ಸುದ್ದಿ ಮತ್ತು ವಾರ್ತೆಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ Volvo Sustainability Mobility Award 2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥೆಯ Route planning for efficient mobility (ಸಮರ್ಥ ಸಾರಿಗೆ ಮಾರ್ಗ ಯೋಜನೆ) ಉಪಕ್ರಮಕ್ಕೆ ಪ್ರಶಸ್ತಿ ಲಭ್ಯವಾಗಿರುತ್ತದೆ
Updated on: ಬುಧವಾರ, 18 January, 2017 - 15:28
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ BW Smart Cities Conclave & Award - 2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆಯ ಚತುರ ಸಾರಿಗೆ ವ್ಯವಸ್ಥೆ ಸೇವೆಯ ಉಪಕ್ರಮಕ್ಕೆ ಸದರಿ ಪ್ರಶಸ್ತಿ ಲಭ್ಯವಾಗಿರುತ್ತದೆ.
Updated on: ಬುಧವಾರ, 18 January, 2017 - 15:28
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪ್ರತಿಷ್ಠತ Skoch Order-of-Merit" Skoch Mobility Award-2016 ಲಭಿಸಿರುತ್ತದೆ. ಬೆಂಗಳೂರು ಮಹಾನಗರ ಸಾರಿಗೆಯ ಕಾರ್ಮಿಕ ಕಲ್ಯಾಣ ಕ್ರಮಗಳು, ಚತುರ ಸಾರಿಗೆ ವ್ಯವಸ್ಥೆ, ಮೊಬೈಲ್ ಆಪ್, ಮಹಿಳಾ ಪ್ರಯಾಣಿಕರ ಸುರಕ್ಷತೆ, ಆಕವಾಗಿ ಹಿಂದುಳಿದ ಪ್ರಯಾಣಿಕರಿಗೆ ಕಡಿಮೆ ದರದ ಬಸ್ ಸೇವೆ, ಟ್ರಂಕ್ ಹಾಗೂ ಫೀಡರ್ ಸೇವೆಗಳನ್ನೊಳಗೊಂಡ 7 ಉಪಕ್ರಮಗಳಿಗೆ ಪ್ರಶಸ್ತಿ ಲಭ್ಯವಾಗಿರುತ್ತದೆ.
Updated on: ಬುಧವಾರ, 18 January, 2017 - 15:27
ಸಾರ್ವಜನಿಕ ಪ್ರಯಾಣಿಕರು ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ಮುಖಬೆಲೆಯ ಕರೆನ್ಸಿಗಳ ಜೊತೆಯಲ್ಲಿ ಕೇಂದ್ರ ಸರ್ಕಾರ ಹಿಂಪಡೆದಿರುವ ರೂ.500/- ಮತ್ತು ರೂ.1000/- ಮುಖಬೆಲೆಯ ನೋಟುಗಳನ್ನೂ ಸಹ ಪಾವತಿಸಿ ರೂ.500/- ರ 10 ದಿನಗಳ ವಿಶೇಷ ಪಾಸನ್ನು ಪಡೆದು ಬೆಂ.ಮ.ಸಾ.ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ (ಹವಾನಿಯಂತ್ರಿತ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
Updated on: ಬುಧವಾರ, 16 November, 2016 - 15:02
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ತನಿಖಾ ತಂಡಗಳು ಆಗಸ್ಟ್-2016 ರಲ್ಲಿ ಒಟ್ಟು 23913 ಟ್ರಿಪ್ಗಳನ್ನು ತಪಾಸಿಸಿ 7422 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 12,13,330/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2739 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 491 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 49,100/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.
