ದಿನಾಂಕ 04.02.2016 ರಂದು 73ನೇ ಖಬಸ್ ದಿನಖ ಆಚರಿಸುತ್ತಿರುವ ಬಗ್ಗೆ

              ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ  ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಖಬಸ್ ದಿನಖ ವನ್ನು ಆಚರಿಸಲಾಗುತ್ತಿದೆ.

         ಇಲ್ಲಿಯವರೆಗೆ ಸಂಸ್ಥೆಯು 6 ವರ್ಷಗಳ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ.

        ಬೆಂಮಸಾಸಂಸ್ಥೆಯು ಪ್ರತಿದಿನ 6266 ಅನುಸೂಚಿಗಳೊಂದಿಗೆ 75,928 ಸುತ್ತುವಳಿಗಳನ್ನು 14.00 ಲಕ್ಷ ಕಿ.ಮೀ ಕ್ರಮಿಸಿ ಪ್ರತಿ ದಿನ 53 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದೆ. 73ನೇ ಬಸ್ ದಿನಾಚರಣೆಯನ್ನು ದಿನಾಂಕ 04/02/2016 ರ ಗುರುವಾರ ಆಚರಣೆ ಮಾಡುತ್ತಿದ್ದು. ಈ ಬಾರಿಯ 73ನೇ ಬಸ್ ದಿನಾಚರಣೆಯಂದು ಯಾವುದೇ ರದ್ದತಿಯಿಲ್ಲದೆ ಎಲ್ಲಾ ಅನುಸೂಚಿಗಳನ್ನು ಆಚರಣೆಗೊಳಿಸಲಾಗುತ್ತಿದ್ದು, ಪ್ರಸ್ತುತ ಆಚರಣೆಯಲ್ಲಿರುವ ಸುಮಾರು 1500 ಕ್ಕಿಂತಲೂ ಹೆಚ್ಚು ಸಾಮಾನ್ಯ ಪಾಳಿ ಅನುಸೂಚಿಗಳನ್ನು  ರಾತ್ರಿ 10.00 ಂಟೆಯವರೆಗೂ ವಿಸ್ತರಿಸಿ, ಜೊತೆಗೆ ಬದಲಿ ವಾಹನಗಳನ್ನು ಆಚರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ಪ್ರತಿ ದಿನ ಆಚರಣೆ ಮಾಡುವ ಸೇವೆಗಳ ಜೊತೆಗೆ ಹೆಚ್ಚಿನ ಸೇವೆಗಳನ್ನು ಹೆಚ್ಚುವರಿ ಸುತ್ತುವಳಿಗಳೊಂದಿಗೆ ಆಚರಣೆ ಮಾಡಲು ಸಹ ಕ್ರಮಕೈಗೊಳ್ಳಲಾಗಿದೆ.

     ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.

 

ಕನ್ನಡ