ಪತ್ರಿಕಾ ಪ್ರಕಟಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ :: ಕೇಂದ್ರ ಕಛೇರಿ :: ಬೆಂಗಳೂರು ಸಂಖ್ಯೆ:ಬೆಂಮಸಾಸಂ/ಕೇಕ/ನೇಮಕ/ಆರ್1/ 1328 /2018-19 ದಿನಾಂಕ: 13/06/2018 ಪ್ರಕಟಣೆ *** ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ದಿನಾಂಕ 9/6/2018 ಮತ್ತು 10/6/2018 ರಂದು ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳಾದ ಕುಶಲಕರ್ಮಿ, ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾರಕ್ಷಕ, ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯನ್ನು ನಡೆಸಲಾಗಿದೆ. ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸರಿ ಉತ್ತರಗಳನ್ನು (Key Answers ಸಂಸ್ಥೆಯ ವೆಬ್ಸೈಟ್ www.mybmtc.com ನಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿಸಿದ ಅಭ್ಯಗಳು ಸದರಿ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಸದರಿ ಉತ್ತರಗಳ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಡನೆ ದಿನಾಂಕ 17/6/2018ರೊಳಗಾಗಿ rct@mybmtc.com ಗೆ ಈಮೇಲ್ ಮೂಲಕ ಕಳುಹಿಸುವುದು. ದಿನಾಂಕ 17/6/2018ರಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. . ವ್ಯವಸ್ಥಾಪಕ ನಿರ್ದೇಶಕರು

Updated on: ಗುರುವಾರ, 14 June, 2018 - 17:56

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಲಾಗಿದ್ದ ಜಾಹೀರಾತು ಸಂಖ್ಯೆ 1/2017, 2/2017 ದಿನಾಂಕ 5/12/2017 ಹಾಗೂ  1/2018, 2/2018  ದಿನಾಂಕ 23/3/2018 ರನ್ವಯ  ಅರ್ಜಿ ಸಲ್ಲಿಸಿರುವ ಅಭ್ಯಗಳಿಗೆ ಈ ಕೆಳಕಂಡ ದಿನಾಂಕಗಳಂದು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಕ್ರ.ಸಂ

ಹುದ್ದೆ

ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ನಡೆಸಲಾಗುವ

ದಿನಾಂಕ ಮತ್ತು ಸಮಯ

1

ಕುಶಲಕರ್ಮಿ

ದಿನಾಂಕ:9/6/2018

ಮದ್ಯಾಹ್ನ 02-00 ರಿಂದ 04-00 ಗಂಟೆಯವರೆಗೆ

2

ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ ಮತ್ತು ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್

ದಿನಾಂಕ:10/6/2018

ಬೆಳಿಗ್ಗೆ 10-00 ರಿಂದ 12-00 ಗಂಟೆಯವರೆಗೆ

3

ತಾಂತ್ರಿಕ ಸಹಾಯಕ

ದಿನಾಂಕ:10/6/2018

ಮದ್ಯಾಹ್ನ 02-00 ರಿಂದ 04-00 ಗಂಟೆಯವರೆಗೆ

 

 ಮೇಲ್ಕಾಣಿಸಿದ ಜಾಹೀರಾತಿನನ್ವಯ ಅರ್ಜಿ ಸಲ್ಲಿಸಿರುವ ಅಭ್ಯಗಳು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯ ಪ್ರವೇಶ ಪತ್ರ (ಊಚಿಟಟ ಛಿಞಜಣ ) ವನ್ನು ಸಂಸ್ಥೆಯ ವೆಬ್ಸೈಟ್ www.mybmtc.com ಮೂಲಕ ದಿನಾಂಕ 3/6/2018 ರಿಂದ 9/6/2018ರ ಅವಧಿಯಲ್ಲಿ ಮುದ್ರಿಸಿಕೊಂಡು ಪ್ರವೇಶ ಪತ್ರದಲ್ಲಿ ಸೂಚಿಸಲಾಗಿರುವ ದಿನಾಂಕ, ಸಮಯ ಹಾಗೂ ದಾಖಲೆಗಳೊಂದಿಗೆ ಪರೀಕ್ಷಾ ಸ್ಥಳದಲ್ಲಿ ತಪ್ಪದೇ ಹಾಜರಾಗುವುದು.

ಪ್ರವೇಶ ಪತ್ರವನ್ನು ಅಂಚೆ ಅಥವಾ ಇತರೆ ಯಾವುದೇ ಮೂಲಗಳಿಂದ ಕಳುಹಿಸಲಾಗುವುದಿಲ್ಲ. ಅಭ್ಯಗಳು ಸಂಸ್ಥೆಯ ವೆಬ್ಸೈಟ್ www.mybmtc.com ಮೂಲಕವೇ  ಪ್ರವೇಶ ಪತ್ರಗಳನ್ನು ತಪ್ಪದೇ ಡೌನ್ಲೋಡ್ ಮಾಡಿ ಮುದ್ರಿಸಿಕೊಂಡು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಗೆ ಹಾಜರಾಗುವುದು. ಸೂಚಿಸಲಾದ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಸಾಮಾನ್ಯ ಪರೀಕ್ಷೆಗೆ ಹಾಜರಾಗದಿದ್ದಲ್ಲಿ ನಂತರ ಸಲ್ಲಿಸುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

