ಎಸ್ ಎಸ್ ಎಲ್ ಸಿ ವಿದ್ಯಾಗಳ ಬಸ್ ಪಾಸುಗಳನ್ನು ಪರೀಕ್ಷೆ ಮುಗಿಯುವವರೆಗೆ ಅನುಮತಿಸುವ ಬಗ್ಗೆ

 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಅತಿ ಹೆಚ್ಚಿನ ರಿಯಾಯಿತಿ ದರದಲ್ಲಿ ವಿದ್ಯಾರಿಯಾಯಿತಿ ಪಾಸುಗಳನ್ನು ವಿತರಣೆ ಮಾಡುತ್ತಿದೆ.

2015-16 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾಗಳ  ಪರೀಕ್ಷೆಯು ದಿನಾಂಕ:30.03.2016 ರಿಂದ ಪ್ರಾರಂಭವಾಗಿ ದಿನಾಂಕ:13.04.2016 ಕ್ಕೆ ಮುಕ್ತಾಯವಾಗಲಿದೆ. ಆದರೆ ಎಸ್.ಎಸ್.ಎಲ್.ಸಿ  ವಿದ್ಯಾಗಳ ರಿಯಾಯಿತಿ ಪಾಸಿನ ಮಾನ್ಯತಾ ಅವಧಿಯು ಮಾರ್ಚ್ ಗ 2016 ಕ್ಕೆ ಮುಕ್ತಾಯವಾಗಲಿದ್ದು, ಸಂಸ್ಥೆಯು ವಿದ್ಯಾಗಳ  ಹಿತವನ್ನು ಗಮನದಲ್ಲಿಟ್ಟುಕೊಂಡು ಸದರಿ ವಿದ್ಯಾಗಳ ಪಾಸಿನ ಮಾನ್ಯತಾ ಅವಧಿಯನ್ನು 13.04.2016 ರವರೆಗೆ ಮುಂದುವರೆಸಲು ನಿರ್ಧರಿಸಲಾಗಿದೆ.

ಈ ಸಂಬಂಧ, ಎಸ್.ಎಸ್.ಎಲ್.ಸಿ ತರಗತಿಯ ವಿದ್ಯಾಗಳು ಪರೀಕ್ಷೆಯು ಮುಗಿಯುವವರೆಗೆ ಅಂದರೆ ದಿನಾಂಕ:13.04.2016 ರವರೆಗೆ ಉಚಿತವಾಗಿ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ( ಅಥವಾ ಪಾಸಿನಲ್ಲಿ ನಮೂದಿಸಿರುವ ಸ್ಥಳದವರೆಗೆ) ಪ್ರಯಾಣಿಸಬಹುದಾಗಿರುತ್ತದೆ. ತತ್ಸಂಬಂಧ ಸದರಿ ವಿದ್ಯಾಗಳು ಬಸ್ಸಿನಲ್ಲಿ ಪ್ರಯಾಣಿಸುವಾಗ 2015-16 ನೇ ಸಾಲಿಗಾಗಿ ವಿತರಿಸಿರುವ ಪಾಸಿನೊಂದಿಗೆ ಪರೀಕ್ಷೆಗಾಗಿ ವಿತರಿಸಿರುವ ಪ್ರವೇಶ ಪತ್ರ (ಅಡ್ಮೀಷನ್ ಟಿಕೇಟ್)ವನ್ನು ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ..

     

ಕನ್ನಡ