ದಿನಾಂಕ 04.05.2016 ರಂದು 76ನೇ ಬಸ್ ದಿನ ಆಚರಿಸುತ್ತಿರುವ ಬಗ್ಗೆ

ಬೆಂಗಳೂರು ನಗರದ ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಒದಗಿಸುವ ಧ್ಯೇಯ ಹೊಂದಿರುವ ಜೊತೆಗೆ ನಗರದ ಸಂಚಾರ ದಟ್ಟಣೆ ಹಾಗೂ ನಗರದ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲು ಸಂಸ್ಥೆಯಲ್ಲಿ ಪ್ರತಿ ತಿಂಗಳ 4ನೇ ದಿನವನ್ನು ಬಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿ ಖಬಸ್ ದಿನಖ ವನ್ನು ಆಚರಿಸಲಾಗುತ್ತಿದೆ.

ಇಲ್ಲಿಯವರೆಗೆ ಸಂಸ್ಥೆಯು 6 ವರ್ಷಗಳ ಬಸ್ ದಿನ ಆಚರಣೆಯನ್ನು ಯಶಸ್ವಿಯಾಗಿ ಪೂರೈಸಿ 7ನೇ ವರ್ಷದತ್ತ ಕಾಲಿಡುತ್ತಿದೆ, ಈ ಆರು ವರ್ಷಗಳಲ್ಲಿ ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಹಾಗೂ ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಬಸ್ ದಿನ ಆಚರಣೆಯು ಸಾಕಷ್ಟು ಸಹಕಾರಿಯಾಗಿರುತ್ತದೆ.  ಮೇ ಮಾಹೆಯಲ್ಲಿ ದಿನಾಂಕ: 04.05.2016 ರಂದು ಆಚರಿಸುವ ಬಸ್ ದಿನಾಚರಣೆಯು 76ನೇ ಬಸ್ ದಿನಾಚರಣೆಯಾಗಿರುತ್ತದೆ. 

ಈ ಸಂಧರ್ಭದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತುರ್ತು ಸಂಧರ್ಭದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗಲು ವೈದ್ಯಕೀಯ ಚಿಕಿತ್ಸಾ ಟಕವನ್ನು ಹಾಗೂ 24/7 108 ಆಂಬ್ಯುಲೆನ್ಸ್ ವಾಹನದ ಸೇವೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸುತ್ತಿದೆ ಮತ್ತು ಚಾಲನ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಅರಿವು ಮೂಡಿಸುವ ಸಲುವಾಗಿ ಕರಪತ್ರ ಹಂಚುವ ಮೂಲಕ ಖರಸ್ತೆ ಸುರಕ್ಷತಾ ಅಭಿಯಾನಖ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಉದ್ಾಟನಾ ಸಮಾರಂಭವನ್ನು ಶ್ರೀ ರಾಮಲಿಂಗಾರೆಡ್ಡಿ, ಸನ್ಮಾನ್ಯ ಸಾರಿಗೆ ಸಚಿವರು ಕರ್ನಾಟಕ ಸರ್ಕಾರ ಹಾಗೂ ಅಧ್ಯಕ್ಷರು ಕ.ರಾ.ರ.ಸಾ.ನಿ ರವರು ಬುಧವಾರ ದಿನಾಂಕ 04/05/2016 ರಂದು ನೆರವೇರಿಸಿದರು. 

ಸಮಾರಂಭದಲ್ಲಿ ಶ್ರೀ.ದಿನೇಶ್ ಗುಂಡೂರಾವ್, ಸನ್ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವರು, ಶ್ರೀ.ಯು.ಟಿ.ಖಾದರ್, ಮಾನ್ಯ ಆರೋಗ್ಯ ಸಚಿವರು, ಡಾ.ಉಮೇಶ್.ಜಿ.ಜಾದವ್, ಮಾನ್ಯ ಶಾಸಕರು ಹಾಗೂ ಆರೋಗ್ಯ ಇಲಾಖೆಯ ಸಂಸದೀಯ ಕಾರ್ಯದರ್ಶಿಗಳು, ಶ್ರೀ ಮಂಜುನಾಥ ರೆಡ್ಡಿ, ಪೂಜ್ಯ ಮಹಾಪೌರರು, ಬಿ.ಬಿ.ಎಂ.ಪಿ,, ಶ್ರೀಮತಿ.ಹೇಮಲತ ಗೋಪಾಲಯ್ಯ, ಮಾನ್ಯ ಉಪಮಹಾಪೌರರು, ಶ್ರೀ.ಹೆಚ್.ನಾಭಿರಾಜ ಜೈನ್, ಮಾನ್ಯ ಅಧ್ಯಕ್ಷರು, ಬಿಎಂಟಿಸಿ, ಶ್ರೀ.ವಿ.ಎಸ್.ಆರಾಧ್ಯ, ಮಾನ್ಯ ಉಪಾಧ್ಯಕ್ಷರು, ಬಿಎಂಟಿಸಿ,  ಡಾ.ಏಕ್ರೂಪ್ ಕೌರ್, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಹಾಗೂ ಇನ್ನಿತರೇ ಗಣ್ಯ ವ್ಯಕ್ತಿಗಳು ಹಾಗೂ ಆಹ್ವಾನಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ಬಾರಿಯ ಬಸ್ ದಿನಾಚರಣೆಯ ವಿಶೇಷ:-