Updated on: ಗುರುವಾರ, 22 September, 2016 - 16:59
Greentech Safety Award 2016 ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ, ನವದೆಹಲಿಯ ಗ್ರೀನ್ಟೆಕ್ ಫೌಂಡೇಶನ್ ರವರು ನೀಡುವ ಪ್ರತಿಷ್ಠಿತ Greentech Safety Award 2016 Silver ಪ್ರಶಸ್ತಿಯು Public Utility Services Sector for outstanding achievements in Safety Management ವಿಭಾಗದಲ್ಲಿ ಲಭಿಸಿರುತ್ತದೆ. ದಿನಾಂಕ 30-08-2016 ರಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ.ಪ್ರಾನ್ಸಿಸ್ ಡಿಸೋಜ, ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು ಗೋವಾ ಸರ್ಕಾರ ರವರು ಈ ಪ್ರಶಸ್ತಿಯನ್ನು ವಿತರಿಸಿದರು. ಶ್ರೀ.ಬಿ.ವಿ.ಶ್ರೀನಿವಾಸ್, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು ಹಾಗೂ ಶ್ರೀ.ಚಿದಂಬರ.ಪಿ.ಎಂ., ವಿಭಾಗೀಯ ಸಂಚಾರ ಅಧಿಕಾರಿ, ಬಿಎಂಟಿಸಿ ರವರು ಸಂಸ್ಥೆಯ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
Updated on: ಶುಕ್ರವಾರ, 2 September, 2016 - 15:02
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ, ಪ್ರತಿಷ್ಠಿತ mBillionth South Asia 2016 ಪ್ರಶಸ್ತಿಯು Smart Settlements and Urbanisation ವಿಭಾಗದಲ್ಲಿ ಚತುರ ಸಾರಿಗೆ ವ್ಯವಸ್ಥೆ ಉಪಕ್ರಮಕ್ಕಾಗಿ (Mobile App) ಲಭಿಸಿರುತ್ತದೆ. ಹಾಗೂ ಪ್ರತಿಷ್ಠಿತ CMO ASIA Smart Cities Awards 2016, ಪ್ರಶಸ್ತಿಯು, ಸ್ಮಾರ್ಟ್ ಸಾರಿಗೆ ಉಪಕ್ರಮ ವಿಭಾಗದಲ್ಲಿ ಖಚತುರ ಸಾರಿಗೆ ವ್ಯವಸ್ಥೆ ಮತ್ತು ಮೊಬೈಲ್ ಆ್ಯಪ್ಖ ಹಾಗೂ ಸ್ಮಾರ್ಟ್ ತ್ಯಾಜ್ಯ ನಿರ್ವಹಣೆ ಉಪಕ್ರಮಖಕ್ಕಾಗಿ ಒಟ್ಟು ಎರಡು ಪ್ರಶಸಿಗಳು ಲಭಿಸಿರುತ್ತದೆ.
Updated on: ಮಂಗಳವಾರ, 9 August, 2016 - 15:47
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ನಗರ ಸಾರಿಗೆ ಸೇವೆಗಳ ಆಚರಣೆ ವ್ಯವಸ್ಥೆಯಲ್ಲಿ ವಿನೂತನವಾಗಿ ಅಳವಡಿಸಿಕೊಂಡಿರುವ ಚತುರ ಸಾರಿಗೆ ವ್ಯವಸ್ಥೆಯನ್ನು ಶ್ರೀ.ಸಿದ್ಧರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ತಮ್ಮ ಅಮೃತ ಹಸ್ತದಿಂದ ದಿನಾಂಕ 25.05.2016 ರಂದು ಸಂಸ್ಥೆಯ ಕೇಂದ್ರ ಕಛೇರಿ ಆವರಣದಲ್ಲಿ ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉಸ್ತುವಾರಿ ಸಚಿವರು, ಕೋಲಾರ ಜಿಲ್ಲೆ ಮತ್ತು ಅಧ್ಯಕ್ಷರು ಕ.ರಾ.ರ.ಸಾ.ನಿ ರವರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಿದರು
Updated on: ಶನಿವಾರ, 28 May, 2016 - 10:58

