ಬೆಂಮಸಾಸಂಸ್ಥೆಗೆ ಪ್ರತಿಷ್ಠಿತ ಮೂರು ಪ್ರಶಸ್ತಿಗಳು

ಬೆಂಮಸಾಸಂಸ್ಥೆಗೆ ಪ್ರತಿಷ್ಠಿತ ಮೂರು ಪ್ರಶಸ್ತಿಗಳು mBillionth South Asia 2016 ಹಾಗೂ CMO ASIA Smart Cities 2016 ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ, ಪ್ರತಿಷ್ಠಿತ mBillionth South Asia 2016 ಪ್ರಶಸ್ತಿಯು Smart Settlements and Urbanisation ವಿಭಾಗದಲ್ಲಿ ಚತುರ ಸಾರಿಗೆ ವ್ಯವಸ್ಥೆ ಉಪಕ್ರಮಕ್ಕಾಗಿ (Mobile App) ಲಭಿಸಿರುತ್ತದೆ. ದಿನಾಂಕ 23-7-2016 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಶ್ರೀ ನಾಗೇಂದ್ರ ಮುಖ್ಯ ಗಣಕವ್ಯವಸ್ಥಾಪಕ ರವರು ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ. ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ, ಪ್ರತಿಷ್ಠಿತ CMO ASIA Smart Cities Awards 2016, ಪ್ರಶಸ್ತಿಯು, ಸ್ಮಾರ್ಟ್ ಸಾರಿಗೆ ಉಪಕ್ರಮ ವಿಭಾಗದಲ್ಲಿ ಖಚತುರ ಸಾರಿಗೆ ವ್ಯವಸ್ಥೆ ಮತ್ತು ಮೊಬೈಲ್ ಆ್ಯಪ್ಖ ಹಾಗೂ ಸ್ಮಾರ್ಟ್ ತ್ಯಾಜ್ಯ ನಿರ್ವಹಣೆ ಉಪಕ್ರಮಖಕ್ಕಾಗಿ ಒಟ್ಟು ಎರಡು ಪ್ರಶಸಿಗಳು ಲಭಿಸಿರುತ್ತದೆ. ದಿನಾಂಕ 5-8-2016 ರಂದು ಸಿಂಗಾಪುರದ ಪಾನ್ ಪಾಸಿಫಿಕ್ನ ಮರಿನಾ ಸ್ಕ್ವೇರ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗಿರುತ್ತದೆ.
ಕನ್ನಡ