ಸಾರ್ವಜನಿಕ ಹಿತಾಸಕ್ತಿ

 

ಗುಣಮಟ್ಟ ನೀತಿ:

ಬೆ.ಮ.ಸಾಸಂಸ್ಥೆಯು ಸುರಕ್ಷಿತ, ಮಿತವ್ಯಯಿ, ದಕ್ಷ, ಸ್ವಚ್ಛ, ವಿಶ್ವಾಸಾರ್ಹ ಮತ್ತು ಸೌಜನ್ಯಯುತ ಸೇವೆಗಳನ್ನು ಒದಗಿಸಿ ಪ್ರಯಾಣಿಕರ ತೃಪ್ತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸದರಿ ಕಾರ್ಯನೀತಿಯ ಮೂಲಕ ಕೆಳಕಂಡ ಗುಣಮಟ್ಟದ ಧ್ಯೇಯಗಳನ್ನು ಸಾಧಿಸಲು ಆಶಿಸುತ್ತದೆ.

1.   ಸಮರ್ಪಕ ಮಾನವ ಸಂಪನ್ಮೂಲ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.

2.   ವಿಶ್ವಾಸಾರ್ಹ ಪ್ರಯಾಣಿಕ ಸಂಪರ್ಕ ನಿರ್ವಹಣೆಯನ್ನು ಸಾಧಿಸುವುದು.

3.   ಉಚ್ಛ ಮಟ್ಟದ ಕಾರ್ಯಾಚರಣಾ ದಕ್ಷತೆ ಸಾಧಿಸುವುದು.

4.   ಸಮರ್ಪಕ ನಿರ್ವಹಣಾ ಸಿದ್ಧಾಂತಗಳನ್ನು ಉತ್ತೇಜಿಸುವುದು. 

 

ಪರಿಸರ ನೀತಿ:

ಬೆಂ.ಮ.ಸಾ.ಸಂಸ್ಥೆಯು ಕೆಳಕಂಡ ವಿಷಯಗಳಿಗೆ ಬದ್ಧವಾಗಿರುತ್ತದೆ:

ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಶಾಸನಬದ್ಧ ಹಾಗೂ ನಿಯಂತ್ರಣ ತರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದೆ.; ಪರಿಸರ ನಿರ್ವಹಣೆ ವ್ಯವಸ್ಥೆಯ ಯೋಜನೆಯಲ್ಲಿ ಹಾಗೂ ಕಾರ್ಯಪರಿಶೀಲನೆಯಲ್ಲಿ ಪ್ರಸ್ತುತವೆನಿಸುವ ಭಾಗೀದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತದೆ. ಪರಿಸರ ಸಂರಕ್ಷಣೆಯ ಅಭಿವೃದ್ಧಿಯಲ್ಲಿ ಸ್ವಯಂಪ್ರೇರಿತರಾಗಿ ಕೊಡುಗೆ ನೀಡುವಂತೆ ಸಂಸ್ಥೆಯು ಕಾರ್ಮಿಕರನ್ನು ಮನವೊಲಿಸುತ್ತದೆ ಹಾಗೂ ತರಬೇತಿ ನೀಡುತ್ತದೆ; ನೈಸರ್ಗಿಕವಾಗಿ ಬಳಸಬಹುದಾದ ವಸ್ತುಗಳಿಗೆ ವಿಶೇಷ ಒತ್ತು ನೀಡಿ ತಾಂತ್ರಿಕ ಮಟ್ಟದ ಸುಧಾರಣೆ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯ ವಿಧಾನಗಳನ್ನು ನಿರಂತರವಾಗಿ ಪರಿಪಾಲಿಸಿ ಪರಿಸರ ಸ್ನೇಹಿ ಸಾರಿಗೆ ಕಾರ್ಯಾಚರಣೆಯನ್ನು ಮಾಡುತ್ತದೆ; ನಿರಂತರವಾಗಿ ಸಂಪನ್ಮೂಲಗಳ ಗರಿಷ್ಠ ಬಳಕೆಯ ಕ್ರಮಗಳನ್ನು ಆಚರಣೆಯಲ್ಲಿ ತರುತ್ತದೆ.

 

ಲಗತ್ತುಗಾತ್ರ
citizen-charter-kn.pdf448.19 KB
Updated on : ಬುಧವಾರ, 6 March, 2013 - 16:11