ಮೇ ಮಾಹೆಯ 76ನೇ ಬಸ್ ದಿನಾಚರಣೆಯಂದು ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಸಂಚಾರ ಸುರಕ್ಷಾ ರಸ್ತೆ ನಿಯಮ ಪಾಲಿಸಲು ಹಾಗೂ ಪ್ರಯಾಣಿಕರಲ್ಲಿ ಸಂಸ್ಥೆಯ ಬಸ್ಸುಗಳಲ್ಲಿ ಸುರಕ್ಷತಾ ಪ್ರಯಾಣ ಮಾಡಲು ಸಂಚಾರ ನಿಯಮ ಪಾಲನೆಗಳ ಬಗ್ಗೆ ಅರಿವನ್ನು ಮೂಡಿಸಲುಹಾಗೂ ವೈಯಕ್ತಿಕ ಸಾರಿಗೆಯಿಂದ ಸಾರ್ವಜನಿಕ ಸಾರಿಗೆಯತ್ತ ಪ್ರಯಾಣಿಕರನ್ನು ಆಕರ್ಷಿಸಲುಖರಸ್ತೆ ಸುರಕ್ಷತಾ ನಿರಂತರ ಅಭಿಯಾನಖ ವನ್ನು ಕರಪತ್ರಗಳನ್ನು ವಿತರಿಸುವ ಮೂಲಕ ಈ ಬಾರಿಯ 76ನೇ ಬಸ್ ದಿನಾಚರಣೆಯನ್ನು ಬೆಳಿಗ್ಗೆ 06.00 ರಿಂದ ರಾತ್ರಿ 10.00 ರವರೆಗೆನಗರದ ಪ್ರತಿಷ್ಠಿತ ಪ್ರಮುಖ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಂಸ್ಥೆಯ ಸಿಬ್ಬಂದಿಗಳನ್ನು ನಿಯೋಜಿಸಿಹಮ್ಮಿಕೊಳ್ಳಲಾಗಿರುತ್ತದೆ.

ಇದಲ್ಲದೇ, ಕೆಂಪೇಗೌಡ ಬಸ್ ನಿಲ್ದಾಣವು 24*7 ಗಂಟೆಗಳ ಕಾಲ ಸಂಚಾರ ಹಾಗೂ ಜನ ದಟ್ಟಣೆಯಿಂದ ಕೂಡಿದ್ದು, ಅನಿರೀಕ್ಷಿತ ಅವಡಗಳು ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ ಇರುವ ಪ್ರಥಮ ಚಿಕಿತ್ಸಾ ಟಕವನ್ನು ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಬಳಸಿಕೊಳ್ಳಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊಯಲು 108 ಆಂಬ್ಯೂಲೆನ್ಸ್ನ ವ್ಯವಸ್ಥೆಯನ್ನು ಸಹ ಮಾಡಲಾಗಿರುತ್ತದೆ.

ಬೆಂ.ಮ.ಸಾ.ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ ಮಾರ್ಗಗಳ ವಿವರಗಳು ಈ ಕೆಳಕಂಡಂತಿವೆ.