      ಅಭ್ಯಗಳು ನಿಗಧಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದೂ ಅವರುಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಅಂತಹ ಅಭ್ಯಗಳು ದಿನಾಂಕ 4/6/2018ರ ಸಾಯಂಕಾಲ 5.00 ಗಂಟೆಯೊಳಗಾಗಿ ದೂರವಾಣಿ ಮೂಲಕ ತಿಳಿಸುವುದು ಮತ್ತು ಖುದ್ದಾಗಿ ಬೆಮಸಾಸಂಸ್ಥೆಯ ಕೇಂದ್ರ ಕಛೇರಿಯ ನೇಮಕಾತಿ ಶಾಖೆಯಲ್ಲಿ ಸಂಪರ್ಕಿಸಿ ಅವಶ್ಯ ದಾಖಲಾತಿಗಳನ್ನು ಸಲ್ಲಿಸಿ ತಮ್ಮ ಅಭ್ಯರ್ಥತನವನ್ನು ಖಚಿತಪಡಿಸಿಕೊಳ್ಳುವುದು. ನಂತರ ಸಲ್ಲಿಸುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದಿಲ್ಲ.

ಅಭ್ಯಗಳಿಗೆ ಯಾವುದೇ ಗೊಂದಲವಿದ್ದಲ್ಲಿ ಸಂಸ್ಥೆಯ ಸಹಾಯವಾಣಿ (ಊಜಟಠಿ ಟಿಜ) ಸಂಖ್ಯೆ 7760991125, 7760991127, 080-22537409, 080-22537405 ಗಳಿಗೆ ಕೆಲಸದ ದಿನಗಳಂದು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು.

 

Updated on: ಶನಿವಾರ, 2 June, 2018 - 15:05
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಕೈಗೆಟಕುವ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂಗಳೂರು ಮಹಾನಗರದ ನಾಗರೀಕರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಬೆಂ.ಮ.ಸಾ.ಸಂಸ್ಥೆಯು ಉತ್ತಮ ಸಾರಿಗೆ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ ಹೆಚ್ಚು ಹೆಚ್ಚು ಪ್ರಯಾಣಿಕರು ಬೆಂ.ಮ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮೂಲಕ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ಪೂರಕವಾಗುವಂತೆ 2018 ಹೊಸ ವರ್ಷದ ಉಡುಗೊರೆಯಾಗಿ ಹವಾನಿಯಂತ್ರಿತ (ವಜ್ರ ಮತ್ತು ವಾಯುವಜ್ರ) ಸೇವೆಗಳ ದರಗಳನ್ನು ಈ ಕೆಳಗಿನಂತೆ ಕಡಿಮೆಗೊಳಿಸಿ ಪರಿಷ್ಕರಿಸಲಾಗಿರುತ್ತದೆ. 1. ವಜ್ರ ಸೇವೆಗಳ ಪ್ರಯಾಣ ದರದಲ್ಲಿ, ಶೇ.37 ರವರೆಗೆ ಕಡಿಮೆಗೊಳಿಸಿ ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ಪ್ರಾಯೋಗಿಕವಾಗಿ ದರ ಪರಿಷ್ಕರಣೆ ಮಾಡಲಾಗಿದೆ. 2. ವಾಯುವಜ್ರ ಅನುಸೂಚಿಗಳಲ್ಲಿ (ಮೇಕ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಮತ್ತು ಕೋಗಿಲು ಕ್ರಾಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರವನ್ನು ದಿನಾಂಕ: 01.01.2018 ರಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಲಾಗಿದೆ. 3. ಹುಣಸಮಾರನಹಳ್ಳಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸದಾಗಿ ಪ್ರಯಾಣದರವನ್ನು ರೂ.100/-ಗಳನ್ನು ನಿಗದಿಪಡಿಸಲಾಗಿದೆ. 4. ವಾಯುವಜ್ರ ಸೇವೆಗಳಲ್ಲಿ 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಿಸುವ ಪ್ರಯಾಣಿಕರಿಗೆ ಶೇ.15 ರಷ್ಟು ರಿಯಾಯಿತಿ. ವಾಯುವಜ್ರ ಸೇವೆಗಳಲ್ಲಿ ಗುಂಪು ರಿಯಾಯಿತಿ: ಪ್ರಸ್ತುತ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಪ್ರಯಾಣಿಕರು ಹೆಚ್ಚು ಹೆಚ್ಚು ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಿನಾಂಕ: 27.01.2018 ರಂದು ಜಾರಿಗೆ ಬರುವಂತೆ ಪ್ರಾಯೋಗಿಕವಾಗಿ ವಾಯುವಜ್ರ ಸೇವೆಗಳಲ್ಲಿ ಮೂರು ಹಾಗೂ ಮೂರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಿದ್ದಲ್ಲಿ, ಗುಂಪು ರಿಯಾಯಿತಿಯನ್ನು ಈ ಕೆಳಗಿನಂತೆ ಕಲ್ಪಿಸಲಾಗಿದೆ. 1. 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15 ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗಿರುತ್ತದೆ. 2. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೌಂಟರ್ ನಲ್ಲಿ ಟಿಕೇಟ್ ಖರೀದಿಸುವ ಪ್ರಯಾಣಿಕರಿಗೆ ಈ ರಿಯಾಯಿತಿಯು ಅನ್ವಯಿಸುತ್ತದೆ. 3. ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಕಾರ್ಯಾಚರಣೆಯಾಗುವ ಮಾರ್ಗ ಸಂಖ್ಯೆ ಕೆಐಎಎಸ್-8 ರಲ್ಲಿ ಪ್ರಯಾಣಿಸುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯಿಸುತ್ತದೆ. 4. ಮುಂದಿನ ದಿನಗಳಲ್ಲಿ, ಎಲ್ಲಾ ವಾಯುವಜ್ರ ಸೇವೆಗಳಲ್ಲಿ, ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು.
Updated on: ಸೋಮವಾರ, 29 January, 2018 - 16:11

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಕೈಗೆಟಕುವ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂ.ಮ.ಸಾ.ಸಂಸ್ಥೆಯು ತನ್ನ ಪ್ರಯಾಣಿಕ ಸ್ನೇಹಿ ಉಪಕ್ರಮಗಳ ಮುಂದುವರೆದ ಕ್ರಮವಾಗಿ 2018ರ ವರ್ಷಾರಂಭದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಬಯಸುತ್ತದೆ.


