ಬಿಎಂಟಿಸಿಯ ಖಚತುರ ಸಾರಿಗೆ ವ್ಯವಸ್ಥೆಖ ಯ ಲೋಕಾರ್ಪಣೆ ಕಾರ್ಯಕ್ರಮ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ನಗರ ಸಾರಿಗೆ ಸೇವೆಗಳ ಆಚರಣೆ ವ್ಯವಸ್ಥೆಯಲ್ಲಿ ವಿನೂತನವಾಗಿ ಅಳವಡಿಸಿಕೊಂಡಿರುವ ಚತುರ ಸಾರಿಗೆ ವ್ಯವಸ್ಥೆಯನ್ನು ಶ್ರೀ.ಸಿದ್ಧರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ತಮ್ಮ ಅಮೃತ ಹಸ್ತದಿಂದ ದಿನಾಂಕ 25.05.2016 ರಂದು ಸಂಸ್ಥೆಯ ಕೇಂದ್ರ ಕಛೇರಿ ಆವರಣದಲ್ಲಿ ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉಸ್ತುವಾರಿ ಸಚಿವರು, ಕೋಲಾರ ಜಿಲ್ಲೆ ಮತ್ತು ಅಧ್ಯಕ್ಷರು ಕ.ರಾ.ರ.ಸಾ.ನಿ ರವರ ನಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಿದರು. ಶ್ರೀ ಅನಂತಕುಮಾರ್, ಸನ್ಮಾನ್ಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು, ಶ್ರೀ ಕೆ.ಜೆ.ಜಾರ್ಜ್, ಸನ್ಮಾನ್ಯ ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರು, ಶ್ರೀ ಆರ್.ರೋಷನ್ ಬೇಗ್, ಸನ್ಮಾನ್ಯ ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರು, ಶ್ರೀ ಬಿ.ಎನ್.ಮಂಜುನಾಥ ರೆಡ್ಡಿ, ಪೂಜ್ಯ ಮಹಾಪೌರರು, ಬಿಬಿಎಂಪಿ, ಶ್ರೀ ದಿನೇಶ್ ಗುಂಡೂರಾವ್, ಸನ್ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು, ಶ್ರೀ ಕೃಷ್ಣಬೈರೇಗೌಡ, ಸನ್ಮಾನ್ಯ ಕೃಷಿ ಸಚಿವರು, ಶ್ರೀ ಆರ್.ವಿ.ವೆಂಕಟೇಶ್, ಮಾನ್ಯ ಮುಖ್ಯ ಸಚೇತಕರು, ಶ್ರೀ ಆರ್.ವಿ.ದೇವರಾಜ್, ಮಾನ್ಯ ವಿಧಾನಸಭಾ ಸದಸ್ಯರು, ಚಿಕ್ಕಪೇಟೆ ಕ್ಷೇತ್ರ, ಶ್ರೀ ಕೆ.ಗೋವಿಂದರಾಜು, ಮಾನ್ಯ ವಿಧಾನಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಶ್ರೀಮತಿ ಹೇಮಲತ ಗೋಪಾಲಯ್ಯ, ಉಪಮಹಾಪೌರರು, ಶ್ರೀ ಡಿ.ಚಂದ್ರಪ್ಪ, ಬಿಬಿಎಂಪಿ ಸದಸ್ಯರು, ಶ್ರೀ ನಾಭಿರಾಜ ಜೈನ್, ಅಧ್ಯಕ್ಷರು, ಬಿಎಂಟಿಸಿ, ಶ್ರೀ ವಿ.