ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್ನಿಂದ ಐಟಿಪಿಲ್ಗೆ ಸಂಚರಿಸುವ ವೋಲ್ವೋ ಫೀಡರ್ ಮಾರ್ಗಗಳಲ್ಲ್ಲಿ ಪ್ರಯಾಣಿಸಲು ರೂ.80/- ರ ವಿಶೇಷ ನಿಕ ಹಾಗೂ ರೂ.1500/- ರ

ವಿಷಯ : ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್ನಿಂದ ಐಟಿಪಿಲ್ಗೆ ಸಂಚರಿಸುವ ವೋಲ್ವೋ ಫೀಡರ್ ಮಾರ್ಗಗಳಲ್ಲ್ಲಿ ಪ್ರಯಾಣಿಸಲು ರೂ.80/- ರ ವಿಶೇಷ ನಿಕ ಹಾಗೂ ರೂ.1500/- ರ ಮಾಸಿಕ ಪಾಸುಗಳನ್ನು ಪರಿಚಯಿಸಿರುವ ಬಗ್ಗೆ. ******* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪೂರ್ವ ಪಶ್ಚಿಮ ಕಾರಿಡಾರ್ನಲ್ಲಿ ಕಾರ್ಯಾಚರಣೆಯಾಗುತ್ತಿರುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಾಮಿ ವಿವೇಕಾನಂದ ಮೆಟ್ರೋ ಸ್ಟೇಷನ್ ನಿಂದ ಐಟಿಪಿಲ್ಗೆ ದಿನಾಂಕ:16.02.2017 ರಿಂದ 23 ವೊಲ್ವೋ ಅನುಸೂಚಿಗಳಲ್ಲಿ ಪ್ರತಿ 5 ನಿಮಿಷಕ್ಕೊಂದರಂತೆ 229 ಏಕಮುಖ ಸುತ್ತುವಳಿಗಳಲ್ಲಿ ಮೆಟ್ರೋ ಫೀಡರ್ ಸೇವೆಗಳನ್ನು ಪ್ರಾರಂಭಿಸುತ್ತಿದೆ ಮತ್ತು ಸಾಮಾನ್ಯ ಸೇವೆಗಳಲ್ಲಿ 16 ಅನುಸೂಚಿಗಳೊಂದಿಗೆ 94 ಸುತ್ತುವಳಿಗಳ ಮೆಟ್ರೋ ಫೀಡರ್ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸದರಿ ವಜ್ರ ಮೆಟ್ರೋ ಫೀಡರ್ ಸೇವೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಚಿಲ್ಲರೆ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ವಿಶೇಷ ರಿಯಾಯಿತಿ ದರದ ರೂ.80/- (ರೂ.05/- ಸೇವಾ ತೆರಿಗೆ ಸೇರಿ ರೂ.85/-) ರ ನಿಕ ಮತ್ತು ರೂ.1500/- (ರೂ.90/- ಸೇವಾ ತೆರಿಗೆ ಸೇರಿ ರೂ.1590/-) ಮಾಸಿಕ ಪಾಸುಗಳನ್ನು ಪರಿಚಯಿಸಲಾಗಿದೆ. ವಜ್ರ ಮೆಟ್ರೋ ಫೀಡರ್ ರ ರೂ.80 ನಿಕ ಪಾಸು ಹಾಗೂ ರೂ.1500 ಮಾಸಿಕ ಪಾಸು ಹೊಂದಿದ ಪ್ರಯಾಣಿಕರಿಗೆ ಕಲ್ಪಿಸಿರುವ ಸೌಲಭ್ಯಗಳು : 1. ಎಸ್.ವಿ ಮೆಟ್ರೋ ಸ್ಟೇಷನ್ ನಿಂದ ಐಟಿಪಿಎಲ್ಗೆ ಕಾರ್ಯಾಚರಣೆಯಾಗುವ ವೊಲ್ವೋ ಮತ್ತು ಸಾಮಾನ್ಯ ಫೀಡರ್ ಮಾರ್ಗಗಳಲ್ಲಿ ಮತ್ತು ಈ ಕೆಳಕಂಡ ಮಾರ್ಗಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. • ಎಸ್.