ಬೆಂಗಳೂರು ಮಹಾನಗರದ ನಾಗರೀಕರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವಾರು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಬೆಂ.ಮ.ಸಾ.ಸಂಸ್ಥೆಯು ಉತ್ತಮ ಸಾರಿಗೆ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ ಹೆಚ್ಚು ಹೆಚ್ಚು ಪ್ರಯಾಣಿಕರು ಬೆಂ.ಮ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮೂಲಕ ಸಮೂಹ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಲು ಪೂರಕವಾಗುವಂತೆ ಹವಾನಿಯಂತ್ರಿತ (ವಜ್ರ ಮತ್ತು ವಾಯುವಜ್ರ)ಸೇವೆಗಳ ದರಗಳನ್ನು ಈ ಕೆಳಗಿನಂತೆ ಕಡಿಮೆಗೊಳಿಸಿ ಪರಿಷ್ಕರಿಸಲಾಗಿದೆ.


 • • ವಜ್ರ ಸೇವೆಗಳ ದರದಲ್ಲಿ ಕಡಿತ :
 1. ಪ್ರಸ್ತುತ ಹವಾನಿಯಂತ್ರಿತ ವಜ್ರ ಸೇವೆಗಳ ಪ್ರಯಾಣ ದರದಲ್ಲಿ, ಶೇ.37ರವರೆಗೆ ಕಡಿಮೆಗೊಳಿಸಿ ದರ ಪರಿಷ್ಕರಣೆ ಮಾಡಲಾಗಿದೆ.
 2. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಲ್ಲಿ ಮಾತ್ರ ಈ ದರಗಳನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗುವುದು.
 • • ವಾಯುವಜ್ರ ಸೇವೆಗಳ ದರದಲ್ಲಿ ಕಡಿತ :
 1. ವಾಯುವಜ್ರ ಅನುಸೂಚಿಗಳಲ್ಲಿ (ಮೇಕ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಮತ್ತು ಕೋಗಿಲು ಕ್ರಾಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ದರವನ್ನು ಕೆಳಗಿನಂತೆ ಪರಿಷ್ಕರಿಸಲಾಗಿದೆ..
 2. ಸ್ಥಳಗಳು ಸ್ಥಳಗಳು ಪ್ರಸ್ತುತ ಮೂಲ ದರ ರೂ.ಗಳಲ್ಲಿ * ಪರಿಷ್ಕರಿಸಲಾದ ಮೂಲ ದರ ರೂ.ಗಳಲ್ಲಿ *
  ಮೇಕ್ರಿ ವೃತ್ತ ಕೆಐಎಎಲ್ 190.00 175.00
  ಹೆಬ್ಬಾಳ ಕೆಐಎಎಲ್ 170.00 150.00
  ಎಸ್ಟೀಂ ಮಾಲ್ ಕೆಐಎಎಲ್ 170.00 140.00
  ಕೋಗಿಲು ಕ್ರಾಸ್ ಕೆಐಎಎಲ್ 170.00 125.00

