು 23913 ಟ್ರಿಪ್ಗಳನ್ನು ತಪಾಸಿಸಿ 7422 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 12,13,330/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2739 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 491 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 49,100/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.