ಕೆಂಪೇಗೌಡ ಬಸ್ ನಿಲ್ದಾಣವು 24*7 ಗಂಟೆಗಳ ಕಾಲ ಸಂಚಾರ ಹಾಗೂ ಜನ ದಟ್ಟಣೆಯಿಂದ ಕೂಡಿದ್ದು, ಅನಿರೀಕ್ಷಿತ ಅವಡಗಳು ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ ಇರುವ ಪ್ರಥಮ ಚಿಕಿತ್ಸಾ ಟಕವನ್ನು ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಬಳಸಿಕೊಳ್ಳಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊಯಲು 108 ಆಂಬ್ಯೂಲೆನ್ಸ್ನ ವ್ಯವಸ್ಥೆಯನ್ನು  ಮಾಡಲಾಗಿರುತ್ತದೆ.

 

Updated on: ಶುಕ್ರವಾರ, 6 May, 2016 - 17:08

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ತನಿಖಾ ತಂಡಗಳು ಫೆಬ್ರವರಿ-2016 ರಲ್ಲಿ ಒಟ್ಟು 29060 ಟ್ರಿಪ್ಗಳನ್ನು ತಪಾಸಿಸಿ 7683 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 11,35,390/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2882  ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 982 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 98,200/- ಗಳನ್ನು  ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ  ದಂಡ ವಿಧಿಸಲಾಗಿರುತ್ತದೆ.

Updated on: ಶುಕ್ರವಾರ, 1 April, 2016 - 14:33

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ   ತನಿಖಾ ತಂಡಗಳು ಜನವರಿ-2016 ರಲ್ಲಿ ಒಟ್ಟು 29335 ಟ್ರಿಪ್ಗಳನ್ನು ತಪಾಸಿಸಿ 7681 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 13,69,350/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 3643  ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 1218 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 1,21,800/- ಗಳನ್ನು  ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ  ದಂಡ ವಿಧಿಸಲಾಗಿರುತ್ತದೆ.

Updated on: ಸೋಮವಾರ, 4 April, 2016 - 15:36

2016ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸುಗಳನ್ನು ದಿನಾಂಕ:01.01.2016 ರಿಂದ ಜಾರಿಗೆ ಬರುವಂತೆ ನವೀಕರಿಸಲು ಕ್ರಮ ಕೈಗೊಳ್ಳುವುದು ಹಾಗೂ  2015 ನೇ ಸಾಲಿನಲ್ಲಿ ವಿತರಿಸಿ 31.12.2015ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು 28.02.2016 ರವರೆಗೆ ಮಾನ್ಯ ಮಾಡುವುದು. ವಿಕಲಚೇತನರ ಫಲಾನುಭವಿಗಳಿಂದ ಕರೂ.660/- ನ್ನು ನಗದು ರೂಪದಲ್ಲಿ ಪಡೆದು ವಿಕಲಚೇತನರ ಬಸ್ ಪಾಸುಗಳನ್ನು ದಿನಾಂಕ:28.02.2016ಕಿ ರವರೆಗೆ ನವೀಕರಿಸುವುದು ನಂತರ ಬರುವ ಪಾಸುಗಳನ್ನು ನವೀಕರಿಸಲಾಗುವುದಿಲ್ಲ.  2016 ನೇ ಸಾಲಿಗೆ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಕೃ.ರಾ ಮಾರುಕಟ್ಟೆ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಯಲಹಂಕ ಉಪನಗರ, ವೈಟ್ಫಿಲ್ಡ್ ಟಿಟಿಎಂಸಿ, ದೊಮ್ಮಲೂರು ಟಿಟಿಎಂಸಿ, ಹೊಸಕೋಟೆ ಬಸ್ ನಿಲ್ದಾಣಗಳಲ್ಲಿ ನವೀಕರಣ ಮಾಡಲಾಗುವುದು.