  * ಉಖಖಿ (ಶೇ.5 ರಷ್ಟು) ಮತ್ತು ಟೋಲ್ ದರ (ರೂ.12 ಪ್ರತಿ ಪ್ರಯಾಣಿಕರಿಗೆ) ಹೊರತುಪಡಿಸಿ

 3. ಹುಣಸಮಾರನಹಳ್ಳಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸದಾಗಿ ಪ್ರಯಾಣದರವನ್ನು ರೂ.100/-ಗಳನ್ನು ನಿಗದಿಪಡಿಸಲಾಗಿದೆ.
 • • ವಾಯುವಜ್ರ ಸೇವೆಗಳಲ್ಲಿ ಗುಂಪು ರಿಯಾಯಿತಿ:
 1. 3 ಅಥವಾ 3 ಕ್ಕಿಂತ ಹೆಚ್ಚು ಪ್ರಯಾಣಿಕರು ಗುಂಪಿನಲ್ಲಿ ಪ್ರಯಾಣಿಸಿದ್ದಲ್ಲಿ, ಶೇ.15 ರಷ್ಟು ಗುಂಪು ರಿಯಾಯಿತಿಯನ್ನು ನೀಡಲಾಗುವುದು.
 2. ಪ್ರಥಮ ಹಂತವಾಗಿ ವಾಯುವಜ್ರ ಸೇವೆಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪಿಓಎಸ್ ಮೂಲಕ ಟಿಕೇಟ್ ಖರೀದಿಸಿ ಪ್ರಯಾಣಿಸುವವರಿಗೆ ರಿಯಾಯಿತಿ ನೀಡಲಾಗುವುದು.
 3. ಮುಂದಿನ ದಿನಗಳಲ್ಲಿ, ಎಲ್ಲಾ ವಾಯುವಜ್ರ ಸೇವೆಗಳಲ್ಲಿ, ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು.
 4. ಗುಂಪು ರಿಯಾಯಿತಿಯನ್ನು ಜಾರಿಗೆ ತರುವ ದಿನಾಂಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು.
Updated on: ಮಂಗಳವಾರ, 2 January, 2018 - 17:15
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಆಗಸ್ಟ್-2017 ರಲ್ಲಿ ಒಟ್ಟು 23065 ಟ್ರಿಪ್ಗಳನ್ನು ತಪಾಸಿಸಿ 7265 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 10,89,650/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2039 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 365 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 36,500/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸತಕ್ಕದ್ದು. ಇದರಿಂದ ದಂಡ ಹಾಕುವ ಪ್ರಮೇಯವೇ ಬರುವುದಿಲ್ಲ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.
Updated on: ಶುಕ್ರವಾರ, 15 September, 2017 - 16:43
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜುಲೈ-2017 ರಲ್ಲಿ ಒಟ್ಟು 22457 ಟ್ರಿಪ್ಗಳನ್ನು ತಪಾಸಿಸಿ 7922 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 13,04,580/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2601 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 414 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 41,400/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸತಕ್ಕದ್ದು. ಇದರಿಂದ ದಂಡ ಹಾಕುವ ಪ್ರಮೇಯವೇ ಬರುವುದಿಲ್ಲ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.
Updated on: ಶುಕ್ರವಾರ, 15 September, 2017 - 16:40
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಫೆಬ್ರವರಿ-2017 ರಲ್ಲಿ ಒಟ್ಟು 20630 ಟ್ರಿಪ್ಗಳನ್ನು ತಪಾಸಿಸಿ 7054 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 11,11,180/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2175 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 279 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 27.900/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸತಕ್ಕದ್ದು. ಇದರಿಂದ ದಂಡ ಹಾಕುವ ಪ್ರಮೇಯವೇ ಬರುವುದಿಲ್ಲ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.
Updated on: ಶುಕ್ರವಾರ, 24 March, 2017 - 13:46
ವಿಷಯ : ದಿನಾಂಕ 04.03.2017 ರಂದು 86ನೇ ಬಸ್ ದಿನ ಆಚರಿಸುತ್ತಿರುವ ಬಗ್ಗೆ. ******* ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಬಸ್ ದಿನವನ್ನು ಆಚರಿಸಲಾಗುತ್ತಿದೆ. ಮಾರ್ಚ್ 2017 ರ ಬಸ್ ದಿನವನ್ನು ದಿನಾಂಕ 04.03.2017 ರಂದು ಶನಿವಾರ ಆಚರಣೆ ಮಾಡಲಾಗುತ್ತಿದೆ. ಸಂಸ್ಥೆಯು ಹಿಂದಿನ 6 ವರ್ಷಗಳಿಂದ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ. ಮಾರ್ಚ್-2017 ನೇ ಮಾಹೆಯಲ್ಲಿ 04.03.2017 ರಂದು ಶನಿವಾರ ಆಚರಿಸುವ ಬಸ್ ದಿನಾಚರಣೆಯು 86ನೇ ಬಸ್ ದಿನಾಚರಣೆಯಾಗಿರುತ್ತದೆ. ಬೆಂ.ಮ.ಸಾ.ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ ಮಾರ್ಗಗಳ ವಿವರಗಳು ಈ ಕೆಳಕಂಡಂತಿವೆ. ಕ್ರ. ಸಂ ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಒಟ್ಟು ಅನುಸೂಚಿಗಳು ಮಾರ್ಗ 1 290ಈವೈ/1 ಕೆಂಪೇಗೌಡ ಬಸ್ ನಿಲ್ದಾಣ ಯಲಹಂಕ 2 ಟ್ಯಾನರಿ ರಸ್ತೆ 2 ಎಂಬಿಎಸ್-8ಇ ಕಲ್ಯಾಣನಗರ ಎಲೆಕ್ಟ್ರಾನಿಕ್ ಸಿಟಿ ವಿಪ್ರೊ ಗೇಟ್ 2 ಕಮ್ಮನ ಹಳ್ಳಿ, ಮಾರುತಿಸೇವಾನಗರ, ದೂಪನ ಹಳ್ಳಿ, ಮಡಿವಾಳ 3 500 ಡಿಪಿ ಗೊರಗುಂಟೆಪಾಳ್ಯ ಸೆಂಟ್ರಲ್ ಸಿಲ್ಕ್ ಬೋರ್ಡ್ 1 ಹೆಬ್ಬಾಳ, ಟಿನ್ ಫ್ಯಾಕ್ಟರಿ 4 290 ಇಎನ್ ಯಲಹಂಕ ನಾಗವಾರ 1 ರಾಮಕೃಷ್ನ ಹೆಗಡೆ ನಗರ 5 238 ಯುಸಿ ಕೆಂಪೇಗೌಡ ಬಸ್ ನಿಲ್ದಾಣ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್ 2 ಮಾಗಡಿ ರಸ್ತೆ 1ನೇ ಕ್ರಾಸ್, ವಿಜಯನಗರ, ಮೂಡಲಪಾಳ್ಯ 6 235ಎಬಿ ಕೃ.ರಾ.ಮಾರುಕಟ್ಟೆ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್ 1 ಮೈಸೂರು ರಸ್ತೆ ಬಸ್ ನಿಲ್ದಾಣ, ವಿಜಯನಗರ, ಮೂಡಲಪಾಳ್ಯ, ಕೆಂಗುಂಟೆ ಸರ್ಕಲ್ 7 243ಎಲ್ ಕೆಂಪೇಗೌಡ ಬಸ್ ನಿಲ್ದಾಣ ಲಿಂಗದೀರನಹಳ್ಳಿ 1 ಮಾಗಡಿ ರಸ್ತೆ 1ನೇ ಕ್ರಾಸ್, ಕೆ.ಹಚ್.ಬಿ ಕಾಲೋನಿ, ಸುಂಕದಕಟ್ಟೆ 8 500ಎಫ್ ಬಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಾಡುಗೋಡಿ 2 ಅಗರ, ಮಾರತ್ ಹಳ್ಳಿ ಬ್ರಿಡ್ಜ್, ವರ್ತೂರು ಕೋಡಿ, ಹೋಪ್ ಫಾರಂ 9 289 ವೈ ಹೊಸಕೋಟೆ ದೇವನಹಳ್ಳಿ 1 ಬೂದಿಗೆರೆ ಕ್ರಾಸ್, ಮಂಡೂರು, ಬೂದಿಗೆರೆ 10 317 ಕ್ಯೂ ಎನ್ ಹೊಸಕೋಟೆ ನಂದಗುಡಿ 1 ದೊಡ್ಡ ಹಲ್ಲೂರಳ್ಳಿ, ಪಿಳ್ಳಗುಂಪೆ ಇಂಡಸ್ಟ್ರಿಯಲ್ ಎರಿಯಾ 11 ಚಕ್ರ-8 ಕಾಡಬಿಸನಹಳ್ಳಿ ಕಾಡಬಿಸನಹಳ್ಳಿ 6 ಮಾರತ್ ಹಳ್ಳಿ ಬ್ರಿಡ್ಜ್, ವೈಟ್ ಫೀಲ್ಡ್ ಟಿಟಿಎಂಸಿ, ಐಟಿಪಿಎಲ್ 12 ಚಕ್ರ-8ಎ ಕಾಡಬಿಸನಹಳ್ಳಿ ಕಾಡಬಿಸನಹಳ್ಳಿ 06 ಮಾರತ್ ಹಳ್ಳಿ ಬ್ರಿಡ್ಜ್, ವರ್ತೂರು ಕೋಡಿ, ಐಟಿಪಿಎಲ್ ಒಟ್ಟು 26 ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.
Updated on: ಶುಕ್ರವಾರ, 3 March, 2017 - 15:50
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಧೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜನವರಿ-2017 ರಲ್ಲಿ ಒಟ್ಟು 21075 ಟ್ರಿಪ್ಗಳನ್ನು ತಪಾಸಿಸಿ 7924 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 12,51,800/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 2432 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 306 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 30,600/- ಗಳನ್ನು ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸತಕ್ಕದ್ದು. ಇದರಿಂದ ದಂಡ ಹಾಕುವ ಪ್ರಮೇಯವೇ ಬರುವುದಿಲ್ಲ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.
Updated on: ಬುಧವಾರ, 22 February, 2017 - 16:53
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರ ನ ಉಪಸ್ಥಿತಿಯಲ್ಲಿ ದಿನಾಂಕ 15ನೇ ಫೆಬ್ರವರಿ 2017 ರಂದು ಹೊಸಕೋಟೆಯಲ್ಲಿ ನೆರವೇರಿಸಿದರು. ಶ್ರೀ ಎನ್.ನಾಗರಾಜ್, ಎಂ.ಟಿ.ಬಿ, ಮಾನ್ಯ ಶಾಸಕರು ಹೊಸಕೋಟೆ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರವರು ಸಮಾರಂಭದ ಅಧಕ್ಷತೆಯನ್ನು ವಹಿಸಿದ್ದರು. ಶ್ರೀ ಹೆಚ್.ಸಿ.ಮಹದೇವಪ್ಪ, ಮಾನ್ಯ ಲೋಕೋಪಯೋಗಿ ಸಚಿವರು, ಶ್ರೀ ಕೃಷ್ಣಬೈರೇಗೌಡ, ಮಾನ್ಯ ಕೃಷಿ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರು, ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು. ಶ್ರೀ ಎಂ.ನಾಗರಾಜು ಯಾದವ್, ಅಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶ್ರೀ.ಬಿ.ಗೋವಿಂದರಾಜು, ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಡಾ||ಬಿ.ಬಸವರಾಜು, ಭಾಆಸೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಡಾ||ಏಕ್ರೂಪ್ಕೌರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ಸಾ.ಸಂಸ್ಥೆ, ಬೆಂ.ಮ.ಸಾ.