ಬೆಂಮಸಾಸಂಸ್ಥೆಯು ಆಚರಣೆ ಮಾಡುತ್ತಿರುವ ವಿವಿಧ ಸೇವೆಗಳ ದಿನದಮತ್ತು ಮಾಸಿಕ ಪಾಸುಗಳ ಪ್ರಯಾಣದರವನ್ನು ಪರಿಷ್ಕರಣೆ ಮಾಡುವ ಬಗ್ಗೆ.

 


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ : ಕೇಂದ್ರ ಕಛೇರಿ : ಬೆಂಗಳೂರು

 

ಸಂಖ್ಯೆ : ಬೆಂ.ಮ.ಸಾ.ಸಂಸ್ಥೆ : ಕೇಕ: ಸಾಸಂಇ:    : 2013-14             ದಿನಾಂಕ:07-05-2013

 

ಸಂಪಾದಕರು,

 

ಬೆಂಗಳೂರು.

 

ಮಾನ್ಯರೆ,

ವಿಷಯ:  ಬೆಂಮಸಾಸಂಸ್ಥೆಯು ಆಚರಣೆ ಮಾಡುತ್ತಿರುವ ವಿವಿಧ ಸೇವೆಗಳ

       ದಿನದಮತ್ತು ಮಾಸಿಕ ಪಾಸುಗಳ ಪ್ರಯಾಣದರವನ್ನು ಪರಿಷ್ಕರಣೆ

       ಮಾಡುವ ಬಗ್ಗೆ.

*************

ಭಾರತ ಸರ್ಕಾರವು ಇಂಧನ ದರಗಳನ್ನು ದಿನಾಂಕ 18.01.2013 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಗಟು ಖರೀದಿಗೆ ಪ್ರತಿ ಲೀಟರಿಗೆ ರೂ.12 ಹೆಚ್ಚಿಸಿದ್ದು, ಈ ಕಾರಣದಿಂದಾಗಿ ಸಂಸ್ಥೆಯು ಖಾಸಗೀ ಬಂಕುಗಳಿಂದ ಇಂದನವನ್ನು ಖರೀದಿಸುತ್ತಿದೆ. ಇದರಿಂದಾಗಿ ಸಂಸ್ಥೆಗೆ ಹೆಚ್ಚಿನ ಆಕ ಹೊರೆಯಾಗುವುದರ ಜೊತೆಗೆ ಪ್ರತಿ ಲೀಟರ್ಗೆ ಪ್ರತಿ ತಿಂಗಳಿಗೆ ರೂ.0.60 ಪೈಸೆಯಂತೆ ಹೆಚ್ಚಾಗುತ್ತಿದ್ದು, ಆರು ತಿಂಗಳಲ್ಲಿ ಪ್ರತಿ ಲೀಟರಿಗೆ ರೂ.3.60/- ರಷ್ಟು ಹೆಚ್ಚಳವಾಗುತ್ತದೆ.  ಇದರಿಂದಾಗಿ ಅವಶ್ಯಕ ವಸ್ತುಗಳಾದ ಟೈರು, ಟ್ಯೂಬು, ಲೂಬ್ರಿಕೆಂಟ್ಸ್, ಅಸೆಂಬ್ಲಿಗಳು, ಸ್ಟೀಲ್ ಮತ್ತು ಬಿಡಿಭಾಗಗಳ ದರಗಳಲ್ಲಿಯೂ ಸಹ ಗಣನೀಯ ಏರಿಯುಂಟಾಗುತ್ತಿದೆ. 

 

