ದಿನಾಂಕ 04.10.2016 ರಂದು 81 ನೇ ಬಸ್ ದಿನ ಆಚರಿಸುತ್ತಿರುವ ಬಗ್ಗೆ

ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಖಬಸ್ ದಿನಖ ವನ್ನು ಆಚರಿಸಲಾಗುತ್ತಿದೆ. ಸಂಸ್ಥೆಯು ಹಿಂದಿನ 6 ವರ್ಷಗಳಿಂದ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ. ಅಕ್ಟೋಬರ್-2016 ನೇ ಮಾಹೆಯಲ್ಲಿ ದಿನಾಂಕ: 04.10.2016 ಮಂಗಳವಾರದಂದು ಆಚರಿಸುವ ಬಸ್ ದಿನಾಚರಣೆಯು 81 ನೇ ಬಸ್ ದಿನಾಚರಣೆಯಾಗಿರುತ್ತದೆ. ಬೆಂ.ಮ.ಸಾ.ಸಂಸ್ಥೆಯು ಸೆಪ್ಟೆಂಬರ್-2016 ನೇ ಮಾಹೆಯಲ್ಲಿ ಹೊಸದಾಗಿ ಪರಿಚಯಿಸಿರುವ ಮಾರ್ಗಗಳ ವಿವರಗಳು ಈ ಕೆಳಕಂಡಂತಿವೆ. ಕ್ರ. ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಒಟ್ಟು ಅನುಸೂಚಿ ಮಾರ್ಗ 1 ಕೆಐಎಎಸ್-5ಎ ಜಂಬೂ ಸವಾರಿ ದಿಣ್ಣೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 1 ಆರ್ಬಿಐ ಲೇಔಟ್, ಜೆ.ಪಿ.ನಗರ 15 ನೇ ಕ್ರಾಸ್, ಜಯನಗರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಬಸವೇಶ್ವರ ಸರ್ಕಲ್, ಹೆಬ್ಬಾಳ 2 500-ಕ್ಯೂಸಿ ವರ್ತೂರು ಚಿಕ್ಕಮಾರನಹಳ್ಳಿ ಬಸ್ ನಿಲ್ದಾಣ 1 ವರ್ತೂರು ಕೊಡಿ, ವೈಟ್ಫೀಲ್ಡ್, ಹೂಡಿ, ಟಿನ್ಫ್ಯಾಕ್ಟರಿ, ಹೆಬ್ಬಾಳ, ಮೇಖ್ರಿವೃತ್ತ, ನ್ಯೂ ಬಿಇಎಲ್ ರಸ್ತೆ. 3 258-ಹೆಚ್ ಕೆಂಪೇಗೌಡ ಬಸ್ ನಿಲ್ದಾಣ ವರದನಾಯಕನಹಳ್ಳಿ 1 ಯಶವಂತಪುರ, ಜಾಲಹಳ್ಳಿ ಕ್ರಾಸ್, ನೆಲಮಂಗಲ, ಬೂದಿಹಾಳ್ ಗ್ರಾಮ, ಮಂಡಿಗೆರೆ ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ದಿನಾಂಕ: 02.10.2016 ರಿಂದ 08.010.2016 ರವರೆಗೆ ಖದಾನೋತ್ಸವ ಹಬ್ಬಖವನ್ನು ಆಚರಿಸುತ್ತಿದ್ದು, ಅಕ್ಟೋಬರ್-4 ರಂದು ಬಸ್ ದಿನಾಚರಣೆ ಪ್ರಯುಕ್ತ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ.
ಕನ್ನಡ