ಸಂಸ್ಥೆಯ ಮಂಡಳಿ ನಿರ್ದೇಶಕರುಗಳು, ಹಾಗೂ ಇತರೆ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹೊಸಕೋಟೆ ಬಸ್ ಟರ್ಮಿನಲ್ ಯೋಜನೆಯ ವಿವರ: ಬೆಮಸಾಸಂಸ್ಥೆಯು ಬೆಂಗಳೂರು ಗ್ರಾಮಾಂತರ ಬಸ್ ಪ್ರಯಾಣಿಕರಿಗೆ ವಿನೂತನ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಹೊಸಕೋಟೆ ಬಸ್ ಟರ್ಮಿನಸ್ ಅನ್ನು 1 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ನಿರ್ಮಿಸಲು 20 ಕೋಟಿರೂಗಳ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸದರಿ ಬಸ್ ಟರ್ಮಿನಸ್ ನ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯು ಉಚಿತವಾಗಿ ನೀಡಿದ್ದು, ಕರ್ನಾಟಕ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆ (SDP) ಅಡಿಯಲ್ಲಿ ರೂ. 20 ಕೋಟಿಗಳ ಅನುದಾನವನ್ನು ನೀಡಿದೆ. ಈ ಬಸ್ ಟರ್ಮಿನಸ್ನ ನಿರ್ಮಾಣ ಕಾಮಗಾರಿಯನ್ನು ಸುಮಾರು 18 ತಿಂಗಳುಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ನೂತನ ಹೊಸಕೋಟೆ ಬಸ್ ಟರ್ಮಿನಸ್ನಲ್ಲಿ ಲಭ್ಯವಾಗಲಿರುವ ಮೂಲ ಸೌಲಭ್ಯಗಳು: ನೆಲ ಮಾಳಿಗೆ: ದ್ವಿದ್ವಚಕ್ರ ಮತ್ತು ಕಾರುಗಳ ನಿಲುಗಡೆ ನೆಲ ಅಂತಸ್ತು 1) 3 ಬಸ್ ಬೇಗಳು 2) ಪ್ರಯಾಣಿಕರ ಸೌಲಭ್ಯಗಳ ಮಳಿಗೆ 3) ಆರ್.ಓ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ 4) ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ 5) ಆಧುನಿಕ ಶೌಚಾಲಯಗಳ ವ್ಯವಸ್ಥೆ 6) ಲಿಫ್ಟ್ ವ್ಯವಸ್ಥೆ 7) ಮಹಿಳಾ ನಿರೀಕ್ಷಣಾ ಕೊಠಡಿ 8) ತಾಯಂದಿರ ಕೊಠಡಿ 9) ಪಾಸ್ ಕೌಂಟರ್ 10) ಎಲ್.ಇ.ಡಿ. ಲೈಟಿಂಗ್ ವ್ಯವಸ್ಥೆ 11) ಮಳೆ ನೀರು ಕೊಯ್ಲ ಪದ್ದತಿ ಮೆಜನೈನ್ ಅಂತಸ್ತು 1) ಬೆಂಮಸಾಸಂಸ್ಥೆ ಕಚೇರಿಗಳು 2) ಉಪಾಹಾರ ಗೃಹ ಮೊದಲನೇ ಅಂತಸ್ತು 1) ಸಿಬ್ಬಂದಿಗಳ ವಿಶ್ರಾಂತಿ ಕೊಠಡಿ(ರಾತ್ರಿ) 2) ಕಚೇರಿ ಜಾಗಗಳು ಪ್ರಸ್ತುತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸಕೋಟೆಯಿಂದ 32 ಮಾರ್ಗಗಳ 133 ಅನುಸೂಚಿಗಳಲ್ಲಿ 977 ಸುತ್ತುವಳಿಗಳನ್ನು ಕಾರ್ಯಾಚರಣೆ ಮಾಡುತ್ತಿದೆ ಹಾಗೂ ಹೊಸಕೋಟೆ ಮಾರ್ಗವಾಗಿ ಸುತ್ತಮುತ್ತಲ ಗ್ರಾಮಗಳಿಗೆ ಒಟ್ಟು 87 ಮಾರ್ಗಗಳ 198 ಅನುಸೂಚಿಗಳಲ್ಲಿ 1437 ಸುತ್ತುವಳಿಗಳು ಆಚರಣೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಹೊಸಕೋಟೆ ಬಸ್ ಟರ್ಮಿನಸ್ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಾಗೂ ಸದರಿ ಬಸ್ ಟರ್ಮಿನಸ್ ಅನ್ನು ಸಂಚಾರ ವ್ಯವಸ್ಥೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
Updated on: ಗುರುವಾರ, 16 February, 2017 - 11:06
ವಿಷಯ: ವಾಯುವಜ್ರ ಬಸ್ಸುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ. * * * ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನಾಂಕ:19.02.2017 ರಿಂದ 30.04.2017 ರವರೆಗೆ ರನ್ವೇ ನವೀಕರಣ ಮತ್ತು ಕಾಮಗಾರಿ ಕಾರ್ಯ ಹಿನ್ನೆಲೆಯಲ್ಲಿ ಬೆಳಗ್ಗೆ 10:00 ರಿಂದ ಸಂಜೆ 17:00 ರವರೆಗೆ ವಿಮಾನಗಳ ಆಗಮನ ಮತ್ತು ನಿರ್ಗಮನಗಳನ್ನು ನಿಲ್ಲಿಸಿರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಣೆ ಮಾಡುವ ವಾಯುವಜ್ರ ಅನುಸೂಚಿಗಳ ವೇಳೆಯನ್ನು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲಕ್ಕಾಗಿ & ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬದಲಾಯಿಸಲಾಗಿದೆ. ಒಟ್ಟು 91 ಅನುಸೂಚಿಗಳ ವೇಳೆಯನ್ನು ತಾತ್ಕ್ಲಿಕವಾಗಿ ದಿನಾಂಕ:19.02.2017 ರಿಂದ ಜಾರಿಗೆ ಬರುವಂತೆ ಬದಲಾಯಿಸಿ ಕಾರ್ಯಾಚರಣೆ ಮಾಡಲಾಗುವುದು, ಹಾಗೂ ವಾಯುವಜ್ರ ಅನುಸೂಚಿಗಳ ಪರಿಷ್ಕೃತ ಮಾರ್ಗದ ವೇಳಾಪಟ್ಟಿ ವಿವರಗಳು ಈ ಕೆಳಕಂಡತಿದೆ. ¬¬¬¬¬¬¬¬ 1) ಮಾರ್ಗಸಂಖ್ಯೆ ಕೆಐಎಎಸ್-4 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಹೆಚ್ಎಎಲ್ ಹಳೆ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಹೆಚ್ಎಎಲ್ ಹಳೆ ವಿಮಾನ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0000, 0330, 0400, 0500, 0530, 0600, 0700, 0715, 0800, 0845, 0900, 1000, 1130, 1405, 1830, 1900, 1930, 2000, 2100, 2145, 2200 & 2310 0000, 0030, 0205, 0500, 0520, 0600, 0630, 0700, 0730, 0845, 1605, 1700, 1745, 1810, 1900, 1920, 19401, 2000, 2230, & 2300. 2) ಮಾರ್ಗಸಂಖ್ಯೆ ಕೆಐಎಎಸ್-5 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಬನಶಂಕರಿ ಟಿಟಿಎಂಸಿ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಬನಶಂಕರಿ ಟಿಟಿಎಂಸಿ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0135, 0230, 0300, 0320, 0400, 0500, 0600, 0630, 0720, 0750, 0840, 0900, 0930, 1300, 1330, 1410, 1515, 1530, 1545, 1605, 1700, 1725, 1750, 1820, 1920, 1940, 2000, 2020, 2045, 2055, 2140, 2200. 