150 ವಿದ್ಯುತ್ಚಾಲಿತ ಬಸ್ಸುಗಳನ್ನು ಅಳವಡಿಸಲು ತಾತ್ವಿಕವಾಗಿ ಒಪ್ಪಿಗೆ

ಬೆಂಗಳೂರು ಮಹಾನಗರ ಸಾರಿಗೆ ಸಂಸೆಯ್ಥ ಮಂಡಳಿ ನಿರ್ದೇಶಕರು ವಾಹನಗಳ ವಾಯುಮಾಲಿನ್ಯ, ಶಬ್ದ ಹಾಗೂ ಇಂಧನ ಬಳಕೆ ಕಡಿಮೆಗೊಳಿಸಲು ಪ್ರಾರಂಭಿಕ ಹಂತದಲ್ಲಿ ಒಂದು ಭಾಗವಾಗಿ 150 ವಿದ್ಯುತ್ಚಾಲಿತ ಬಸ್ಸುಗಳನ್ನು ಅಳವಡಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿರುತ್ತಾರೆ. ಬೆಂ.ಮ.ಸಾ.ಸಂಸ್ಥೆಯು ತನ್ನ ಸಂಪನ್ಮೂಲವನ್ನು ಉಪಯೋಗಿಸಿಕೊಂಡು ವಿದ್ಯುತ್ಚಾಲಿತ ಬಸ್ಸುಗಳನ್ನು ಖರೀದಿಸುವ ಸಾಮಥ್ರ್ಯವಿಲ್ಲದಿರುವುದರಿಂದ ಭಾರತ ಸರ್ಕಾರದ National Electric Mobility Mission Plan (NEMMP) 2020 ಯೋಜನೆಯ Faster Adoption and Manufacturing of Electric Vehicles (FAME) ಅಡಿಯಲ್ಲಿ ಆಕ ಸಹಾಯವನ್ನು ಕೋರಲು ನಿರ್ಧರಿಸಲಾಗಿರುತ್ತದೆ. (NEMMP) 2020 ಯು ಭಾರತ ಸರ್ಕಾರದ, ಭಾರಿ ಕೈಗಾರಿಕಾ ಇಲಾಖೆ ಯೋಜನೆಯಾಗಿದ್ದು, ವಾಹನ ಕ್ಷೆತ್ರದಲ್ಲಿ Electric and Hybrid Components ಗಳ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುತ್ತದೆ, ಈ ನಿಟ್ಟಿನಲ್ಲಿ ಪ್ರಾರಂಭಿಕವಾಗಿ CO2 emissions ಮತ್ತು ಕಚ್ಚಾ ತೈಲದ ಅವಲಂಬನೆಯನ್ನು ಕಡಿಮೆಗೊಳಿಸಲು, ಭಾರತದಲ್ಲಿ ವಿದ್ಯುತ್ಚಾಲಿತ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯ ವೇಗ ವರ್ಧಿಸಲು ಗಮನ ಹರಿಸಿದೆ. FAME ಯೋಜನೆಯು NEMMP ಗೆ ಆಕ ಸಹಾಯವನ್ನು ಒದಗಿಸಲಿದ್ದು ಭಾರತದಲ್ಲಿ ವಿದ್ಯುತ್ಚಾಲಿತ ವಾಹನಗಳ ಅಭಿವೃದ್ಧಿಗೆ ಸಹಕರಿಸಿ ಉತ್ತೇಜನ ನೀಡಲಿದೆ. ಬೆಂ.ಮ.ಸಾ.ಸಂಸ್ಥೆಯು 2014ನೇ ಸಾಲಿನಲ್ಲಿ ವಿದ್ಯುತ್ತ ಚಾಲಿತ ಬಸ್ಸನ್ನು ಮೂರು ತಿಂಗಳ ಅವಧಿಗೆ ಯಶಸ್ವಿ ಪ್ರಾಯೋಗಿಕ ಕಾರ್ಯಾಚರಣೆ ಮಾಡಿದ ದೇಶದ ಮೊದಲನೇ ಸಾರಿಗೆ ಸಂಸ್ಥೆಯಾಗಿರುತ್ತದೆ. ಪ್ರಾಯೋಗಿಕ ಕಾರ್ಯಾಚರಣೆಯ ಫಲಿತಾಂಶವು ಪ್ರೋತ್ಸಾಹದಾಯಕವಾಗಿದ್ದು ಹಾಗೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗಿರುತ್ತದೆ. ಆದಾಗ್ಯೂ ವಿದ್ಯುತ್ತ ಚಾಲಿತ ಬಸ್ಸುಗಳ ಪ್ರಾರಂಭಿಕ ವೆಚ್ಚವು ಅಧಿಕವಾಗಿರುವದರಿಂದ ಇವುಗಳನ್ನು ಅಳವಡಿಸಿಕೊಳ್ಳುವ ತಿರ್ಮಾನವನ್ನು ಈ ಹಿಂದೆ ಮುಂದೂಲಾಗಿರುತ್ತದೆ. ವಿದ್ಯುತ್ತ ಚಾಲಿತ ವಾಹನಗಳ ತಂತ್ರಜ್ಞಾನವು ವಾಸ್ತವವಾಗಿ ಶ್ಲಾನಿಯವಾದ ಬಂಡವಾಳ ವೆಚ್ಚವನ್ನು ಒಳಗೊಂಡಿದ್ದು, ಉತ್ಪಾದನಾ ವೆಚ್ಚದ ಅರ್ಧದಷ್ಟು ಬ್ಯಾಟರಿ ಟಕದ ವೆಚ್ಚವನ್ನು ಒಳಗೊಂಡಿರುವುದು ಗಮನಾರ್ಹವಾಗಿದ್ದು. ಸಂಸ್ಥೆಯ ಕಾರ್ಯಾಚರಣೆಯ ಅವಶ್ಯಕತೆಗೆ ಅನುಗುಣವಾಗಿ ಬ್ಯಾಟರಿ ಗಾತ್ರವನ್ನು ಕಡಿಮೆಗೊಳಿಸಲು ಡೋಮೆನ್ ತಜ್ಞರೂಂದಿಗೆ ಚರ್ಚೆಯನ್ನು ಕೈಗೊಳ್ಳಲಾಗುತ್ತಿರುತ್ತದೆ, ಸದರಿ ಬಸ್ಸುಗಳ ದರವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ಪ್ರಸ್ತುತ ಸಂಸ್ಥೆಯು ಕಾರ್ಯಾಚರಣೆ ಮಾಡುತ್ತಿರುವ ಉನ್ನತ ಶ್ರೇಣಿಯ ಬಸ್ಸುಗಳ ದರಕ್ಕೆ ಹೊಲುವಂತೆ ಖಚಿತಪಡಿಸಿಕೊಳ್ಳಲು ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಭಾರತ ಸರ್ಕಾರದ National Electric Mobility Mission Plan (NEMMP) 2020 ಯೋಜನೆಯ Faster Adoption and Manufacturing of Electric Vehicles (FAME) ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಆಕ ಸಹಾಯವನ್ನು ಪಡೆಯಲು ನೀರ್ಧರಿಸಲಾಗಿರುತ್ತದೆ.
ಕನ್ನಡ