ಬೆಂಮಸಾಸಂಸ್ಥೆಗೆ ಪ್ರತಿಷ್ಟಿತ Volvo Sustainability Mobility Award-2016

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ Volvo Sustainability Mobility Award 2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆಯ Route planning for efficient mobility (ಸಮರ್ಥ ಸಾರಿಗೆ ಮಾರ್ಗ ಯೋಜನೆ) ಉಪಕ್ರಮಕ್ಕೆ ಪ್ರಶಸ್ತಿ ಲಭ್ಯವಾಗಿರುತ್ತದೆ. ಸದರಿ ಪ್ರಶಸ್ತಿಯನ್ನು ನವದೆಹಲಿಯಲ್ಲಿ ದಿನಾಂಕ 12-01-2017 ರಂದು ನಡೆದ 8ನೇ Volvo Nobel Memorial ಸಮ್ಮೇಳನದಲ್ಲಿ ಪ್ರಧಾನ ಮಾಡಲಾಯಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಏಕ್ರೂಪ್ ಕೌರ್, ಭಾ.ಆ.ಸೇ. ರವರು ಶ್ರೀ.ಕಮಲ್ ಬಾಲಿ, ವ್ಯವಸ್ಥಾಪಕ ನಿರ್ದೇಶಕರು, ವೋಲ್ವೋ ಇಂಡಿಯ ಪ್ರೈವೇಟ್ ಲಿಮಿಟೆಡ್ ರವರಿಂದ ಸ್ವೀಕರಿಸಿರುತ್ತಾರೆ. ಈ ಸಂಧರ್ಭದಲ್ಲಿ ಶ್ರೀ. ಡಾನ್ ಲೆರ್ಸ್ಟ್ರಾಮ್, ಹಿರಿಯ ಉಪಾಧ್ಯಕ್ಷರು, ಗ್ಲೋಬಲ್ ಮ್ಯಾನ್ಯೂಫ್ಯಾಕ್ಚರಿಂಗ್ ಹಾಗೂ ಶ್ರೀ ಥಾಮಸ್ ಟುನ್ಬರ್ಗ್, ಹಿರಿಯ ಉಪಾಧ್ಯಕ್ಷರು, ಗ್ಲೋಬಲ್ ಪ್ರಾಡೆಕ್ಟ್ ಡೆವಲಪ್ಮೆಂಟ್ ರವರುಗಳು ಉಪಸ್ಥಿತರಿದ್ದರು.
ಕನ್ನಡ