ದಿನಾಂಕ 04.04.2016 ರಂದು 75ನೇ ಖಬಸ್ ದಿನ ಆಚರಿಸುತ್ತಿರುವ ಬಗ್ಗೆ

ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಖಬಸ್ ದಿನಖ ವನ್ನು ಆಚರಿಸಲಾಗುತ್ತಿದೆ.

 

ಇಲ್ಲಿಯವರೆಗೆ ಸಂಸ್ಥೆಯು 6 ವರ್ಷಗಳ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ.  ಏಪ್ರಿಲ್ ಮಾಹೆಯ ದಿನಾಂಕ 04.04.2016 ರಂದು ಆಚರಿಸುವ ಬಸ್ ದಿನಾಚರಣೆಯು 75ನೇ ಬಸ್ ದಿನಾಚರಣೆಯಾಗಿರುತ್ತದೆ. 

  

 ಈ ಬಾರಿಯ ಬಸ್ ದಿನಾಚರಣೆಯ ವಿಶೇಷ:

 

ಬಸ್ ದಿನಾಚರಣೆಯಿಂದ ಒಂದು ವಾರಗಳ ಕಾಲ ಚಾಲನಾ ಸಿಬ್ಬಂದಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಖಲೇನ್ ಡಿಸಿಪ್ಲೇನ್ಖ ಬಗ್ಗೆ ಹಾಗೂ ಸಾರ್ವಜನಿಕರೊಂದಿಗೆ ಚಾಲನಾ ಸಿಬ್ಬಂದಿಗಳ ಒಡನಾಟ ಹೇಗಿರಬೇಕು ಎಂಬ ಕುರಿತು ಅರಿವು ಮೂಡಿಸುವ ಸಲುವಾಗಿ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿರುತ್ತದೆ.  ಸದರಿ ದಿನದಂದು ಸಂಸ್ಥೆಯಿಂದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಖರಸ್ತೆ ಸುರಕ್ಷತಾ ನಿರಂತರ ಅಭಿಯಾನಖ ದ ಬಗ್ಗೆ ಹಾಗೂ ಸಾರ್ವಜನಿಕ ಪ್ರಯಾಣಿಕರು ಬೆಂ.ಮ.ಸಾ.ಸಂಸ್ಥೆಯ ಸೇವೆಗಳ ಸಮರ್ಪಕ ಆಚರಣೆಗೆ ಸಹಕರಿಸಬೇಕಾದ  ಅಂಶಗಳ ಬಗ್ಗೆ ಕರಪತ್ರವನ್ನು ವಿತರಿಸಲಾಗುವುದು.

 

ಮುಂದುವರೆದು, ಈ ಬಸ್ ದಿನಾಚರಣೆಯಂದು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ನಗರ ಪ್ರದಕ್ಷಿಣೆಗಾಗಿ ಖಬೆಂಗಳೂರು ದರ್ಶಿನಿಖ ಎಂಬು ಹವಾನಿಯಂತ್ರಿತ ಸೇವೆಯನ್ನು ಆರಂಭಿಸಲಾಗಿರುತ್ತದೆ.  ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಂಡರ್ಲಾಗೆ ನಗರದ ವಿವಿಧ ಭಾಗಗಳಿಂದ ವಾರಾಂತ್ಯ ಮತ್ತು ಸಾರ್ವತ್ರಿಕ ರಜಾದಿನಗಳಂದು ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹವಾನಿಯಂತ್ರಿತ ಸೇವೆಗಳನ್ನು ಈ ಕೆಳಕಂಡ ಮಾರ್ಗಗಳಲ್ಲಿ ಆಚರಣೆ ಮಾಡಲು ಉದ್ದೇಶಿಸಲಾಗಿದೆ.

SL NO

ROUTE NO

FROM-TO

VIA

NO SCH'S

FARE

1

V-226HBL

HEBBALA-WONDARLA

KBS, MCTC, KENGERI

2

150.00

2

V-226YHK

YALAHANKA-WONDARLA

VIDYARANYPUR, BEL, YBS, VJN,CLO,MALLATTAHALLI, KHBQ,Jn OF KOMMAGATTA

1

180.00

3

V-226DML

DOMALUR-WONDARLA

RICHMOND, MYSORE BANK, KBS, MCTC, KENGERI

1

150.00

4

V-226HSR

HSR BDA COMPLEX- WONDARLA

CSB, JNR 4th BLOCK, BSK, PES, KGR

1

150.00

5

V-226ELC

ELECTRONIC CITY - WONDARLA

HOSA ROAD, CSB, BSK, PES, KGR

1

180.00

 

ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.

 

ಕನ್ನಡ