Updated on: ಸೋಮವಾರ, 4 April, 2016 - 15:38

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡಿ ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು  ತಡೆಗಟ್ಟುವ ಸಲುವಾಗಿ,  ನಗರದಾದ್ಯಂತ ಸಂಚರಿಸುವ ವಾಹನಗಳನ್ನು ತನಿಖೆ ಮಾಡಿ ಸೆಪ್ಟೆಂಬರ್-2014 ನೇ ಮಾಹೆಯಲ್ಲಿ ಒಟ್ಟು 40811 ಟ್ರಿಪ್ಗಳನ್ನು ತಪಾಸಿಸಿ 9613 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 16,94,180/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರ ಮೇಲೆ 5269 ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುವ 2437 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 2,43,700/- ಗಳನ್ನು  ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ  ದಂಡ ವಿಧಿಸಲಾಗಿರುತ್ತದೆ.

Updated on: ಗುರುವಾರ, 23 October, 2014 - 18:38

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಕೇಂದ್ರ ಕಛೇರಿ :: ಶಾಂತಿ ನಗರ :: ಬೆಂಗಳೂರು-27

 

ಬಿಎಂಟಿಸಿಯು ಬಿ.ಟಿ.ಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಪ್ರಯಾಣಿಕರ ಸೌಲಭ್ಯ ಕೇಂದ್ರದ ಶಂಕುಸ್ಥಾಪನಾ ಸಮಾರಂಭವನ್ನು ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು ಕರ್ನಾಟಕ ಸರ್ಕಾರ ಹಾಗೂ ಉಸ್ತುವಾರಿ ಸಚಿವರು, ಬೆಂಗಳೂರು ಮತ್ತು ಅಧ್ಯಕ್ಷರು, ಕ.ರಾ.ರ.ಸಾ.ನಿ & ಬೆಂ.ಮ.ಸಾ.ಸಂ ರವರು ದಿನಾಂಕ:01ನೇ ಅಕ್ಟೋಬರ್-2014 ರಂದು ಬುಧವಾರ ಬೆಳಿಗ್ಗೆ 10.00 ಗಂಟೆಗೆ ಬಿ.ಟಿ.ಎಂ ಬಡಾವಣೆಯ ಉದ್ದೇಶಿತ ಬಸ್ ನಿಲ್ದಾಣದ ಆವರಣದಲ್ಲಿ ನೆರವೇರಿಸಿದರು.

ಶ್ರೀ.ಜಿಎನ್ಆರ್ ಬಾಬು, ಸದಸ್ಯರು, ಬಿಬಿಎಂಪಿ,  ಶ್ರೀ.ಬಿ.ಎನ್.ಮಂಜುನಾಥರೆಡ್ಡಿ, ಸದಸ್ಯರು ಹಾಗೂ ವಿರೋಧಪಕ್ಷದ ನಾಯಕರು, ಬಿಬಿಎಂಪಿ, ಡಾ.ಏಕ್ರೂಪ್ ಕೌರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಹಾಗೂ ಇನ್ನಿತರೇ ಗಣ್ಯ ವ್ಯಕ್ತಿಗಳು, ಆಹ್ವಾನಿತರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

Updated on: ಬುಧವಾರ, 1 October, 2014 - 18:42

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಕೇಂದ್ರ ಕಛೇರಿ :: ಶಾಂತಿ ನಗರ :: ಬೆಂಗಳೂರು-27

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡಿ ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು  ತಡೆಗಟ್ಟುವ ಸಲುವಾಗಿ,  ನಗರದಾದ್ಯಂತ ಸಂಚರಿಸುವ ವಾಹನಗಳನ್ನು ತನಿಖೆ ಮಾಡಿ ಜೂನ್-2014 ರಿಂದ ಆಗಸ್ಟ್-2014 ಮಾಹೆಗಳಲ್ಲಿ ಒಟ್ಟು 97838 ಟ್ರಿಪ್ಗಳನ್ನು ತಪಾಸಿಸಿ 24981 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 43,01,580/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರ ಮೇಲೆ 13703 ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುವ 5274 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 5,27,400/- ಗಳನ್ನು  ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ  ದಂಡ ವಿಧಿಸಲಾಗಿರುತ್ತದೆ.

