ಜನವರಿ-2016 ರಲ್ಲಿ ಟಿಕೇಟ್ ರಹಿತ ಪ್ರಯಾಣಿಕರಿಂದ ದಂಡ ವಸೂಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಧೆ   ತನಿಖಾ ತಂಡಗಳು ಜನವರಿ-2016 ರಲ್ಲಿ ಒಟ್ಟು 29335 ಟ್ರಿಪ್ಗಳನ್ನು ತಪಾಸಿಸಿ 7681 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು ರೂ. 13,69,350/- ದಂಡ ವಸೂಲಿ ಮಾಡಿ ಸಂಸ್ಧೆಯ ನಿರ್ವಾಹಕರುಗಳ ಮೇಲೆ 3643  ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 1218 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 1,21,800/- ಗಳನ್ನು  ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು 94 ರ ಪ್ರಕಾರ  ದಂಡ ವಿಧಿಸಲಾಗಿರುತ್ತದೆ.