ವಿ.ಮೆಟ್ರೋ ಸ್ಟೇಷನ್ ನಿಂದ ಟಿನ್ಪ್ಯಾಕ್ಟರಿ- ಹೂಡಿ- ಐಟಿಪಿಎಲ್. • ಎಸ್.ವಿ.ಮೆಟ್ರೋಸ್ಟೇಷನ್ ನಿಂದ ಟಿನ್ಪ್ಯಾಕ್ಟರಿ- ಮಾರತ್ತಹಳ್ಳಿ ಬ್ರಿಡ್ಜ್- ಕುಂದಲಹಳ್ಳಿ- ಐಟಿಪಿಎಲ್. ಸೂಚನೆ: 1) ಮೇಲ್ಕಂಡ ಮಾರ್ಗಗಳಲ್ಲಿ ಎಸ್.ವಿ ಮೆಟ್ರೋ/ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಮೂಲಕ ಐಟಿಪಿಎಲ್ಗೆ ಕಾರ್ಯಾಚರಣೆಯಾಗುವ ಇತರೆ ವಾಹನ/ಅನುಸೂಚಿಗಳಲ್ಲಿ ಎಸ್.ವಿ ಮೆಟ್ರೋ ಸ್ಟೇಷನ್ ನಿಂದ ಐಟಿಪಿಎಲ್ಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. 2) ಸದರಿ ವಿಶೇಷ ನಿಕ/ ಮಾಸಿಕ ಪಾಸು ಹೊಂದಿದ ಪ್ರಯಾಣಿಕರು ಮೇಲ್ಕಂಡ ಮಾರ್ಗಗಳಲ್ಲಿ ಸಂಸ್ಥೆಯ ಇನ್ನಿತರ ಅನುಸೂಚಿಗಳಲ್ಲಿ ಸಹ ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ಹತ್ತಲು - ಪ್ರಯಾಣಿಸಲು - ಇಳಿಯಲು ಅವಕಾಶ ಕಲ್ಪಿಸಲಾಗಿದೆ. 2. ನಿಕ ಪಾಸನ್ನು ಹೊಂದಿದ ಪ್ರಯಾಣಿಕರು ಬೆಂಮಸಾಸಂಸ್ಥೆಯ ವಾಹನ ಅಪಾತದಲ್ಲಿ ಮೃತರಾದಲ್ಲಿ/ಸಂಪೂರ್ಣ ಅಂಗವಿಕಲರಾದಲ್ಲಿ ರೂ.1.00 ಲಕ್ಷಗಳ ವಿಮಾ ಸೌಲಭ್ಯವನ್ನು ಹಾಗೂ ರೂ.20,000/- ಗಳ ವೈಧ್ಯಕೀಯ ವೆಚ್ಚದ ಮರುಪಾವತಿಯ ಸೌಲಭ್ಯವನ್ನು ಹಾಗೂ ಮಾಸಿಕ ಪಾಸನ್ನು ಹೊಂದಿದ ಪ್ರಯಾಣಿಕರು ವಾಹನ ಅಪಾತದಲ್ಲಿ ಮೃತರಾದಲ್ಲಿ/ಸಂಪೂರ್ಣ ಅಂಗವಿಕಲರಾದಲ್ಲಿ ರೂ.05.00 ಲಕ್ಷಗಳ ವಿಮಾ ಸೌಲಭ್ಯವನ್ನು ಹಾಗೂ ರೂ. 50,000/- ವೈಧ್ಯಕೀಯ ವೆಚ್ಚದ ಮರುಪಾವತಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ. • ರೂ.80/- (ರೂ.05/- ಸೇವಾ ತೆರಿಗೆ ಸೇರಿ ರೂ.85/-) ರ ವಜ್ರ ಮೆಟ್ರೋ ಫೀಡರ್ ನಿಕ ಪಾಸು ದಿನಾಂಕ: 16.02.2017 ರಿಂದ ಜಾರಿಗೆ ಬರುತ್ತದೆ. • ರೂ.1500/- (ರೂ.90/- ಸೇವಾ ತೆರಿಗೆ ಸೇರಿ ರೂ.1590/-) ರ ವಜ್ರ ಮೆಟ್ರೋ ಫೀಡರ್ ಮಾಸಿಕ ಪಾಸು ದಿನಾಂಕ:01.03.2017 ರಿಂದ ಜಾರಿಗೆ ಬರುತ್ತದೆ.
ಕನ್ನಡ