0030, 0135, 0255, 0400, 0425, 0500, 0520, 0610, 0630, 0700, 0720, 0750, 0805, 0905, 0935, 0950, 1045, 1105, 1135, 1505, 1530, 1615, 1730, 1735, 1750, 1810, 1945, 1955, 2030, 2125, 2230, 2305, 2320 3) ಮಾರ್ಗಸಂಖ್ಯೆ ಕೆಐಎಎಸ್-5ಎ ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಜಂಬೂಸವಾರಿ ದಿಣ್ಣೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಜಂಬೂಸವಾರಿ ದಿಣ್ಣೆ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0630, 0730, 1640, 1740, 2115, 2230 0435, 0525, 0920, 1000, 1910, 2025 4) ಮಾರ್ಗಸಂಖ್ಯೆ ಕೆಐಎಎಸ್-6 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಕಾಡುಗೋಡಿ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0400, 0430, 0500, 0600, 0730, 0805, 0830, 1400, 1500, 1600, 1700, 1720, 1800, 1900, 2000, 2100, 2200, 2300, 0015, 0300, 0355, 0500, 0600, 0630, 0730, 0830, 1000, 1015, 1030, 1530, 1630, 1740, 1830, 1930, 2030, 2130. 5) ಮಾರ್ಗಸಂಖ್ಯೆ ಕೆಐಎಎಸ್-6ಎ ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಕಾಡುಗೋಡಿ ಬಸ್ ನಿಲ್ದಾಣ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಕಾಡುಗೋಡಿ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0620, 0735, 0835, 1430, 1530, 1530, 1630, 1945, 2005, 2130 0230, 0530, 0630, 0830, 1005, 1105, 1710, 1800, 1910. 6) ಮಾರ್ಗಸಂಖ್ಯೆ ಕೆಐಎಎಸ್-7 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಹೆಚ್ಎಸ್ಆರ್ ಬಿಡಿಎ ಕಾಂಪ್ಲೇಕ್ಸ್ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಹೆಚ್ಎಸ್ಆರ್ ಬಿಡಿಎ ಕಾಂಪ್ಲೇಕ್ಸ್ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0220, 0320, 0420, 0515, 0620, 0710, 0820, 0905, 1320, 1420, 1520, 1620, 1725, 1825, 1930, 2040, 2140. 0420, 0520, 0620, 0700, 0720, 0820, 0930, 1020, 1100, 1520, 1620, 1720, 1820, 1920, 2100, 2130, 2300, 2340. 7) ಮಾರ್ಗಸಂಖ್ಯೆ ಕೆಐಎಎಸ್-7ಎ ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಹೆಚ್ಎಸ್ಆರ್ ಬಿಡಿಎ ಕಾಂಪ್ಲೇಕ್ಸ್ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಹೆಚ್ಎಸ್ಆರ್ ಬಿಡಿಎ ಕಾಂಪ್ಲೇಕ್ಸ್ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0200, 0225, 0310, 0630, 0740, 0800, 0835, 1450, 1500, 1550, 1610, 1650, 1815, 1855, 1950, 2020. 0330, 0400, 0530, 0540, 0630, 0840, 0945, 1000, 1105, 1700, 1740, 1800, 1840, 1900, 2000, 2050, 2225 8) ಮಾರ್ಗಸಂಖ್ಯೆ ಕೆಐಎಎಸ್-8 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಎಲೇಕ್ಟ್ರಾನಿಕ್ ಸಿಟಿಗೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಎಲೇಕ್ಟ್ರಾನಿಕ್ ಸಿಟಿ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0155, 0300, 0330, 0400, 0435, 0505, 0525, 0550, 0630, 0700, 0800, 0900, 1515, 1530, 1600, 1630, 1730, 1800, 1830, 1900, 1935, 2005, 2030, 2110, 2130, 2200, 2225, 2300. 2330, 0000, 0020, 0100, 0040, 0200, 0300, 0500, 0600, 0640, 0700, 0730, 0800, 0820, 0900, 0925, 0945, 1600, 1620, 1705, 1800, 1820, 1840, 1900, 1945, 2000, 2040, 2100, 2200, 2230, 2300. 