ಬೆಂಮಸಾಸಂಸ್ಥೆಗೆ ಪ್ರತಿಷ್ಟಿತ BW Smart Cities Conclave & Award-2016

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ BW Smart Cities Conclave & Award - 2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆಯ ಚತುರ ಸಾರಿಗೆ ವ್ಯವಸ್ಥೆ ಸೇವೆಯ ಉಪಕ್ರಮಕ್ಕೆ ಸದರಿ ಪ್ರಶಸ್ತಿ ಲಭ್ಯವಾಗಿರುತ್ತದೆ. ಸದರಿ ಪ್ರಶಸ್ತಿಯನ್ನು ನವದೆಹಲಿಯಲ್ಲಿ ದಿನಾಂಕ 21-12-2016 ರಂದು ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಶ್ರೀ.ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು ರವರು ಶ್ರೀ.ಮನೋಜ್ ಸಿನ್ಹಾ, ಸನ್ಮಾನ್ಯ ಟೆಲಿಕಮ್ಯೂನಿಕೇಷನ್ಸ್ ಸಚಿವರು, ಭಾರತ ಸರ್ಕಾರ ರವರಿಂದ ಸ್ವೀಕರಿಸಿರುತ್ತಾರೆ. ಈ ಸಂಧರ್ಭದಲ್ಲಿ ಶ್ರೀ ನಾಗರಾಜ ಯಾದವ್, ಅಧ್ಯಕ್ಷರು, ಬಿಎಂಟಿಸಿ ಹಾಗೂ ಡಾ.ಏಕ್ರೂಪ್ ಕೌರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ರವರು ಉಪಸ್ಥಿತರಿದ್ದರು. BW Smart Cities Conclave & Award ಭಾರತದ ಪ್ರತಿಷ್ಠಿತ ನಾಗರೀಕ ಗೌರವವಾಗಿರುತ್ತದೆ
ಕನ್ನಡ