ಏರೋ ಇಂಡಿಯಾ-2017 ರ ಪ್ರದರ್ಶನ ವೀಕ್ಷಿಸಲು ಹೋಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ವಿಶೇಷ ಸಾರಿಗೆ ಸೌಲಭ್

ವಿಷಯ : ಏರೋ ಇಂಡಿಯಾ-2017 ರ ಪ್ರದರ್ಶನ ವೀಕ್ಷಿಸಲು ಹೋಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ಒದಗಿಸುವ ಬಗ್ಗೆ. ******** ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ಕೇಂದ್ರದಲ್ಲಿ ದಿನಾಂಕ: 14.02.2017 ರಿಂದ 18.02.2017 ರವರೆಗೆ ಏರೋ ಇಂಡಿಯಾ-2017 ಪ್ರದರ್ಶನ ವೀಕ್ಷಿಸಲು ಹೋಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಈ ಹಿಂದೆ ಏರೋ ಇಂಡಿಯಾ-2015 ಪ್ರದರ್ಶನದ ಸಮಯದಲ್ಲಿ ಒದಗಿಸಿದಂತೆ ಈ ಬಾರಿಯೂ ವಿಶೇಷ ಸಾರಿಗೆ ಸೌಲಭ್ಯವನ್ನು ಒದಗಿಸಲು ಯೋಜಿಸಿದ್ದು, ಸಾರ್ವಜನಿಕ ವೈಮಾನಿಕ ಪ್ರದರ್ಶನವು ಬೆಳಗ್ಗೆ 10.00 ಗಂಟೆ ಹಾಗೂ ಮಧ್ಯಾಹ್ನ 02.00 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ದಿನಾಂಕ: 14.02.2017 ರಿಂದ 18.02.2017 ರವರೆಗೆ ಬೆಳಗ್ಗೆ 08.00 ಗಂಟೆಯಿಂದ ನಗರದ ವಿವಧ ಭಾಗಗಳಿಂದ ಪ್ರದರ್ಶನ ನಡೆಯುವ ಸ್ಥಳಕ್ಕೆ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ವಿಶೇಷ ಸೇವೆಗಳನ್ನು ಪ್ರಮುಖವಾಗಿ ಕೆಂಪೇಗೌಡ ಬಸ್ ನಿಲ್ದಾಣ, ಎಂ.ಜಿ.ರಸ್ತೆ ಬಳಿ ಇರುವ ಮಾಣಿಕ್ ಷಾ ಪರೇಡ್ ಮೈದಾನ, ಹೆಬ್ಬಾಳ ರಿಂಗ್ ರಸ್ತೆ, ಬನಶಂಕರಿ, ಕೆಂಗೇರಿ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಯಶವಂತಪುರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ ಹಾಗೂ ಕೋರಮಂಗಲ ಮುಂತಾದ ಸ್ಥಳಗಳಿಂದ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ಬಸ್ಸುಗಳನ್ನು ಆಚರಣೆ ಮಾಡಲಾಗುವುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಯಶವಂತಪುರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕೋರಮಂಗಲ ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ತಮ್ಮ ಸ್ವಂತ ವಾಹನಗಳನ್ನು ಮೇಲ್ಕಂಡ ಟಿಟಿಎಂಸಿಗಳಲ್ಲಿ ನಿಲ್ಲಿಸಿ ಬೆಂ.ಮ.ಸಾ.ಸಂಸ್ಥೆಯ ಸೇವೆಗಳನ್ನು ಬಳಸಿಕೊಳ್ಳಲು ಸಾರ್ವಜನಿಕರಲ್ಲಿ ತಮ್ಮ ಅಮೂಲ್ಯ ದಿನಪತ್ರಿಕೆಯ ಮೂಲಕ ಮನವಿ ಮಾಡುತ್ತಿದೆ, ಹೆಚ್ಚುವರಿಯಾಗಿ ಆಚರಣೆ ಮಾಡುವ ಮಾರ್ಗಗಳ ವಿವರಗಳು ಈ ಕೆಳಗಿನಂತಿದೆ. ಕ್ರಮ ಸಂಖ್ಯೆ ಎಲ್ಲಿಂದ ಎಲ್ಲಿಗೆ ಪ್ರತಿ ಪ್ರಯಾಣಿಕರಿಗೆ ನಿಗದಿಪಡಿಸಿರುವ ವಿಶೇಷ ದರ (ರೂ.ಗಳಲ್ಲಿ) 1 ಮಾಣಿಕ್ ಷಾ ಪೆರೇಡ್ ಮೈದಾನ ADVA Gate 40/- 2 ಕೆಂಪೇಗೌಡ ಬಸ್ ನಿಲ್ದಾಣ ADVA Gate 40/- 3 ಹೆಬ್ಬಾಳ ರಿಂಗ್ ರೋಡ್ ಜಂಕ್ಷನ್ ADVA Gate 35/- 4 ಬನಶಂಕರಿ ADVA Gate 40/- 5 ಕೆಂಗೇರಿ ADVA Gate 40/- 6 ಸಿಲ್ಕ್ ಬೋರ್ಡ್ ಜಂಕ್ಷನ್ ADVA Gate 50/- 7 ಯಶವಂತಪುರ ಬಸ್ ನಿಲ್ದಾಣ ADVA Gate 40/- 8 ಕೋರಮಂಗಲ ಬಸ್ ನಿಲ್ದಾಣ ADVA Gate 45/- 9 ಜಯನಗರ ಬಸ್ ನಿಲ್ದಾಣ ADVA Gate 40/- ಅಲ್ಲದೆ, ನಗರದ ವಿವಿಧ ಭಾಗಗಳಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAL) ಆಚರಣೆಯಲ್ಲಿರುವ ಸೇವೆಗಳ ಸಾರಿಗೆ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ದರವು ಈ ಕೆಳಗಿನಂತಿದೆ. ಎಲ್ಲಿಂದ ಎಲ್ಲಿಗೆ ವಿಧಿಸಬೇಕಾದ ದರ ಕೆಂಪೇಗೌಡ ಬಸ್ ನಿಲ್ದಾಣದಿಂದ ಹುಣಸಮಾರನಹಳ್ಳಿ 160/- ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ/ಹೆಬ್ಬಾಳ ಹುಣಸಮಾರನಹಳ್ಳಿ 160/- ಇತರೆ ಸ್ಥಳಗಳಿಂದ (ಬಿಟಿಎಂ ಬಡಾವಣೆ, ಹೆಚ್ಎಸ್ಆರ್ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ಎಂಸಿಟಿಸಿ ಬಸ್ ನಿಲ್ದಾಣ, ಜಯನಗರ ಹಾಗೂ ಮುಂತಾದ ಸ್ಥಳಗಳಿಂದ) ಹುಣಸಮಾರನಹಳ್ಳಿ 215/- ಮುಂದುವರೆದು, ಬೆಂ.ಮ.ಸಾ.ಸಂಸ್ಥೆಯ ವಾಯುವಜ್ರ ಮತ್ತು ದೂರಮಾರ್ಗದ ಅನುಸೂಚಿಗಳಲ್ಲಿ/ಸುತ್ತುವಳಿಗಳಲ್ಲಿ ಯಾವುದೇ ಮಾರ್ಗ ಬದಲಾವಣೆ ಮಾಡುವುದಿಲ್ಲ ಹಾಗೂ ಎಂದಿನಂತೆ ಮುಖ್ಯ ರಸ್ತೆಯಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಕನ್ನಡ