Updated on: ಸೋಮವಾರ, 29 September, 2014 - 15:43

 

ದಿನಾಂಕ 25.09.2014, 27.09.2014, 30.09.2014 ಹಾಗೂ 04.10.2014 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಂಪಿಯನ್ ಲೀಗ್ ಟಿ20 ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಗೆ ಬಂದು ಹೋಗುವ ಪ್ರೇಕ್ಷಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

       ಸದರಿ ದಿನಗಳಂದು ಪಂದ್ಯಾವಳಿಯ ಸಮಯಕ್ಕನುಗುಣವಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆಗೆ  ಬರುವ  ಸಾರ್ವಜನಿಕರು ಕ್ರೀಡಾಂಗಣಕ್ಕೆ ತಲುಪಲು ಅನುಕೂಲವಾಗುವಂತೆ ನಗರದ ವಿವಿಧ ಭಾಗಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಚೀಟಿ ವಿತರಣೆ ಆಧಾರದ ಮೇಲೆ  ಹಾಗೂ  ಕ್ರಿಕೆಟ್ ಪಂದ್ಯ ಮುಗಿದ ನಂತರ ರಾತ್ರಿ ಮನೆಗೆ ತೆರಳಲು ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಾರ್ಗದ ವಿವರಗಳು ಈ ಕೆಳಕಂಡಂತೆ ಇರುತ್ತದೆ.

ಮಾರ್ಗ ಸಂಖ್ಯೆ

ಎಲ್ಲಿಂದ

ಎಲ್ಲಿಗೆ

G-1

ಮಾಣಿಕ್ ಷಾ ಪೆರೇಡ್ ಗ್ರೌಂಡ್ಸ್

ಕಾಡುಗೋಡಿ ಬಸ್ ನಿಲ್ದಾಣ

G-2

ಮೆಯೋಹಾಲ್

ಸರ್ಜಾಪುರ

G-3

ಬ್ರಿಗೇಡ್ ರಸ್ತೆ

ಎಲೆಕ್ಟ್ರಾನಿಕ್ ಸಿಟಿ

G-4

ಬ್ರಿಗೇಡ್ ರಸ್ತೆ

ಬನ್ನೇರುಟ್ಟ ನ್ಯಾಷನಲ್ ಪಾರ್ಕ್

G-6

ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ

ಕೆಂಗೇರಿ ಕೆಹೆಚ್ಬಿ ಕ್ವಾರ್ಟರ್ಸ್

G-7

ಬಿಆರ್ವಿ ಪೆರೇಡ್ ಗ್ರೌಂಡ್ಸ್

ಜನಪ್ರಿಯ ಟೌನ್ಶಿಪ್

G-8

ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ

ನೆಲಮಂಗಲ

G-9

ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ

ಯಲಹಂಕ ಉಪನಗರ

G-10

ಬಿಆರ್ವಿ ಪೆರೇಡ್ ಗ್ರೌಂಡ್ಸ್

ಆರ್.ಕೆ.ಹೆಗಡೆ ನಗರ

G-11

ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ

ಬಾಗಲೂರು

G-12

ಮೇಯೋಹಾಲ್

ಹೊಸಕೋಟೆ

 

 

 

Updated on: ಮಂಗಳವಾರ, 23 September, 2014 - 23:53

 