9) ಮಾರ್ಗಸಂಖ್ಯೆ ಕೆಐಎಎಸ್-8ಸಿ ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಚಂದಾಪುರಗೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಚಂದಾಪುರ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0600, 0705, 0805, 0905, 1620, 2020, 2050, 2215. 0630, 0530, 0430, 0910, 1640, 1720, 1930, 2020. 10) ಮಾರ್ಗಸಂಖ್ಯೆ ಕೆಐಎಎಸ್-8ಡಿ ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ದೊಡ್ಡಕನ್ನಲ್ಲಿ ಬಸ್ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ದೊಡ್ಡಕನ್ನಲ್ಲಿ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0555, 0615, 1530, 1640, 1955, 2115, 0345, 0400, 0820, 0850, 1730, 1910. 11) ಮಾರ್ಗಸಂಖ್ಯೆ ಕೆಐಎಎಸ್-9 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಕೆಂಪೇಗೌಡ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0015, 0105, 0200, 0345, 0400, 0425, 0435, 0440, 0500, 0525, 0540, 0600, 0625, 0645, 0655, 0705, 0725, 0800, 0820, 0840, 0905, 0920, 0945, 1400, 1425, 1440, 1450, 1505, 1520, 1530, 1545, 1620, 1640, 1705, 1720, 1730, 1745, 1755, 1805, 1820, 1830, 1840, 1900, 1915, 1920, 1930, 1945, 2010. 2035, 2050, 2100, 2110, 2140, 2200, 2210, 2230, 2300, 2325, 2355, 0030, 0050, 0100, 0130, 0205, 0235, 0310, 0330, 0410, 0455, 0510, 0535, 0545, 0600, 0620, 0640, 0700, 0710, 0720, 0745, 0800, 0825, 0845, 0900, 0920, 0940, 1010, 1040, 1050, 1105, 1130, 1230, 1300, 1520, 1545, 1600, 1610, 1625, 1645, 1700, 1740, 1810, 1840, 1850, 1915, 1930, 1940, 1950, 2000, 2015, 2025, 2045, 2105, 2130, 2155, 2230, 2245, 2305, 2325, 2350 12) ಮಾರ್ಗಸಂಖ್ಯೆ ಕೆಐಎಎಸ್-10 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಎಂಸಿಟಿಸಿ ಬಸ್ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಎಂಸಿಟಿಸಿ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0210, 0320, 0345, 0350, 0410, 0430, 0440, 0525, 0540,0645, 0715, 0745, 0815, 0845, 0915, 1350, 1435, 1500, 1530, 1610, 1700, 1730, 1750, 1815, 1840, 1915, 2010, 2100, 2210, 2230. 0030, 0130, 0400, 0500, 0530, 0600, 0630, 0700, 0730, 0800, 0830, 0900, 0930, 1000, 1030, 1100, 140, 1625, 1700, 1730, 1820, 1900, 1930, 2000, 2015, 2030, 2100, 2130, 2200, 2330 13) ಮಾರ್ಗಸಂಖ್ಯೆ ಕೆಐಎಎಸ್-12 ಕೆಂಪೇಗೌಡ ಅಂತರಾಷ್ಟೀಯ ವಿಮಾನನಿಲ್ದಾಣದಿಂದ ಕುವೆಂಪುನಗರ ಬಸ್ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ವೇಳೆ ಈ ಕೆಳಕಂಡಂತಿದೆ. ನಿರ್ಗಮನದ ಸಮಯ ಕುವೆಂಪುನಗರ ಬಸ್ ನಿಲ್ದಾಣ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ 0055, 0155, 0215, 0300, 0400, 0430, 0510, 0620, 0645, 0750, 0800, 1315, 1345, 1415, 1505, 1625, 1705, 1735, 1805, 1830, 1940, 2100, 2120, 2225 0025, 0230 0330, 0400, 0500, 0540, 0600, 0655, 0705, 0825, 0855, 0945, 0955, 1535, 1600, 1635, 1710, 1830, 1930, 2030, 2100, 2200, 2300, 2330 ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ಮಾರ್ಗಗಳ ಮಾಹಿತಿಯನ್ನು ಸಂಸ್ಥೆಯ ಅಂತರ್ಜಾಲ www.mybmtc.com ನಲ್ಲಿ ಪಡೆಯಬಹುದಾಗಿರುತ್ತದೆ.
Updated on: ಗುರುವಾರ, 16 February, 2017 - 11:06
ವಿಷಯ : ಸ್ವಾಮಿ ವಿವೇಕಾನಂದ ಮೆಟ್ರೊ ಸ್ಟೇಷನ್ನಿಂದ ಐಟಿಪಿಲ್ಗೆ ಸಂಚರಿಸುವ ವೋಲ್ವೋ ಫೀಡರ್ ಮಾರ್ಗಗಳಲ್ಲ್ಲಿ ಪ್ರಯಾಣಿಸಲು ರೂ.80/- ರ ವಿಶೇಷ ನಿಕ ಹಾಗೂ ರೂ.1500/- ರ ಮಾಸಿಕ ಪಾಸುಗಳನ್ನು ಪರಿಚಯಿಸಿರುವ ಬಗ್ಗೆ. ******* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪೂರ್ವ ಪಶ್ಚಿಮ ಕಾರಿಡಾರ್ನಲ್ಲಿ ಕಾರ್ಯಾಚರಣೆಯಾಗುತ್ತಿರುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