ದಿನಾಂಕ 04.03.2017 ರಂದು 86ನೇ ಬಸ್ ದಿನ ಆಚರಿಸುತ್ತಿರುವ ಬಗ್ಗೆ

ವಿಷಯ : ದಿನಾಂಕ 04.03.2017 ರಂದು 86ನೇ ಬಸ್ ದಿನ ಆಚರಿಸುತ್ತಿರುವ ಬಗ್ಗೆ. ******* ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಬಸ್ ದಿನವನ್ನು ಆಚರಿಸಲಾಗುತ್ತಿದೆ. ಮಾರ್ಚ್ 2017 ರ ಬಸ್ ದಿನವನ್ನು ದಿನಾಂಕ 04.03.2017 ರಂದು ಶನಿವಾರ ಆಚರಣೆ ಮಾಡಲಾಗುತ್ತಿದೆ. ಸಂಸ್ಥೆಯು ಹಿಂದಿನ 6 ವರ್ಷಗಳಿಂದ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ. ಮಾರ್ಚ್-2017 ನೇ ಮಾಹೆಯಲ್ಲಿ 04.03.2017 ರಂದು ಶನಿವಾರ ಆಚರಿಸುವ ಬಸ್ ದಿನಾಚರಣೆಯು 86ನೇ ಬಸ್ ದಿನಾಚರಣೆಯಾಗಿರುತ್ತದೆ. ಬೆಂ.ಮ.ಸಾ.ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ ಮಾರ್ಗಗಳ ವಿವರಗಳು ಈ ಕೆಳಕಂಡಂತಿವೆ. ಕ್ರ. ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಒಟ್ಟು ಅನುಸೂಚಿಗಳು ಮಾರ್ಗ 1 290ಈವೈ/1 ಕೆಂಪೇಗೌಡ ಬಸ್ ನಿಲ್ದಾಣ ಯಲಹಂಕ 2 ಟ್ಯಾನರಿ ರಸ್ತೆ 2 ಎಂಬಿಎಸ್-8ಇ ಕಲ್ಯಾಣನಗರ ಎಲೆಕ್ಟ್ರಾನಿಕ್ ಸಿಟಿ ವಿಪ್ರೊ ಗೇಟ್ 2 ಕಮ್ಮನ ಹಳ್ಳಿ, ಮಾರುತಿಸೇವಾನಗರ, ದೂಪನ ಹಳ್ಳಿ, ಮಡಿವಾಳ 3 500 ಡಿಪಿ ಗೊರಗುಂಟೆಪಾಳ್ಯ ಸೆಂಟ್ರಲ್ ಸಿಲ್ಕ್ ಬೋರ್ಡ್ 1 ಹೆಬ್ಬಾಳ, ಟಿನ್ ಫ್ಯಾಕ್ಟರಿ 4 290 ಇಎನ್ ಯಲಹಂಕ ನಾಗವಾರ 1 ರಾಮಕೃಷ್ನ ಹೆಗಡೆ ನಗರ 5 238 ಯುಸಿ ಕೆಂಪೇಗೌಡ ಬಸ್ ನಿಲ್ದಾಣ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್ 2 ಮಾಗಡಿ ರಸ್ತೆ 1ನೇ ಕ್ರಾಸ್, ವಿಜಯನಗರ, ಮೂಡಲಪಾಳ್ಯ 6 235ಎಬಿ ಕೃ.ರಾ.ಮಾರುಕಟ್ಟೆ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್ 1 ಮೈಸೂರು ರಸ್ತೆ ಬಸ್ ನಿಲ್ದಾಣ, ವಿಜಯನಗರ, ಮೂಡಲಪಾಳ್ಯ, ಕೆಂಗುಂಟೆ ಸರ್ಕಲ್ 7 243ಎಲ್ ಕೆಂಪೇಗೌಡ ಬಸ್ ನಿಲ್ದಾಣ ಲಿಂಗದೀರನಹಳ್ಳಿ 1 ಮಾಗಡಿ ರಸ್ತೆ 1ನೇ ಕ್ರಾಸ್, ಕೆ.ಹಚ್.ಬಿ ಕಾಲೋನಿ, ಸುಂಕದಕಟ್ಟೆ 8 500ಎಫ್ ಬಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾಡುಗೋಡಿ 2 ಅಗರ, ಮಾರತ್ ಹಳ್ಳಿ ಬ್ರಿಡ್ಜ್, ವರ್ತೂರು ಕೋಡಿ, ಹೋಪ್ ಫಾರಂ 9 289 ವೈ ಹೊಸಕೋಟೆ ದೇವನಹಳ್ಳಿ 1 ಬೂದಿಗೆರೆ ಕ್ರಾಸ್, ಮಂಡೂರು, ಬೂದಿಗೆರೆ 10 317 ಕ್ಯೂ ಎನ್ ಹೊಸಕೋಟೆ ನಂದಗುಡಿ 1 ದೊಡ್ಡ ಹಲ್ಲೂರಳ್ಳಿ, ಪಿಳ್ಳಗುಂಪೆ ಇಂಡಸ್ಟ್ರಿಯಲ್ ಎರಿಯಾ 11 ಚಕ್ರ-8 ಕಾಡಬಿಸನಹಳ್ಳಿ ಕಾಡಬಿಸನಹಳ್ಳಿ 6 ಮಾರತ್ ಹಳ್ಳಿ ಬ್ರಿಡ್ಜ್, ವೈಟ್ ಫೀಲ್ಡ್ ಟಿಟಿಎಂಸಿ, ಐಟಿಪಿಎಲ್ 12 ಚಕ್ರ-8ಎ ಕಾಡಬಿಸನಹಳ್ಳಿ ಕಾಡಬಿಸನಹಳ್ಳಿ 06 ಮಾರತ್ ಹಳ್ಳಿ ಬ್ರಿಡ್ಜ್, ವರ್ತೂರು ಕೋಡಿ, ಐಟಿಪಿಎಲ್ ಒಟ್ಟು 26 ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.
ಕನ್ನಡ