ಸಂಸ್ಥೆಯು 2014-15 ನೇ ಸಾಲಿನ ವಿದ್ಯಾರಿಯಾಯಿತಿ ಪಾಸುಗಳನ್ನು ಜೂನ್-2014 ರಿಂದ ಬೆಂಗಳೂರಿನಾದ್ಯಂತ 37 ಸ್ಥಳಗಳಲ್ಲಿ 117 ಕೌಂಟರ್ಗಳ ಮೂಲಕ ಹಂತ ಹಂತವಾಗಿ ವಿತರಿಸುತ್ತಾ ಬಂದಿರುತ್ತದೆ. ಈಗಾಗಲೇ ಹೆಚ್ಚಿನ ವಿದ್ಯಾರಿಯಾಯಿತಿ ಪಾಸುಗಳು ವಿತರಣೆಯಾಗಿದ್ದು, ಪ್ರಸ್ತುತ ದಿನವೊಂದಕ್ಕೆ ಅತಿ ಕಡಿಮೆ ಸಂಖ್ಯೆಯಲ್ಲಿ ಪಾಸುಗಳು ವಿತರಣೆಯಾಗುತ್ತಿರುತ್ತವೆ. ಆದ್ದರಿಂದ ಕೆಂಪೇಗೌಡ ಬಸ್ ನಿಲ್ದಾಣವನ್ನು ಹೊರತುಪಡಿಸಿ, ಉಳಿದೆಲ್ಲಾ ಬಸ್ ನಿಲ್ದಾಣಗಳಲ್ಲಿ ವಿದ್ಯಾರಿಯಾಯಿತಿ ಪಾಸು ಕೌಂಟರ್ಗಳನ್ನು ದಿನಾಂಕ:30.09.2014 ರಂದು ಸ್ಥಗಿತಗೊಳಿಸಲಾಗಿರುತ್ತದೆ.

 

Updated on: ಮಂಗಳವಾರ, 23 September, 2014 - 22:29

ಬೆಮಸಾಸಂಸ್ಥೆಯು ಬಸವೇಶ್ವರ ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಿಗೆ ಹೊಸ ಮಾರ್ಗಗಳನ್ನು ಹಾಗೂ ಪ್ರಸ್ತುತ ಆಚರಣೆಯಲ್ಲಿರುವ ಕೆಲವು ಮಾರ್ಗಗಳನ್ನು ವಿಸ್ತರಿಸಿ ಆಚರಣೆ ಮಾಡಲಾಗುತ್ತಿದೆ. ಜೊತೆಗೆ ನಗರದ ವಿವಿಧ ಭಾಗಗಳಿಂದ ಪೀಣ್ಯ ಮುಖ್ಯ ರಸ್ತೆ, ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ನೆಲಮಂಗಲ ಕಡೆಗೆ ಪ್ರತಿದಿನ ಸುಮಾರು 300 ಅನುಸೂಚಿಗಳಿಂದ 3000 ಏಕಮುಖ ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಈ ಎಲ್ಲಾ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಂಡು ಪೀಣ್ಯದಲ್ಲಿರುವ ಬಸವೇಶ್ವರ ಸ್ಯಾಟ್ಲೈಟ್ ಬಸ್ ನಿಲ್ದಾಣವನ್ನು ತಲುಪಬಹುದಾಗಿದೆ

Updated on: ಶುಕ್ರವಾರ, 12 September, 2014 - 21:41

ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ  ಸಂಚಾರ ಪೋಲಿಸರ ಸಹಾಯದೊಂದಿಗೆ, ಸಂಬಂಧಿಸಿದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಶಬ್ದ ಮತ್ತು ವಾಯು ಮಾಲಿನ್ಯದ(No Honking) ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಸಂಸ್ಥೆಯ ನೌಕರರಿಗೆ ಟಕ ಮಟ್ಟದಲ್ಲಿ ಅರಿವು ಮೂಡಿಸಲಾಗಿರುತ್ತದೆ.