ಎಸ್.ಆರಾಧ್ಯ, ಉಪಾಧ್ಯಕ್ಷರು, ಬಿಎಂಟಿಸಿ, ಇವರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಗಳಾಗಿ ಭಾಗವಹಿಸಿದರು. ಡಾ||ಇ.ವಿ.ರಮಣರೆಡ್ಡಿ, ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ, ಡಾ||ಏಕ್ರೂಪ್ಕೌರ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಂಸಿ ಹಾಗೂ ಇತರೇ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಗರ ಸಾರಿಗೆಯಲ್ಲೇ 6400 ವಾಹನ ಬಲದೊಂದಿಗೆ 6216 ಅನುಸೂಚಿಗಳನ್ನು ಆಚರಣೆ ಮಾಡಿ 5.13 ಮಿಲಿಯನ್ ಪ್ರಯಾಣಿಕರ ಸುತ್ತುವಳಿಗಳನ್ನು ಆಚರಣೆ ಮಾಡುವ ಏಕೈಕ ಸಾರಿಗೆ ಸಂಸ್ಥೆಯಾಗಿದೆ. ಸಂಸ್ಥೆಯು ಬೆಂಗಳೂರು ನಗರ ಮತ್ತು ಹೊರವಲಯದ ಜನರ ಅನುಕೂಲಕ್ಕೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತಿದ್ದು ಟೀಕೆಟು ದರದಲ್ಲಿ ವ್ಯೆವಿಧ್ಯತೆ ಹಾಗೂ ವಿವಿದ ದರದ ಪಾಸುಗಳನ್ನು ಅಳವಡಿಸಿಕೊಂಡು ಎಲ್ಲಾ ವರ್ಗದ ಜನರಿಗೂ ಅನುಕೂಲವನ್ನು ಕಲ್ಪಿಸಿದೆ. ಸಂಸ್ಥೆಯು ಚತುರ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದು, ಸದರಿ ಯೋಜನೆಯಲ್ಲಿ ವಾಹನಗಳ ಟ್ರ್ಯಾಕಿಂಗ್, ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ ಹಾಗೂ ಜಿ.ಪಿ.ಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಐಟಿಎಸ್ ಯೋಜನೆಯ ವೈಶಿಷ್ಟ್ಯತೆ ಈ ಕೆಳಗಿನಂತಿವೆ. 1. ಜಿಪಿಎಸ್ ಆಧಾರಿತ ವಾಹನ ಟ್ರ್ಯಾಕಿಂಗ್ ವ್ಯವಸ್ಥೆ • ಒಟ್ಟು 6400 ವಾಹನಗಳಲ್ಲಿ ವಿಟಿಯು ಗಳನ್ನು ಅಳವಡಿಸಲಾಗಿದೆ. • ನೈಜ ಸಮಯದ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆ. • ಆಚರಣೆ ಅಂಕಿಅಂಶ ಮತ್ತು ಎಂಐಎಸ್ ವರದಿಗಳ ಸಂಗ್ರಹಣೆ. • ಬಸ್ ಮತ್ತು ನಿಯಂತ್ರಣ ಕೇಂದ್ರ ನಡುವೆ ಟು ವೇ ಕಮ್ಯನಿಕೇಷನ್. 2. ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳು(ಇಟಿಎಂ) • ಒಟ್ಟು 10000 ಇಟಿಎಂಗಳನ್ನು ಟಕಗಳಿಗೆ ಒದಗಿಸಲಾಗಿರುತ್ತದೆ. • ಜಿಪಿಆರ್ಎಸ್ ವೈಶಿಷ್ಟ್ಯತೆಯನ್ನೊಳಗೊಂಡ ಇಟಿಎಂಗಳು. • ಇಎಂವಿ ಸರ್ಟಿಡ್-ಸಂಪರ್ಕ ರಹಿತ ಸ್ಮಾರ್ಟ್ ಕಾರ್ಡ್ನ ಬೆಂಬಲ. 3. ಪ್ರಯಾಣಿಕರ ಮಾಹಿತಿ ವ್ಯವಸ್ಥೆ (ಪಿಐಎಸ್)- • 35 ಪ್ರಯಾಣಿಕರ ಮಾಹಿತಿ ಪ್ರದರ್ಶಕಗಳನ್ನು 11 ಪ್ರಮುಖ ಬಸ್ ನಿಲ್ದಾಣಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ವಿಜಯನಗರ, ಜಯನಗರ, ಯಶವಂತಪುರ ಜಯನಗರ, ಕೆಂಗೇರಿ, ಐಟಿಪಿಎಲ್, ಮೈಸೂರು ರೋಡ್ (ಎಂಸಿಟಿಸಿ) ಹಾಗೂ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುತ್ತದೆ. • ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣಿಕರ ಮಾಹಿತಿ ಪ್ರದರ್ಶಕಗಳ ಮಾಹಿತಿ ವೀಕ್ಷಣೆ. • ಸಹಾಯವಾಣಿ ಡೋಲ್ ಫ್ರೀ ಸಂಖ್ಯೆ: 1800 425 1663 ಮೂಲಕ ನೈಜ ಸಮಯದ ಬಸ್ ಮಾಹಿತಿ. • ಮಾಹಿತಿಯು ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಲಭ್ಯ. 4. ನಿಯಂತ್ರಣ ಕೇಂದ್ರ ಮತ್ತು ದತ್ತಾಂಶ ಕೇಂದ್ರ • ಐಟಿಎಸ್ ನಿಯಂತ್ರಣ ಕೊಠಡಿ 24*7 ಕಾರ್ಯಾಚರಣೆಗೊಳ್ಳುವುದು. • ಸಂಸ್ಥೆಯ ವಾಹನಗಳನ್ನು ನೈಜ ಸಮಯದಲ್ಲಿ ಟ್ರ್ಯಾಕಿಂಗ್ ಹಾಗೂ ಮೇಲ್ವಿಚಾರಣೆ ಮಾಡಲಾಗುವುದು. • ಬಸ್ ಮತ್ತು ನಿಯಂತ್ರಣ ಕೇಂದ್ರದ ನಡುವೆ ಟು ವೇ ಕಮ್ಯನಿಕೇಷನ್. • ಅನುಚಿತ ಟನೆಯ ನಿರ್ವಹಣೆ. • ವೀಡಿಯೋವಾಲ್. 5. ಮೊಬೈಲ್ ಅಪ್ಲಿಕೇಷನ್ ಯೋಜನೆ. • ಪ್ರಯಾಣಿಕರು ಪ್ರಯಾಣಿಸಲು ಇಚ್ಚಿಸುವ ಮಾರ್ಗದ ವೇಳಾ ಪಟ್ಟಿ, ದರ ಹಾಗೂ ಮಾರ್ಗದ ಮಾಹಿತಿಯನ್ನು ಪಡೆಯಲು ಸಹಾಯವಾಗುತ್ತದೆ. • ಪ್ರಯಾಣಿಕರು ಬಸ್ಸು ಬರುವ ಸಮಯವನ್ನು (ETA) ತಿಳಿದು ತಮ್ಮ ಪ್ರಯಾಣವನ್ನು ಯೋಜನೆ ಮಾಡಬಹುದಾಗಿರುತ್ತದೆ. • ಪ್ರಯಾಣಿಕರು