ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ನ ಉಪಸ್ಥಿತಿಯಲ್ಲಿ ದಿನಾಂಕ 15ನೇ ಫೆಬ್ರವರಿ 2017 ರಂದು ಹೊಸಕೋಟೆಯಲ್ಲಿ ನೆರವೇರಿಸಿದರು. ಶ್ರೀ ಎನ್.ನಾಗರಾಜ್, ಎಂ.ಟಿ.ಬಿ, ಮಾನ್ಯ ಶಾಸಕರು ಹೊಸಕೋಟೆ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರವರು ಸಮಾರಂಭದ ಅಧಕ್ಷತೆಯನ್ನು ವಹಿಸಿದ್ದರು. ಶ್ರೀ ಹೆಚ್.ಸಿ.ಮಹದೇವಪ್ಪ, ಮಾನ್ಯ ಲೋಕೋಪಯೋಗಿ ಸಚಿವರು, ಶ್ರೀ ಕೃಷ್ಣಬೈರೇಗೌಡ, ಮಾನ್ಯ ಕೃಷಿ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು, ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು. ಶ್ರೀ ಎಂ.ನಾಗರಾಜು ಯಾದವ್, ಅಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶ್ರೀ.ಬಿ.ಗೋವಿಂದರಾಜು, ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಡಾ||ಬಿ.ಬಸವರಾಜು, ಭಾಆಸೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಡಾ||ಏಕ್ರೂಪ್ಕೌರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸಂಸ್ಥೆ, ಬೆಂ.ಮ.ಸಾ.ಸಂಸ್ಥೆಯ ಮಂಡಳಿ ನಿರ್ದೇಶಕರುಗಳು, ಹಾಗೂ ಇತರೆ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೊಸಕೋಟೆ ಬಸ್ ಟರ್ಮಿನಲ್ ಯೋಜನೆಯ ವಿವರ: ಬೆಮಸಾಸಂಸ್ಥೆಯು ಬೆಂಗಳೂರು ಗ್ರಾಮಾಂತರ ಬಸ್ ಪ್ರಯಾಣಿಕರಿಗೆ ವಿನೂತನ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಹೊಸಕೋಟೆ ಬಸ್ ಟರ್ಮಿನಸ್ ಅನ್ನು 1 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಲು 20 ಕೋಟಿರೂಗಳ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸದರಿ ಬಸ್ ಟರ್ಮಿನಸ್ ನ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯು ಉಚಿತವಾಗಿ ನೀಡಿದ್ದು, ಕರ್ನಾಟಕ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆ (SDP) ಅಡಿಯಲ್ಲಿ ರೂ. 20 ಕೋಟಿಗಳ ಅನುದಾನವನ್ನು ನೀಡಿದೆ. ಈ ಬಸ್ ಟರ್ಮಿನಸ್ನ ನಿರ್ಮಾಣ ಕಾಮಗಾರಿಯನ್ನು ಸುಮಾರು 18 ತಿಂಗಳುಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ನೂತನ ಹೊಸಕೋಟೆ ಬಸ್ ಟರ್ಮಿನಸ್ನಲ್ಲಿ ಲಭ್ಯವಾಗಲಿರುವ ಮೂಲ ಸೌಲಭ್ಯಗಳು: ನೆಲ ಮಾಳಿಗೆ: ದ್ವಿದ್ವಚಕ್ರ ಮತ್ತು ಕಾರುಗಳ ನಿಲುಗಡೆ ನೆಲ ಅಂತಸ್ತು 1) 3 ಬಸ್ ಬೇಗಳು 2) ಪ್ರಯಾಣಿಕರ ಸೌಲಭ್ಯಗಳ ಮಳಿಗೆ 3) ಆರ್.ಓ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ 4) ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ 5) ಆಧುನಿಕ ಶೌಚಾಲಯಗಳ ವ್ಯವಸ್ಥೆ 6) ಲಿಫ್ಟ್ ವ್ಯವಸ್ಥೆ 7) ಮಹಿಳಾ ನಿರೀಕ್ಷಣಾ ಕೊಠಡಿ 8) ತಾಯಂದಿರ ಕೊಠಡಿ 9) ಪಾಸ್ ಕೌಂಟರ್ 10) ಎಲ್.ಇ.ಡಿ. ಲೈಟಿಂಗ್ ವ್ಯವಸ್ಥೆ 11) ಮಳೆ ನೀರು ಕೊಯ್ಲ ಪದ್ದತಿ ಮೆಜನೈನ್ ಅಂತಸ್ತು 1) ಬೆಂಮಸಾಸಂಸ್ಥೆ ಕಚೇರಿಗಳು 2) ಉಪಾಹಾರ ಗೃಹ ಮೊದಲನೇ ಅಂತಸ್ತು 1) ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ(ರಾತ್ರಿ) 2) ಕಚೇರಿ ಜಾಗಗಳು ಪ್ರಸ್ತುತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸಕೋಟೆಯಿಂದ 32 ಮಾರ್ಗಗಳ 133 ಅನುಸೂಚಿಗಳಲ್ಲಿ 977 ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡುತ್ತಿದೆ ಹಾಗೂ ಹೊಸಕೋಟೆ ಮಾರ್ಗವಾಗಿ ಸುತ್ತಮುತ್ತಲ ಗ್ರಾಮಗಳಿಗೆ ಒಟ್ಟು 87 ಮಾರ್ಗಗಳ 198 ಅನುಸೂಚಿಗಳಲ್ಲಿ 1437 ಸುತ್ತುವಳಿಗಳು ಆಚರಣೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಹೊಸಕೋಟೆ ಬಸ್ ಟರ್ಮಿನಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಾಗೂ ಸದರಿ ಬಸ್ ಟರ್ಮಿನಸ್ ಅನ್ನು ಸಂಚಾರ ವ್ಯವಸ್ಥೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಕನ್ನಡ