ಬೆಂ.ಮ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯದ ಬಗ್ಗೆ ಸಾರ್ವಜನಿಕರು ಏನಾದರೂ ದೂರು ಅಥವಾ ಸಲಹೆ ನೀಡಲು ಇಚ್ಛಿಸಿದ್ದಲ್ಲಿ ಬೆಂ.ಮ.ಸಾ.ಸಂಸ್ಥೆಯ ವೆಬ್ಸೈಟ್ ಆದ www.mybmtc.com.. ನಲ್ಲಿ ನೀಡಬಹುದಾಗಿರುತ್ತದೆ. ವೆಬ್ಸೈಟ್ನಲ್ಲಿ ನೊಂದಣಿಯಾದ ದೂರುಗಳನ್ನು ಶ್ರೀಮತಿ ಶ್ಯಾಮಲಾ ಎಸ್.ಎಂ, ಸಹಾಯಕ ಸಂಚಾರ ವ್ಯವಸ್ಥಾಪಕರು (ದೂರು) ರವರಿಗೆ ದೂರವಾಣಿ ಮುಖಾಂತರವು ನೀಡಬಹುದಾಗಿರುತ್ತದೆ. ದೂರವಾಣಿ ಸಂಖ್ಯೆ:7760991257. ಸಂಸ್ಥೆಯ ಯಾವುದೆ ನಾಗರೀಕರು, ಸಂಸ್ಥೆಯ ವಾಹನದಿಂದ ಹೆಚ್ಚಾಗಿ ಹೊಗೆ ಸೂಸುತ್ತಿರುವ ಬಗ್ಗೆ ಮಾಹಿತಿ/ದೂರು ನೀಡಿದ್ದಲ್ಲಿ ಅಂತಹ ವಾಹನಗಳನ್ನು ತಕ್ಷಣವೇ ಪರಿಶೀಲಿಸಿ ಅವುಗಳು ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ಹೊಗೆ ಸೂಸುವುದು ತಪಾಸಣೆ ಯಂತ್ರದಲ್ಲಿ ಕಂಡು ಬಂದಲ್ಲಿ ಅಂತಹವರಿಗೆ ರೂ.1000/- ಗಳ ನಗದು ಬಹುಮಾನವನ್ನು ಧೃಡೀಕರಿಸಿ ನೀಡಲಾಗುವುದು. ಜೊತೆಗೆ ನೂನ್ಯತೆಯ ಬಸ್ಸುಗಳನ್ನು ಆಚರಣೆಗೆ ನಿಯೋಜಿಸುವುದಿಲ್ಲ. 24x7 ಗಂಟೆಗಳ ಕಾಲ ಬೆಂ.ಮ.ಸಾ.ಸಂಸ್ಥೆಯ ಕಾಲ್ಸೆಂಟರ್ನಲ್ಲಿ 10 ಜನ ನೌಕರರು ಕೆಲಸ ನಿರ್ವಹಿಸುತ್ತಿದ್ದು, ದೂರುಗಳನ್ನು ನೊಂದಣಿ ಮಾಡಲು ಅವಕಾಶವಿರುತ್ತದೆ. ಕಾಲ್ಸೆಂಟರ್ನ ಸಂಖ್ಯೆ: 1800-425-1663.

Updated on: ಬುಧವಾರ, 27 August, 2014 - 12:37
ಬಿಎಂಟಿಸಿ ಸಂಸ್ಥೆಗೆ ಪ್ರತಿಷ್ಠಿತ Global Brand Excellence Award – 2014 ಲಭಿಸಿದೆ. ಬಿಎಂಟಿಸಿಯ ಹಾಪ್ ಆನ್ ಹಾಪ್ ಆಫ್- ಬೆಂಗಳೂರು ರೌಂಡ್ಸ್ ಸೇವೆಗೆ ಈ ಉತ್ಕೃಷ್ಟ ಪ್ರಶಸ್ತಿಯು ಲಭಿಸಿರುತ್ತದೆ. ಸಿಂಗಾಪುರದ ಪ್ಯಾನ್ ಪೆಸಿಫಿಕ್ನಲ್ಲಿ ನಡೆದ ಸಮಾರಂಭದಲ್ಲಿ ಶ್ರೀಮತಿ.ಲತಾ.ಟಿ.ಎಸ್. ಸಾರ್ವಜನಿಕ ಸಂಪರ್ಕಾಧಿಕಾರಿ ಕೆಎಸ್ಆರ್ಟಿಸಿ & ಬಿಎಂಟಿಸಿ ರವರು Ms.Virginia Sharia, Director Marketing, Linkedln Asia Pacific and Mr.New Mode, Country Head, Berkadia ರವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು
Updated on: ಮಂಗಳವಾರ, 26 August, 2014 - 18:45