ತಮ್ಮ ಸ್ಥಳಕ್ಕೆ ಹತ್ತಿರದ ಬಸ್ಸು ನಿಲ್ದಾಣಗಳನ್ನು ಸ್ಥಳ ಗುರುತಿಸಿ ಪ್ರಯಾಣವನ್ನು ಯೋಜನೆ ಮಾಡಬಹುದಾಗಿರುತ್ತದೆ. • ಪ್ರಯಾಣಿಕರು ಇಚ್ಚಿಸಿದ ಪ್ರಮುಖ ಬಸ್ ನಿಲ್ದಾಣದ ಹಾಗೂ ವಿಮಾನ ನಿಲ್ದಾಣದ ಪ್ರಯಾಣಿಕರ ಮಾಹಿತಿ ಪ್ರದರ್ಶಕದಲ್ಲಿ ಪ್ರದರ್ಶನಗೊಳ್ಳುವ ಬಸ್ಸುಗಳ ಮಾಹಿತಿಯನ್ನು ನೋಡಬಹುದಾಗಿರುತ್ತದೆ. ಈ ಮೇಲಿನ ವೈಶಿಷ್ಟ್ಯತೆಗಳನ್ನೊಳಗೊಂಡ ಐಟಿಎಸ್ ಯೋಜನೆಯ ಅನುಕೂಲಗಳು ಈ ಕೆಳಗಿನಂತಿವೆ. • ಆಚರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ. • ಈ ವ್ಯವಸ್ಥೆಯಿಂದ ಬೆಂಮಸಾಸಂಸ್ಥೆಯು, ತನ್ನ ಕಾರ್ಯಾಚರಣೆ ಮೇಲ್ವಿಚಾರಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಮೂಲಕ ವಾಹನ ಹಾಗೂ ಮಾನವ ಸಂಪನ್ಮೂಲದ ಸದ್ಬಳಕೆಯಾಗಲಿದೆ. • ನಿಯಂತ್ರಣ ಕೊಠಡಿ ಮೇಲ್ವಿಚಾರಣೆ ಮಾಡುವ ಪ್ರಮುಖ ಅಂಶಗಳು: ಅತಿಯಾದ ವೇಗ ಚಾಲನೆ, ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದಿರುವಿಕೆ, ಸುತ್ತುವಳಿಗಳ ರದ್ಧತಿ/ಅಪೂರ್ಣ ಕಾರ್ಯಾಚರಣೆ, ಮಾರ್ಗ ಬದಲಾವಣೆ, ಟಕಗಳಿಂದ ತಡವಾಗಿ ನಿರ್ಗಮನ, ಟಕಗಳಿಗೆ ಮುಂಚಿತವಾಗಿ ಆಗಮನ, ಇತ್ಯಾದಿ. • ಮೇಲ್ವಿಚಾರಣೆ ಹಾಗೂ ಸಂವೇದನಾಶೀಲತೆಯಿಂದ, ಚಾಲಕರ ನಡವಳಿಕೆಯಲ್ಲಿ ಸುಧಾರಣೆ ಉಂಟಾಗುವುದು ಮತ್ತು ಪ್ರಯಾಣ ಸುರಕ್ಷಿತವಾಗಿರುತ್ತದೆ. ಗುಣಾತ್ಮಕ ಸಾರಿಗೆ ಸೇವೆ ಒದಗಿಸುವ ಮೂಲಕ ಸೇವೆಯ ಕುರಿತಾದ ದೂರುಗಳನ್ನು ಕಡಿಮೆ ಮಾಡಲು ಅನುಕೂಲವಾಗಲಿದೆ. • ಅಪಾತ ಹಾಗೂ ವಾಹನಗಳ ಬ್ರೇಕ್ಡೌನ್ ಸಮಯದಲ್ಲಿ ತ್ವರಿತ ಪ್ರತಿಕ್ರಿಯೆ. • ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಪ್ರಯಾಣಿಕರ ಮಾಹಿತಿ ಪ್ರದರ್ಶಕ ಗಳ ಮೂಲಕ ಸಾರ್ವಜನಿಕರಿಗೆ ಸಾರಿಗೆ ಸೇವೆಗಳ ಬಗ್ಗೆ ನಿಖರ ಹಾಗೂ ಆ ಕ್ಷಣದ ನೈಜ ಮಾಹಿತಿ ಲಭ್ಯವಾಗುತ್ತದೆ. • ಸ್ಮಾರ್ಟ್ ಪೋನ್ ಬಳಕೆ ಮಾಡದಿರುವ ಪ್ರಯಾಣಿಕರಿಗಾಗಿ 1800 425 1663 ಸಹಾಯವಾಣಿ ಮೂಲಕ ಆ ಕ್ಷಣದಲ್ಲಿ ಬರುವ ಬಸ್ಸುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. • ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಕಾಯುವುದು ಕಡಿತಗೊಳ್ಳುವುದು. • ಸಮಯಕ್ಕೆ ಸರಿಯಾಗಿ ಸಾರಿಗೆ ಸೇವೆಗಳ ಲಭ್ಯತೆಯಿಂದ ಸಾರ್ವಜನಿಕ ಸಾರಿಗೆಯ ಬಳಕೆ ಹೆಚ್ಚುವುದು. • ಮೊಬೈಲ್ ಮೂಲಕವೂ ನೈಜ ಸಮಯದ ಬಸ್ ಮಾಹಿತಿಯು ದೊರೆಯುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಬಹುದಾಗಿರುತ್ತದೆ. • ಮೆಟ್ರೊ ಸಹಯೋಗದೊಂದಿಗೆ ಕಾರ್ಯಾಚರಣೆಯಾಗುವ ಫೀಡರ್ ಸೇವೆಗಳ ಬಗ್ಗೆ ಮಾಹಿತಿ ದೊರೆಯುವುದರಿಂದ ಈ ಸೇವೆಗಳನ್ನು ಬಳಸುವವರಿಗೆ ತುಂಬ ಉಪಯುಕ್ತವಾಗಿರುತ್ತದೆ. ಆಚರಣೆಯ ದಕ್ಷತೆ ಹೆಚ್ಚಿಸಿ, ವೆಚ್ಚವನ್ನು ನಿಯಂತ್ರಿಸುವ ಮೂಲಕ ಸಂಸ್ಥೆಯು ಸಧೃಢವಾಗಿ ಅಭಿವೃದ್ಧಿಯತ್ತ ಮುನ್ನಡೆಯಲು ಸಹಕಾರಿಯಾಗಿರುತ್ತದೆ. ಒಟ್ಟಾರೆಯಾಗಿ, ಚತುರ ಸಾರಿಗೆ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಅನೇಕ ವಿಶಿಷ್ಟ ಹಾಗೂ ಉನ್ನತ ವ್ಯವಸ್ಥೆಗಳನ್ನು ಜಾರಿಗೊಳಿಸಲು ಅಡಿಪಾಯ ಹಾಕಿರುತ್ತದೆ. ಸದರಿ ಯೋಜನೆಯು ದೇಶದ ನಗರ ಸಾರಿಗೆಗಳಲ್ಲಿಯೇ ಈ ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಪ್ರಪ್ರಥಮ ಯೋಜನೆಯಾಗಿರುತ್ತದೆ. ಈ ಚತುರ ಸಾರಿಗೆ ವ್ಯವಸ್ಥೆಯ ಸಮರ್ಪಣೆಯು ಕಾರ್ಯವೈಖರಿಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಲಿರುತ್ತದೆ. ಸದರಿ ವ್ಯವಸ್ಥೆಯು ಕಾಲಕ್ರಮೇಣ ಸ್ಥಿರ ಹಾಗೂ ಪಕ್ವಗೊಳ್ಳುವುದರೊಂದಿಗೆ, ಸಂಸ್ಥೆಯ ಸಿಬ್ಬಂದಿ ಹಾಗೂ ಕಾರ್ಯಾಚರಣೆಯಲ್ಲಿ ಶಿಸ್ತು ಸುಧಾರಣೆಗೊಳ್ಳುತ್ತದೆ. ಪ್ರಯಾಣಿಕರ ಸಲಗಳು ವ್ಯವಸ್ಥೆಯ ನಿಖರತೆಯನ್ನು ಸುಧಾರಣೆಗೊಳಿಸಲು ಅತ್ಯವಶ್ಯಕವಾಗಿರುತ್ತದೆ.
ಕನ್ನಡ