ಬೆಂಮಸಾಸಂಸ್ಥೆಗೆ ಮತ್ತೊಂದು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ

Greentech Safety Award 2016 ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ, ನವದೆಹಲಿಯ ಗ್ರೀನ್ಟೆಕ್ ಫೌಂಡೇಶನ್ ರವರು ನೀಡುವ ಪ್ರತಿಷ್ಠಿತ Greentech Safety Award 2016 Silver ಪ್ರಶಸ್ತಿಯು Public Utility Services Sector for outstanding achievements in Safety Management ವಿಭಾಗದಲ್ಲಿ ಲಭಿಸಿರುತ್ತದೆ. ಅಪತಗಳನ್ನು ಪರಿಣಾಮಕಾರಿಯಾಗಿ ಕಡಿಮೆಗೊಳಿಸಿ, ಪ್ರಯಾಣಿಕರ ಸುರಕ್ಷತೆಗಾಗಿ ಹಾಗೂ ಕಾರ್ಯ ನಿರ್ವಹಣ ಸ್ಥಳಗಳಾದ ಟಕ/ಕೇಂದ್ರೀಯ ಕಾರ್ಯಾಗಾರಗಳಲ್ಲಿ ಉತ್ತಮ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ರೂಪಿಸಿ ಜಾರಿಗೊಳಿಸುತ್ತಿರುವ ಸಂಸ್ಥೆಯ ಸಾಧನೆಯನ್ನು ಗುರುತಿಸಿ ಸದರಿ ಪ್ರಶಸ್ತಿಯನ್ನು ನೀಡಲಾಗಿದೆ. ದಿನಾಂಕ 30-08-2016 ರಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ.ಪ್ರಾನ್ಸಿಸ್ ಡಿಸೋಜ, ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು ಗೋವಾ ಸರ್ಕಾರ ರವರು ಈ ಪ್ರಶಸ್ತಿಯನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಕೆನರಾ ಬ್ಯಾಂಕಿನ ಮಾಜಿ ಸಿಎಂಡಿ ಶ್ರೀ.ದುಬೆ ಹಾಗೂ ಗ್ರೀನ್ಟೆಕ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ.ಕಮಲೇಶ್ವರ್ ಶರಣ್ ರವರು ಉಪಸ್ಥಿತರಿದ್ದರು. ಶ್ರೀ.ಬಿ.ವಿ.ಶ್ರೀನಿವಾಸ್, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು ಹಾಗೂ ಶ್ರೀ.ಚಿದಂಬರ.ಪಿ.ಎಂ., ವಿಭಾಗೀಯ ಸಂಚಾರ ಅಧಿಕಾರಿ, ಬಿಎಂಟಿಸಿ ರವರು ಸಂಸ್ಥೆಯ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕನ್ನಡ