  • ಪೀಣ್ಯ 2ನೇ ಹಂತದಿಂದ ಜಾಲಹಳ್ಳಿಕ್ರಾಸ್ ಬಿ.ಇ.ಎಲ್ ವೃತ್ತ, ಹೆಬ್ಬಾಳ, ಆರ್ ಟಿ ನಗರ, ಮಾರ್ಗವಾಗಿ ಮರಪ್ಪ ಗಾರ್ಡನ್ಗೆ ಮಾರ್ಗ ಸಂಖ್ಯೆ: 370-ಎಂ ಅನ್ನು ಪರಿಚಯಿಸಲಾಗಿದೆ.
  • ವೈಟ್ಫೀಲ್ಡ್ ಟಿ.ಟಿ.ಎಂ.ಸಿಯಿಂದ ಹೊಡಿ, ಹಲಸೂರು, ಶಿವಾಜಿನಗರ, ಜೆ ಸಿ ನಗರ, ಮಾರ್ಗವಾಗಿ ಮರಪ್ಪ ಗಾರ್ಡನ್ಗೆ ಮಾರ್ಗ ಸಂಖ್ಯೆ: 331ಎಂ ಅನ್ನು ಪರಿಚಯಿಸಲಾಗಿದೆ.
  • ಜಯನಗರ ಬಸ್ ನಿಲ್ದಾಣದಿಂದ ಜೆ ಪಿ ನಗರ, ಜಂಬೂಸಾವರಿ ದಿಣ್ಣೆ, ಅಂಜಾನಪುರ, ಮಾರ್ಗವಾಗಿ ಅಂಜಾನಪುರ ಬಿ ಡಿ ಎ ಬಡವಾಣೆ 10ನೇ ಬ್ಲಾಕ್ಗೆ ಮಾರ್ಗ ಸಂಖ್ಯೆ: 215ಸಿಸಿ ಅನ್ನು ಪರಿಚಯಿಸಲಾಗಿದೆ.
  • ಹೊಸಕೋಟೆಯಿಂದ ಕೆ ಆರ್ ಪುರ, ಟಿನ್ ಫ್ಯಾಟರಿ, ಮಾರ್ಗವಾಗಿ ಹೆಬ್ಬಾಳಕ್ಕೆ ಮಾರ್ಗ ಸಂಖ್ಯೆ: 500 ಹೆಚ್ಕೆ ಅನ್ನು ಪರಿಚಯಿಸಲಾಗಿದೆ.
  • ಕೆ ಆರ್ ಮಾರ್ಕೆಟ್ ನಿಂದ ಕಾರ್ಪೋರೇಷನ್, ಕೆಂಪೇಗೌಡ ಬಸ್ ನಿಲ್ದಾಣ, ಆರ್ ಎಂ ಗುಟ್ಟಹಳ್ಳಿ, ಮೇಕ್ರಿ ಸರ್ಕಲ್, ಹೆಬ್ಬಾಳ, ಮಾರ್ಗವಾಗಿ ವಿಶ್ವನಾಥ್ ನಾಗೇನಹಳ್ಳಿಗೆ ಮಾರ್ಗ ಸಂಖ್ಯೆ: 287ಡಿ ಅನ್ನು ಪರಿಚಯಿಸಲಾಗಿದೆ.

ಮೆಟ್ರೋ ಫಿಡರ್ ಸರ್ವಿಸ್:-

ನಾಯ್ಯಂಡನಹಳ್ಳಿಯಿಂದ ಬೈಯ್ಯಪ್ಪನಹಳ್ಳಿಗೆ ಮೆಟ್ರೋ ಆರಂಭವಾಗಿರುವ ಹಿನ್ನಲೆಯಲ್ಲಿ ಸಂಪರ್ಕ ಸಾರಿಗೆ ಒದಗಿಸಲು ಬೆಂಮಸಾಸಂಸ್ಥೆಯ ವತಿಯಿಂದ ಪ್ರಾಯೋಗಿಕವಾಗಿ ಈ ಕೆಳಕಂಡ ಮಾರ್ಗಗಳನ್ನು ಪರಿಚಯಿಸಲಾಗಿದೆ.

  • ಮಾರ್ಗ ಸಂಖ್ಯೆ: SVR:MF-1:-ಎಸ್ ವಿ ರೋಡ್ ಮೆಟ್ರೋ ಸ್ಟೇಷನ್ನಿಂದ ಕೆ ಆರ್ ಪುರ ರೈಲ್ವೇ ಸ್ಟೇಷನ್, ಗರುಡಾರ್ಚಾರ್ಪಾಳ್ಯ ಮಾರ್ಗವಾಗಿ ಐಟಿಪಿಎಲ್ ಗೆ 8 ಅನುಸೂಚಿಗಳನ್ನು 109 ಸುತ್ತುವಳಿಗಳೊಂದಿಗೆ ಪರಿಚಯಿಸಲಾಗಿದೆ.
  • ಮಾರ್ಗ ಸಂಖ್ಯೆ: VJN:MF-1 ಮತ್ತು VJN:MF-1:-ವಿಜಯನಗರದಿಂದ ಶ್ರೀನಿವಾಸನಗರ, ಮಳಗಾಳ, ಕೊಟ್ಟಿಗೆಪಾಳ್ಯ, ಸುಂಕದಕಟ್ಟೆ, ಮುದ್ದಯ್ಯನಪಾಳ್ಯ, ಮಲತ್ತಹಳ್ಳಿ ಕ್ರಾಸ್, ನಾಗರಭಾವಿ ಸರ್ಕಲ್, ಚಂದ್ರಲೇಔಟ್ ಮಾರ್ಗವಾಗಿ ವಿಜಯನಗರಕ್ಕೆ ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆ ಮಾರ್ಗವಾಗಿ (ರಿಂಗ್ ರೂಟ್) 8 ಅನುಸೂಚಿಗಳನ್ನು75 ಸುತ್ತುವಳಿಗಳೊಂದಿಗೆಪರಿಚಯಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರು ತಮ್ಮ ವೈಯಕ್ತಿಕ ವಾಹನವನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಕೋರಲಾಗಿದೆ.

ಮೇಲಿನ ಅಂಶಗಳನ್ನು ತಮ್ಮ ಅಮೂಲ್ಯವಾದ ದಿನಪತ್ರಿಕೆಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿ ಬಸ್ ದಿನವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

ಕನ್ನಡ