ಅಲ್ಲದೇ ಸಂಸ್ಥೆಯ ಸಿಬ್ಬಂದಿಗೆ  ಜನವರಿ 2013 ರಿಂದ ಶೇ.4.5 ತುಟ್ಟಿಭತ್ಯೆಯನ್ನು ನೀಡಲಾಗಿದ್ದು,  01.07.2013 ರಿಂದ ಸರ್ಕಾರವು ಜಾರಿಗೊಳಿಸುವ ತುಟ್ಟಿಭತ್ಯೆಯನ್ನು ಸಹಾ ನೀಡಬೇಕಾಗುತ್ತದೆ.  ಮುಂದುವರೆದಂತೆ, ಸಿಬ್ಬಂದಿಗಳ ಮನೆ ಬಾಡಿಗೆ ಭತ್ಯೆ ಹಾಗೂ ಸಿಬ್ಬಂದಿಗಳ ಮೂಲವೇತನಕ್ಕೆ ತುಟ್ಟಿಭತ್ಯೆಯನ್ನು ಸಹಾ ಸೇರಿಸಲಾಗಿದೆ. ಈ ಎಲ್ಲಾ ಕಾರಣದಿಂದ ಸಂಸ್ಥೆಗೆ ಹೆಚ್ಚಿ ಆಕ ಹೊರೆಯಾಗುತ್ತಿದ್ದು,ಈ ಆಕ ಹೊರೆಯ ಸ್ವಲ್ಪ ಭಾಗವನ್ನು ಸರಿದೂಗಿಸುವ ಸಲುವಾಗಿ ಬೆಂಮಸಾಸಂಸ್ಥೆಯು ದಿನಾಂಕ:11-05-2013 ರಿಂದ ಜಾರಿಗೆ ಬರುವಂತೆ ದಿನದ ಪಾಸುದರವನ್ನು ಹಾಗೂ ಜೂನ್-2013 ರಿಂದ ಜಾರಿಗೆ ಬರುವಂತೆ ಮಾಸಿಕ ಪಾಸುಗಳ ದರವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ:

ಪಾಸಿನ ವಿಧಗಳು

ಪ್ರಸ್ತುತ ದರ

ಪರಿಷ್ಕೃತ ದರ

ದಿನದ ಪಾಸು ಗುರುತಿನ ಚೀಟಿಯೊಂದಿಗೆ

ರೂ.45/-

ರೂ.55/-

ದಿನದ ಪಾಸು ಗುರುತಿನ ಚೀಟಿ ಹೊರತುಪಡಿಸಿ

ರೂ.50/-

ರೂ.60/-

 

ಮಾಸಿಕ ಪಾಸುಗಳ ದರಗಳು :-

ವರ್ಗ

ಪ್ರಸ್ತುತ ದರ

ಪರಿಷ್ಕೃತ ದರ

ಕಪ್ಪು ಹಲಗೆ

ರೂ.625/-

ರೂ.725/-

ಕೆಂಪು ಹಲಗೆ/ಪುಷ್ಪಕ್/ಸುವರ್ಣ/ಬಿಗ್-10

ರೂ.825/-

ರೂ.925/-

ಹಿರಿಯ ನಾಗರೀಕರ ಮಾಸಿಕ ಪಾಸುಗಳು

ಕಪ್ಪು ಹಲಗೆ

ರೂ.560/-

ರೂ.650/-

ಕೆಂಪುಹಲಗೆ/ಪುಷ್ಪಕ್/ಸುವರ್ಣ/ಬಿಗ್-10

ರೂ.745/-

ರೂ.830/-

 

ಮೇಲೆ ವಿವರಿಸಿದಂತೆ ಸಂಸ್ಥೆಯ ಮೇಲೆ ಬೀಳಲಿರುವ ಅಧಿಕ ಹೊರೆಯ ಸ್ವಲ್ಪ ಭಾಗವನ್ನು ಸರಿದೂಗಿಸುವ ಸಲುವಾಗಿ ಪಾಸುಗಳ ದರಪರಿಷ್ಕರಣೆಯು ಸಂಸ್ಥೆಗೆ ಅತ್ಯಗತ್ಯ ಹಾಗೂ ಅನಿವಾರ್ಯವಾಗಿರುತ್ತದೆ. ಆದ್ದರಿಂದ, ಸಾರ್ವಜನಿಕ ಪ್ರಯಾಣಿಕರು ಬೆಂ.ಮ.ಸಾ.ಸಂಸ್ಥೆಯೊಂದಿಗೆ ಸಹಕರಿಸಬೇಕೆಂದು ಹಾಗೂ ತಮಗೆ ಮತ್ತಷ್ಟು ಉತ್ತಮ ಸೇವೆಯನ್ನು ಒದಗಿಸಲು ನಿರಂತರ ಬೆಂಬಲವನ್ನು ಮುಂದುವರಿಸಬೇಕೆಂದು ಕೋರುತ್ತದೆ.

 

ಈ ಮೇಲ್ಕಂಡ ವಿಷಯವನ್ನು ತಮ್ಮ ಅಮೂಲ್ಯವಾದ ದಿನಪತ್ರಿಕೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಮಾಹಿತಿಗಾಗಿ ಪ್ರಕಟಿಸಲು ಕೋರಲಾಗಿದೆ.

 

ವಂದನೆಗಳೊಂದಿಗೆ,

        ತಮ್ಮ ವಿಶ್ವಾಸಿ,

 

 

  ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

         ಬೆಂಮಸಾಸಂಸ್ಥೆ.

 

ಕನ್ನಡ